ವಿಜಯಪುರ(ಮಾ.27): ಕೊರೋನಾ ವೈರಸ್‌ ಬರು​ವು​ದಿ​ಲ್ಲ ಎಂದು ಇಡೀ ರಾತ್ರಿ​ ಎಚ್ಚ​ರ​ವಿದ್ದು ಶುಂಠಿ, ಅರಿಷಿಣ ಚಹಾ ಕುಡಿದ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡದಲ್ಲಿ ನಡೆ​ದಿದೆ.

ಹೌದು, ಅರಿಷಿಣ ಚಹಾ ಕುಡಿದರೆ ಮಹಾಮಾರಿ ಕೊರೋನಾ ಸೋಂಕು ತಟ್ಟುವದಿಲ್ಲ ಎಂಬ ಗಾಳಿಸುದ್ದಿ ಪಟ್ಟ​ಣ​ದಲ್ಲಿ ಕಾಡ್ಗಿ​ಚ್ಚಿ​ನಂತೆ ಹರ​ಡು​ತ್ತಿ​ದ್ದಂ​ತೆಯೇ ಪಟ್ಟಣದ ನಿವಾ​ಸಿ​ಗಳು ಮಂಗಳವಾರ ರಾತ್ರಿ 12ರಿಂದ ಬುಧವಾರ ಬೆಳಗಿನ ಜಾವ 4, 5 ಗಂಟೆವರೆಗೆ ಪಟ್ಟಣದ ಬಹುತೇಕ ಓಣಿ​ಗಳ ನಿವಾಸಿಗಳು ಬೆಲ್ಲದಿಂದ ಚಹಾ ಮಾಡಿ ಅದರ ಮೇಲೆ ಅರಿಷಿಣ ಪುಡಿ ಹಾಕಿಕೊಂಡು ಕುಡಿದಿದ್ದಾರೆ. ಶುಂಠಿ ಚಹಾ ಮಾಡಿ ಸೇವಿ​ಸಿ​ದ್ದಾರೆ. 

ಮಹಾಮಾರಿ ಕೊರೋನಾ ನಿಯಂತ್ರಣಕ್ಕೆ ಸರ್ಕಾರಿ ನೌಕರರಿಂದ 200 ಕೋಟಿ

ಇನ್ನು ಕೆಲ​ವರು ರಾತ್ರಿ ಮನೆಯ ಮುಂದೆ ರಂಗೋಲಿ ಹಾಕಿ, ದೀಪ ಹಚ್ಚಿ ಮನೆಯ ಮುಂದೆ ಕುಳಿತು ಚಹಾ ಕುಡಿದಿದ್ದಾರೆ. ಮಹಿ​ಳೆ​ಯರು ರಾತ್ರಿ​ಯಲ್ಲ ನಿದ್ರೆ​ಗೆಟ್ಟು ಚಹಾ ​ಮಾಡಿ ಮನೆ ಮಂದಿಗೆ ಕೊಟ್ಟಿ​ದ್ದಾ​ರೆ. ಈ ಸುದ್ದಿ ಬುಧವಾರ ಪಟ್ಟಣದಾದ್ಯಂತ ಹರಿದಾಡಿದೆ.

ಮಂತ್ರಿಗಳಿಗೆ ಕೊರೋ​ನಾ ಜತೆ ಮೋದಿ ಭಯ! ಗಡ್ಕರಿಗೆ ಪತ್ನಿಯಿಂದ ಗೃಹಬಂಧನ

ಅರಿಷಿನ ಹಾಕಿ ಚಹಾ ಕುಡಿದರೆ ನೆಗಡಿ, ಕೆಮ್ಮು ಬರುವುದಿಲ್ಲ ಮತ್ತು ಕೊರೋನಾ ರೋಗ ಕೂಡ ಬರುವುದಿಲ್ಲ ಎಂಬ ಸುದ್ದಿ ಪಟ್ಟಣದಲ್ಲಿ ಹರಿದಾಡಿದ್ದರಿಂದ ನಾವು ಕೂಡ ಬುಧ​ವಾರ ಬೆಳ​ಗಿನ ಜಾವ 4 ಗಂಟೆಗೆ ಬೆಲ್ಲದ ಚಹಾ ಮಾಡಿ ಅದರಲ್ಲಿ ಅರಿಷಿನ ಪುಡಿ ಹಾಕಿ ಸೇವೆಸಿದ್ದೇವೆ ಎಂದು ಪಟ್ಟಣದ ನಿವಾಸಿ ಬಸವರಾಜ ಹೆಳವರ ಹೇಳಿದ್ದಾರೆ.