ಕೊರೋನಾ ಸೋಂಕಿತರನ್ನ ಕಾರವಾರದ ನೌಕಾನೆಲೆ ಆಸ್ಪತ್ರೆಗೆ ಆ್ಯಂಬುಲೆನ್ಸ್‌ ಮೂಲಕ ವರ್ಗಾವಣೆ| ಕೊರೋನಾ ಸೋಂಕಿತರಿಗೆ ಅಲ್ಲಿಯೇ ಚಿಕಿತ್ಸೆ| ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ಕಾರ್ಯಕರ್ತರು ಸರ್ವೇ ಮಾಡಿದ್ದು ಯಾರೂ ಜ್ವರದಿಂದ ಇಲ್ಲವೇ ಕೆಮ್ಮಿನಿಂದ ಬಳಲುತ್ತಿಲ್ಲ|

ಭಟ್ಕಳ(ಮಾ.29): ತಾಲೂಕು ಆಸ್ಪತ್ರೆಯಲ್ಲಿ ಕೊರೋನಾ ಪೀಡಿತರು ಚಿಕಿತ್ಸೆ ಪಡೆಯುತ್ತಿದ್ದು ಅವರನ್ನು ಕಾರವಾರದ ನೌಕಾನೆಲೆ ಆಸ್ಪತ್ರೆಗೆ ಆ್ಯಂಬುಲೆನ್ಸ್‌ ಮೂಲಕ ವರ್ಗಾವಣೆ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. 

ಎಲ್ಲರಿಗೂ ಅಲ್ಲಿಯೇ ಚಿಕಿತ್ಸೆ ನೀಡಲಾಗುವುದು. ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ಕಾರ್ಯಕರ್ತರು ಸರ್ವೇ ಮಾಡಿದ್ದು ಸದ್ಯ ಯಾರೂ ಜ್ವರದಿಂದ ಇಲ್ಲವೇ ಕೆಮ್ಮಿನಿಂದ ಬಳಲುತ್ತಿಲ್ಲ ಎಂದು ಹೇಳಿದ್ದಾರೆ. 

'ಕೊರೋನಾ ಆತಂಕ: ಹೆಲ್ತ್‌ ಎಮರ್ಜೆನ್ಸಿ ಪಾಲಿಸದಿದ್ರೆ ಕಠಿಣ ಕ್ರಮ'

ಯಾರೂ ಹೊರದೇಶದಿಂದ, ಹೊರ ರಾಜ್ಯ​ದಿಂದ ಬಂದಿಲ್ಲ ಎ​ನ್ನುವುದು ಮನೆ ಮನೆ ಮಾಹಿತಿ ಸಂಗ್ರಹದಿಂದ ತಿಳಿದು ಬಂದಿದೆ.