ಕಾರವಾರ(ಮಾ.29): ಭಟ್ಕಳದ ಕೋವಿಡ್‌ 19 ಸೋಂಕಿತ ವ್ಯಕ್ತಿ ನಗರದ ಹೋಟೆಲ್‌ ಒಂದರಲ್ಲಿ ತಿಂಡಿ ತಿಂದಿರುವುದು ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮಾ. 19ರಂದು ದುಬೈನಿಂದ ವಿಮಾನ ಮೂಲಕ ಹೊರಟಿದ್ದು, 20 ರಂದು ಬೆಳಗಿನಜಾವ 4.30ಕ್ಕೆ ಗೋವಾಕ್ಕೆ ಬಂದು ಇಳಿದಿದ್ದರು. ಅಲ್ಲಿಂದ ಕಾರಿನಲ್ಲಿ ಪ್ರಯಾಣಿಸಿ 6.45ರ ವೇಳೆಗೆ ನಗರದ ಹೋಟೆಲ್‌ ಒಂದರಲ್ಲಿ ತಮ್ಮ ಸಹೋದರ ಜತೆಗೆ ತಿಂಡಿ ತಿಂದಿದ್ದಾರೆ.

ಕೊರೋನಾ ಪೀಡಿತರು ಕಾರವಾರಕ್ಕೆ ಶಿಫ್ಟ್‌!

ಹೋಟೆಲ್‌ಗೆ ಆಗಮಿಸಿದ್ದು, ಮಾಣಿ ತಿಂಡಿ ತಂದು ಇಟ್ಟಿರುವುದು, ಬಡೆಸೊಪ್ಪು ತಂದಿಟ್ಟ ಹಾಗೂ ವ್ಯಕ್ತಿ ಅಲ್ಲಿಂದ ಹೊರಟ ವಿಡಿಯೋ ವೈರಲ್‌ ಆಗಿದೆ. ಇದು ಸಿಸಿ ಟಿವಿ ವಿಡಿಯೋವಾಗಿದೆ. ಆದರೆ, ಈ ವ್ಯಕ್ತಿ ಆಗಮಿಸಿದ ವೇಳೆಗೆ ಹೆಚ್ಚಿನ ಗ್ರಾಹಕರು ಇರಲಿಲ್ಲ. ಆದರೆ, ಈ ವಿಡಿಯೋ ಕೋವಿಡ್‌ 19 ಸೋಂಕಿತ ವ್ಯಕ್ತಿಯೇ ಎನ್ನುವುದು ಖಚಿತವಾಗಬೇಕಿದೆ.