ವೈದ್ಯರಿಗೆ ಶೀಘ್ರ ಸುರಕ್ಷತಾ ಕಿಟ್‌: ಆರೋಗ್ಯ ಸಚಿವ ಶ್ರೀರಾಮುಲು| ರಾಜ್ಯದಲ್ಲಿ 700 ವೆಂಟಿಲೇಟರ್‌ ವ್ಯವಸ್ಥೆ| ರಾಜ್ಯಾದ್ಯಂತ ಪ್ರತಿ ಜಿಲ್ಲೆಗಳಲ್ಲಿ ಕೋವಿಡ್‌ ಆಸ್ಪತ್ರೆಗಳನ್ನಾಗಿ ಪರಿವರ್ತನೆ|

ಬಳ್ಳಾರಿ(ಏ.02): ವೈದ್ಯರಿಗೆ ಸುರಕ್ಷತಾ ಪರಿಕರಗಳ ಕೊರತೆ ಇರುವುದನ್ನು ಒಪ್ಪಿಕೊಂಡಿರುವ ಆರೋಗ್ಯ ಸಚಿವ ಬಿ.ಶ್ರೀರಾಮುಲು, ಶೀಘ್ರದಲ್ಲಿ ಅವುಗಳನ್ನು ವೈದ್ಯರಿಗೆ ಒದಗಿಸಲು ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜ್ಯಾದ್ಯಂತ ಪ್ರತಿ ಜಿಲ್ಲೆಗಳಲ್ಲಿ ಕೋವಿಡ್‌ ಆಸ್ಪತ್ರೆಗಳನ್ನಾಗಿ ಪರಿವರ್ತಿಸಿ ವ್ಯವಸ್ಥೆ ಮಾಡಲಾಗಿದೆ. 7 ರಿಂದ 8 ಸಾವಿರ ಬೆಡ್‌ ಸಿದ್ಧವಾಗಿವೆ. ರಾಜ್ಯದಲ್ಲಿ ಸುರಕ್ಷತಾ ಪರಿಕರಗಳ ಕಿಟ್‌(ಪಿಪಿಇ)ಗಳ ಕೊರತೆಯಾಗುವುದು ನಿಜ. ಈ ವಿಷಯ ನಮ್ಮ ಗಮನದಲ್ಲಿದ್ದು, ಆದಷ್ಟು ಶೀಘ್ರ ವೈದ್ಯರಿಗೆ ಈ ಸುರಕ್ಷತಾ ಪರಿಕರ ಕಿಟ್‌ ಒದಗಿಸಿಕೊಡಲಾಗುತ್ತದೆ ಎಂದು ಹೇಳಿದರು.

ಕೊರೋನಾ ಆತಂಕ: ಕೊಪ್ಪಳ ಜಿಲ್ಲಾಸ್ಪತ್ರೆ ಕೋವಿಡ್‌- 19ಕ್ಕೆ ಮೀಸಲು

700 ವೆಂಟಿಲೇಟರ್‌ ವ್ಯವಸ್ಥೆ: 

ರಾಜ್ಯದಲ್ಲಿ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳು ಸೇರಿ 700 ವೆಂಟಿಲೇಟರ್‌ಗಳು ನಮ್ಮಲ್ಲಿವೆ. 350 ವೆಂಟಿಲೆಟರ್‌ಗಳ ಖರೀದಿಗೆ ಆರ್ಡರ್‌ ನೀಡಲಾಗಿದೆ. ಅವುಗಳು ಬಂದಿರಬಹುದು, ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.