Asianet Suvarna News Asianet Suvarna News

ಕೊರೋನಾ ವೈರಸ್‌ ಸ್ವಾತಂತ್ರ್ಯ ಪೂರ್ವದಲ್ಲಿಯೇ ಇತ್ತಾ? ಶಾಸ್ತ್ರಿಗಳ ಕೃತಿಯಲ್ಲಿ ಉಲ್ಲೇಖ

ಡಾ. ಸ್ವಾಮಿ ಚಂದ್ರಶೇಖರ ಮಹಾಸ್ವಾಮೀಜಿ ಶಾಸ್ತ್ರೀಮಠ ಅವರು ಮುದ್ರಿಸಿದ ಜ್ವರ ಚಿಕಿತ್ಸೆ ಎನ್ನುವ ಪುಸ್ತಕದಲ್ಲಿ  ಕೊರೋನಾ ಪ್ರಸ್ತಾಪ| ಕಂಠರೋಹಿಣಿ ರೋಗವೆಂದು ಉಲ್ಲೇಖ| ಔಷದೋಪಚಾರದ ವಿವರಣೆಯೂ ಇದೆ|

Coronavirus mention on Book Before pre-independence times
Author
Bengaluru, First Published Mar 28, 2020, 9:43 AM IST

ಕೊಪ್ಪಳ(ಮಾ.28): ಜಿಲ್ಲೆಯ ಕುಷ್ಟಗಿ ತಾಲೂಕಿನ  ಮುದೇನೂರು ಉಮಾಚಂದ್ರಮೌಳೇಶ್ವರ ಮಠದ ಸ್ವಾಮೀಜಿಗಳಾಗಿದ್ದ ಡಾ. ಸ್ವಾಮಿ ಚಂದ್ರಶೇಖರ ಮಹಾಸ್ವಾಮೀಜಿ ಶಾಸ್ತ್ರೀಮಠ ಅವರ  1972 ರಲ್ಲಿ ಮುದ್ರಿಸಿದ ಜ್ವರ  ಚಿಕಿತ್ಸೆ ಎನ್ನುವ ಪುಸ್ತಕದಲ್ಲಿ  ಕೊರೋನಾ ಪ್ರಸ್ತಾಪವಿದ್ದು, ಪರಿಹಾರವನ್ನು ಸೂಚಿಸಿದ್ದಾರೆ.

ಸ್ವಾತಂತ್ರ್ಯಪೂರ್ವದಲ್ಲಿಯೇ ಮುಂಬೈನಲ್ಲಿ ವೈದ್ಯಕೀಯ ಪದವಿ ಅಧ್ಯಯನ ಮಾಡಿ, ಮುದೇನೂರಿನಲ್ಲಿ ಮಠದ ಸ್ವಾಮೀಜಿಯಾಗಿದ್ದುಕೊಂಡು ವೈದ್ಯಕೀಯ ಸೇವೆ ಮಾಡುತ್ತಿದ್ದರು. ವೈದ್ಯಕೀಯ ಕುರಿತು ಹತ್ತಾರು ಪುಸ್ತಕಗಳನ್ನು  ಬರೆದಿದ್ದು, ಅದರಲ್ಲಿ ಜ್ವರ ಚಿಕಿತ್ಸೆ ಎನ್ನುವ ಪುಸ್ತಕದಲ್ಲಿ ಹತ್ತಾರು  ಜ್ವರಗಳ ಮಾಹಿತಿ ನೀಡಿದ್ದಾರೆ.

Coronavirus mention on Book Before pre-independence times

ಕಂಠರೋಹಿಣಿ ಜ್ವರ

ಪುಸ್ತಕದ ಪುಟ ಸಂಖ್ಯೆ 104 ರಲ್ಲಿ  ಈ ಜ್ವರದ ಕುರಿತು ವಿವರಣೆ ನೀಡಿದ್ದಾರೆ. ಇದೊಂದು ಬಗೆಯ ಸಾಂಸರ್ಗಿಕ ಜ್ವರವು ಇದರ ದೂಷಿತ ಕೃಮಿಗಳು ವಿಶೇಷವಾಗಿ ತಂಪು ಪ್ರದೇಶದಲ್ಲಿ ಇರುವವಾಗಿವೆ. ಇವು ಬಹುಶಃ ಕಂಠದ ತ್ವಚೆಯ ಮೇಲೆ ಹೆಚ್ಚು ಪರಿಣಾಮನ್ನುಂಟು ಬೀರುವುದರಿಂದ ಇದಕ್ಕೆ ಕಂಠರೋಹಿಣಿ  ಜ್ವರವೆಂಬ ಸಂಜ್ಞೆ ಕೊಟ್ಟಿದ್ದಾಗಿ ಕಾಣುತ್ತದೆ.

14 ದಿನದ ಕ್ವಾರಂಟೈನ್‌ ಅವಧಿ ಮುಗಿದ ಮಾರನೇ ದಿನವೇ ಕೊರೋನಾ ಪತ್ತೆ!

Coronavirus mention on Book Before pre-independence times

ಈ ರೋಗವು ಹೆಚ್ಚಾಗಿ ಯೋರೋಪ ಖಂಡದಲ್ಲಿ ಇರುವುದಾಗಿದೆ.  ಆದರೂ ‘ಭಾರತದಲ್ಲಿ  ಮುಂಬೈ, ಕಲ್ಕತ್ತಾ, ಸಿಲೋನ್ ಮುಂತಾದ ಸಮುದ್ರದಂಡೆಯ  ಪ್ರದೇಶದಗಳಲ್ಲಿ ಒಮ್ಮೊಮ್ಮೆ ಹಾವಳಿ ಎದ್ದ ಬಗ್ಗೆ ಉಲ್ಲೇಖವಿದೆ. ಇದು ರೋಗವುಳ್ಳ ಇಲಿ, ಬೆಕ್ಕು, ಮುಂಗಲಿ, ಹೆಗ್ಗಣ ಇವು ತಿಂದ ಎಂಜಲು ಕಾಣುಗಳಿಂದ ದೂಷಿತ ಹಣ್ಣು, ಹಂಪಲ ಹಾಗೂ ಮೇವಾ ಮೀಠಾಯಿಗಳಿಂದಲೂ ವಿಷವೂ ಮಾನವನ ಗಂಟಲು ಸೇರಿ, ನಿಂತು ಆರೋಗವನ್ನೆಲ್ಲಾ  ವಿಕೃತಪಡಿಸುತ್ತದೆ. ಅಲ್ಲಿ ಮುಳ್ಳಿನಂತಹ ಗುಳ್ಳಿಗಳನ್ನು ಎಬ್ಬಿಸುತ್ತದೆ. ಈ ವಿಷ ಕೀಟಗಳಿಗೆ ಕ್ಲೆಬ್ ಲಾಟ್ಲೆರ್ ಬ್ಯಾಕ್ಟ್ರಿಯಾಸ್ ಎನ್ನುವ ಸಂಜ್ಞೆ  ನೀಡಿದ್ದಾರೆ.

Coronavirus mention on Book Before pre-independence times

ಗಂಟಲು ತ್ವಚೆಯ ಮೇಲೆ, ಅನ್ನನಾಳ, ಶ್ರವಣೇಂದ್ರೀಯಗಳ ಒಳಗಾಗವನು ಹೆಚ್ಚು ದಾಹಗೊಳಿಸುತ್ತದೆ. ಈ ರೋಗವೂ ಬಟ್ಟೆ ಬರಿಗಳ ಮೇಲೆಯೂ ಕಂಡು ಬರುತ್ತದೆ.  ಹವೆಯಲ್ಲಿಯೂ ಸಹಜವಾಗಿ ತಿರುಗುತ್ತವೆ.  ಪರಶಿವನ ಕಂಠವೂ ಕಾಲಕೂಟದ ಹಾಲಾಹಲದ ವಿಷದಿಂದ  ಹೇಗೆ ಬೆಂದು ಬಾಡಿ ಕಪ್ಪು ಬಣ್ಣಕ್ಕೆ ಕಾರಣವಾಯಿತೋ ಅದೇ ರೀತಿಯಾಗುತ್ತದೆ. ಮಾನವನ ಕಂಠವನ್ನೆಲ್ಲಾ ಸುಡಲು ಕಾರಣವಾಗುತ್ತದೆ.

ಲಕ್ಷಣ:

ಪ್ರಾರಂಭದಲ್ಲಿ ಮೈ ಬಿಸಿಯಾಗುತ್ತದೆ. ದೇಹವೂ ಜಡವೇನಿಸುತ್ತದೆ. ಮೂರನೇ ದಿನ ಗಂಟಲೂ ನೋಯುತ್ತದೆ. ಕಂಠದ ಸ್ನಾಯಿಗಳು ಮುದುಡುತ್ತವೆ.  ಗಂಟಲದ ಒಳಅಂಗಳ ಹುಣ್ಣಾಗುತ್ತದೆ. ಗಂಟಲು, ಅನ್ನನಾಳ, ಬಾಯಿ, ಮೂಗು ಸೇರಿದಂತೆ ಸಪ್ತಪಥಗಳು ಗಾಯಗೊಳ್ಳುತ್ತವೆ.  ಗಂಟಲು ಸುತ್ತಲಿನ ಜಾಗವೆಲ್ಲಾ ಉಬ್ಬಿ ಬೇನೆ ಬರುತ್ತದೆ.ಕೆಮ್ಮು, ತೇಕು, ಹೈತಗಿ,ತ್ವಗ್‌ರೋಗ ಇವು ಉಂಟಾಗುತ್ತವೆ. ಉಪಚಾರ ರೋಗಿಯನ್ನು ಆದಷ್ಟು  ಬೆಚ್ಚಗಿನ ಸ್ಥಳದಲ್ಲಿ ಇರಿಸಬೇಕು. ಅವನಿಗೆ  ದೂಷಿತ ಆಹಾರ, ಪೇಯೆಗಳನ್ನು ಕೊಡಬಾರದು ಎಂದು ಸಲಹೆ ನೀಡಿದ್ದಾರೆ.

Coronavirus mention on Book Before pre-independence times

ಈಗ ಬಿಕ್ಕಟ್ಟು ಸೃಷ್ಠಿಸಿರುವ ಕೊರೋನಾ ಮಹಾಮಾರಿಯ ಎಲ್ಲ ಲಕ್ಷಣಗಳು ಕಂಠರೋಹಿಣಿ ರೋಗದ ಮೂಲಕ ವಿವರಣೆ ಮಾಡುದ್ದಾರೆ. ಅಲ್ಲದೆ ಪರಿಹಾರ ಮತ್ತು ಔಷಧಿಯನ್ನು ಸಹ ತಿಳಿಸಿದ್ದಾರೆ.

ಆಗಿನ ಕಾಲದಲ್ಲಿಯೇ ವೈದ್ಯಕೀಯ ಪದವಿಯನ್ನು ಮುಂಬೈನಲ್ಲಿ ಪಡೆದಿದ್ದ ಡಾ. ಚಂದ್ರಶೇಖರ ಶಾಸ್ತ್ರಿಗಳು ಬರೆದ ಜ್ವರ ಚಿಕಿತ್ಸೆಯ ಪುಸ್ತಕದಲ್ಲಿ  ಈಗಿನ ಕೊರೋನಾ ರೋಗದ ವಿವರಣೆ ಇದೆ.  1972 ರಲ್ಲಿ ಮರು ಮುದ್ರಣಗೊಂಡಿರುವ ಈ ಪುಸ್ತದಲ್ಲಿ  ಪರಿಹಾರವನ್ನು ಸೂಚಿಸಿದ್ದಾರೆ ಎಂದು ಬೆಂಗಳೂರಿನ ಹಿರಿಯ ಅಭಿಯೋಜಕರು ಬಿ.ಎಸ್. ಪಾಟೀಲ ಹೇಳಿದ್ದಾರೆ. 
 

Follow Us:
Download App:
  • android
  • ios