ಮಂಗಳೂರು(ಮಾ.25): ಕೊರೋನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಅನಿವಾರ್ಯವಾಗಿ ಕಫä್ರ್ಯ ಮಾದರಿಯ ಕಠಿಣ ನಿರ್ಬಂಧಗಳನ್ನು ಸರ್ಕಾರ ಜಾರಿಗೊಳಿಸಿದ ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಹಕಾರ ಹಾಗೂ ಅವಶ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರ ಕಚೇರಿಯಲ್ಲಿ ವಾರ್‌ ರೂಂ ತೆರೆಯಲಾಗಿದೆ.

ಅನಿವಾರ್ಯ ಸಂದರ್ಭ ಜನತೆ ಮಾಹಿತಿ, ವೈದ್ಯಕೀಯ ಸೇವೆ, ಆಹಾರ ವ್ಯವಸ್ಥೆ, ಸರ್ಕಾರಿ ಸೇವೆಗಳಿಗೆ ಈ ವಾರ್‌ ರೂಂನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.

21 ದಿವಸ ಇಡೀ ದೇಶವೇ ಲಾಕ್‌ ಡೌನ್: ಏನು ಸಿಗುತ್ತೆ? ಏನು ಸಿಗೋಲ್ಲ?

ದೂರವಾಣಿ ಸಂಪರ್ಕ: ವೈದ್ಯಕೀಯ /ಆಂಬ್ಯುಲೆಸ್ಸ್‌ ಸೇವೆ: 0824-2448888, 94498 47134 (ಗುರುಚರಣ್‌), ಮಾಹಿತಿ /ಸರ್ಕಾರಿ ಸೇವೆ : 94834 96726 (ಸುಧಾಕರ್‌, ಸಂಸದರ ಕಾರ್ಯಾಲಯ ಕಾರ್ಯದರ್ಶಿ), ಮಂಗಳೂರು ಮಹಾನಗರ ಪಾಲಿಕೆ ಸೇವೆ: 98451 82462 (ದಿವಾಕರ ಪಾಂಡೇಶ್ವರ, ಮೇಯರ್‌), ಆಹಾರ ಸೇವೆ : 0824-2448888 (ಕದ್ರಿ ಮನೋಹರ ಶೆಟ್ಟಿ, ಕಾರ್ಪೊರೇಟರ್‌), ಜಿಲ್ಲಾ ಸಂಚಾಲಕರು: 94484 67540 (ನಿತಿನ್‌ ಕುಮಾರ್‌), 98440 22213 (ಸುಧೀರ್‌ ಶೆಟ್ಟಿ, ಕಾರ್ಪೊರೇಟರ್‌), ಜಿಲ್ಲಾಧಿಕಾರಿ ಕಚೇರಿ ಕಂಟ್ರೋಲ್‌ ರೂಂ : 1077.

ಯಕ್ಷ ಕಲಾವಿದರಿಗೆ ಪಟ್ಲ ಫೌಂಡೇಶನ್‌ ಸ್ಪಂದನೆ

ಮಂಗಳೂರು: ಕೊರೋನಾ ವೈರಸ್‌ನಿಂದಾಗಿ ಯಕ್ಷಗಾನ ಬಂದ್‌ ಆಗಿದ್ದರಿಂದ ಕಂಗಾಲಾಗಿರುವ ಯಕ್ಷಗಾನ ಕಲಾವಿದರ ಸಹಾಯಕ್ಕೆ ಈಗ ಪಟ್ಲ ಫೌಂಡೇಶನ್‌ ಮುಂದಾಗಿದ್ದು, ಯಕ್ಷಗಾನ ಕಲಾವಿದರ ಕುಟುಂಬದವರಿಗೆ ಸಹಕರಿಸುವ ನಿರ್ಧಾರ ಕೈಗೊಂಡಿದೆ.

ಯಾವುದೇ ಯಕ್ಷಗಾನ ಕಲಾವಿದ ಹಾಗೂ ಅವರ ಮನೆಯವರು ಹಸಿವಿನಿಂದ ಇರಬಾರದೆಂಬ ಉದ್ದೇಶದಿಂದ ತೆಂಕುತಿಟ್ಟು ಹಾಗೂ ಬಡಗುತಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿರುವ ಅಗತ್ಯವಿರುವ ಕಲಾವಿದರಿಗೆ ಆಹಾರ ಸಾಮಗ್ರಿಗಳನ್ನು (25 ಕೆಜಿ ಅಕ್ಕಿ ಹಾಗೂ ರೇಶನ್‌ ಐಟಂಗಳನ್ನು) ತಲುಪಿಸುವಂತಹ ಕಾರ್ಯವನ್ನು ಟ್ರಸ್ವ್‌ ಕೈಗೆತ್ತಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು. ಇದರ ಪ್ರಯೋಜನ ಪಡೆಯಲಿಚ್ಚಿಸುವ ಕಲಾವಿದರು ತಮ್ಮ ಹೆಸರು/ವಿಳಾಸ, ಮೊಬೈಲ್‌ ಸಂಖ್ಯೆ, ಮೇಳದ ಹೆಸರು ವಿವರಗಳೊಂದಿಗೆ ತಿಳಿಸಬಹುದಾಗಿದೆ.

ಸಂಪರ್ಕಿಸಬೇಕಾದ ಸಂಖ್ಯೆಗಳು:

ಪಟ್ಲ ಸತೀಶ್‌ ಶೆಟ್ಟಿ- 9900371441, ಪುರುಷೋತ್ತಮ ಭಂಡಾರಿ, ಪ್ರಧಾನ ಕಾರ್ಯದರ್ಶಿ- 9845172865, ಸುದೇಶ್‌ ಕುಮಾರ್‌ ರೈ, ಕೋಶಾಧಿಕಾರಿ- 8197737575 ಅವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಡಿವೈಎಫ್‌ಐನಿಂದ ಆಂಬ್ಯುಲೆನ್ಸ್‌ ಸೇವೆ

ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲು ಡಿವೈಎಫ್‌ಐ, ಇಂಡಿಯನ್‌ ರೆಡ್‌ ಕ್ರಾಸ್‌ ಸಂಸ್ಥೆಯ ಸಹಯೋಗದೊಂದಿಗೆ ಉಚಿತ ಅಂಬ್ಯುಲೆಸ್ಸ್‌ ಸೇವೆಯನ್ನು ಒದಗಿಸಲಾಗುತ್ತಿದೆ. ಈಗಾಗಲೇ ಒಬ್ಬರು ಗರ್ಭಿಣಿಯನ್ನು ಸುರತ್ಕಲ್‌ ಖಾಸಗಿ ಆಸ್ಪತ್ರೆ ಗೆ ಹಾಗೂ ಅನಾರೋಗ್ಯ ಪೀಡಿತರೊಬ್ಬರನ್ನು ನಗರದ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ. ತುರ್ತು ಸಂದರ್ಭದಲ್ಲಿ ಈ ಅಂಬ್ಯುಲೆಸ್ಸ್‌ ಸೇವೆಯನ್ನು ಪಡೆಯಲು ಡಿವೈಎಫ್‌ಐ ಪಂಜಿಮೊಗರು ಘಟಕದ ಅನಿಲ್‌- 9243306386 ಅವರನ್ನು ಸಂಪರ್ಕಿಸಬಹುದು.

ಕೊರೋನಾ ಹಾವಳಿಯಿಂದ ನಗರದ ಬಹುತೇಕ ಆಸ್ಪತ್ರೆಗಳಲ್ಲಿ ರಕ್ತದ ಅಭಾವ ಕಂಡುಬಂದಿದೆ. ರೋಗಿಗಳಿಗೆ ಅಗತ್ಯ ರಕ್ತ ಪೂರೈಸಲು ರಕ್ತದಾನಿಗಳ ಕೊರತೆ ಕಾಣುತ್ತಿದೆ. ಡಿವೈಎಫ್‌ಐ ಕಾರ್ಯಕರ್ತರು ರಕ್ತದಾನ ಮಾಡುತ್ತಿದ್ದಾರೆ. ರಕ್ತದಾನ ಮಾಡಲಿಚ್ಚಿಸುವ ಸಾರ್ವಜನಿಕರು ತಮ್ಮ ಹತ್ತಿರದ ರಕ್ತನಿಧಿಗಳಿಗೆ ತೆರಳಿ ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಬೇಕೆಂದು ಡಿವೈಎಫ್‌ಐ ಪ್ರಕಟಣೆ ತಿಳಿಸಿದೆ.