ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಬೀದರ್‌ ಜಿಲ್ಲೆಗೆ ಮರಳಿದ 11 ಮಂದಿಗೆ ಕೊರೋನಾ ಸೋಂಕು ದೃಡ|ಮೌ|ಖಿಕ ಮಾಹಿತಿಯಷ್ಟೇ ಬಂದಿದ್ದು, ಅಧಿಕೃತ ವರದಿ ಇನ್ನೂ ಬಂದಿಲ್ಲ| ಬೀದರ್ ಜಿಲ್ಲೆಯಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ನಿಷೇಧಾಜ್ಞೆ ಜಾರಿ| 

ಬೀದರ್‌(ಏ.02): ದೆಹಲಿಯ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಜಿಲ್ಲೆಗೆ ಮರಳಿದ 27 ಜನರ ಪೈಕಿ 11 ಮಂದಿಗೆ ಕೊರೋನಾ ಸೋಂಕು ಇರುವುದು ಪ್ರಯೋಗಾಲಯದ ಮೊದಲ ಸುತ್ತಿನ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಆದರೆ, ಈ ಬಗ್ಗೆ ಮೌಖಿಕ ಮಾಹಿತಿಯಷ್ಟೇ ಬಂದಿದ್ದು, ಅಧಿಕೃತ ವರದಿ ಇನ್ನೂ ಬಂದಿಲ್ಲ. ಇವರಿಗೆ ಇನ್ನೂ 2 ಸುತ್ತಿನ ಪರೀಕ್ಷೆ ನಡೆಯಬೇಕಿದ್ದು, ಆ ನಂತರವಷ್ಟೇ ಸೋಂಕು ತಗುಲಿರುವ ಬಗ್ಗೆ ದೃಢವಾಗಿ ಹೇಳಲು ಸಾಧ್ಯ ಎಂದು ಬೀದರ್‌ ಜಿಲ್ಲಾಧಿಕಾರಿ ಡಾ. ಎಚ್‌.ಆರ್‌.ಮಹಾದೇವ್‌ ತಿಳಿಸಿದ್ದಾರೆ.

"

ಈ ಕುರಿತಂತೆ ‘ಕನ್ನಡಪ್ರಭ’ದ ಜತೆಗೆ ಮಾತನಾಡಿದ ಅವರು, ಮೊದಲ ಹಂತದ ಪ್ರಯೋಗದ ವರದಿಯಲ್ಲಿ ಪಾಸಿಟಿವ್‌ ಎಂದು ಮೌಖಿಕವಾಗಿ ತಿಳಿದು ಬಂದಿದೆ. ಅಧಿಕೃತ ವರದಿ ಬರಬೇಕಿರುವುದು ಬಾಕಿಯಿದೆ. ಇವರೆಲ್ಲ ದೆಹಲಿಯ ಜಮಾತ್‌ ಸಭೆಯಲ್ಲಿ ಪಾಲ್ಗೊಂಡು ವಾಪಸ್‌ ಬಂದವರು. ಅವರ ಕುಟುಂಬದವರನ್ನು ಗೃಹ ನಿರ್ಬಂಧಕ್ಕೆ ಒಳಪಡಿಸಲು ತಕ್ಷಣ ಕ್ರಮ ಕೈಗೊಳ್ಳುತ್ತಿದ್ದೇವೆ. ಜಿಲ್ಲೆಯಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ನಿಷೇಧಾಜ್ಞೆ ಜಾರಿಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ. ಒಂದು ವೇಳೆ, 11 ಮಂದಿಗೆ ಪಾಸಿಟಿವ್‌ ಬಂದುದೇ ಆದಲ್ಲಿ ರಾಜ್ಯದಲ್ಲಿ ಒಂದೇ ಬಾರಿ ಅತಿ ಹೆಚ್ಚು ಸೋಂಕು ದೃಢಪಟ್ಟ ಪ್ರಕರಣ ಇದಾಗಲಿದೆ ಎಂದು ಹೇಳಿದ್ದಾರೆ. 

'ಜೀವದ ಹಂಗು ತೊರೆದು ಕೊರೋನಾ ವಿರುದ್ಧ ವೈದ್ಯರ ಹೋರಾಟ: ಡಾಕ್ಟರ್ಸ್‌ಗೆ ಶೀಘ್ರ ಸುರಕ್ಷತಾ ಕಿಟ್‌'

"

ದೆಹಲಿಯ ಜಮಾತ್ ಸಭೆಯಲ್ಲಿ ಪಾಲ್ಗೊಂಡು ಕರೋನಾ ಪೀಡಿತನಾಗಿದ್ದ ಬೀದರ್ ವ್ಯಕ್ತಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಹೈದ್ರಾಬಾದ್ ಆಸ್ಪತ್ರೆಯಲ್ಲಿ ನಿನ್ನೆ(ಬುಧವಾರ)ರಾತ್ರಿ ನಿಧನರಾದರು ಎಂದು ಜಿಲ್ಲಾಡಳಿತದ ಮೂಲಗಳಿಂದ ತಿಳಿದು ಬಂದಿದೆ.

"

ಏಪ್ರಿಲ್ 02ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ