ಪ್ರಧಾನಿ ನರೇಂದ್ರ ಮೋದಿ ಅವರೇ ಇಡೀ ದೇಶದ ಲಾಕ್ ಡೌನ್ ಗೆ ಕರೆ ಕೊಟ್ಟಿದ್ದಾರೆ. ಅದಕ್ಕೆ ಕಾರಣ ಕೊರೋನಾ ಎಂಬ ಮಹಾಮಾರಿ. ಆದರೆ ನಮ್ಮ ಕೆಲ ಜನರಿಗೆ ಬುದ್ಧಿ ಬೇಕಲ್ಲ. ಮನೆಯೊಳಗೆ ಇರಿ ಎಂದು ಪರಿಪರಿಯಾಗಿ ಬೇಡಿಕೊಂಡರೂ ಕೆಲವರು ಮಾತ್ರ ಸಿಕ್ಕಿದ್ದೆ ಅವಕಾಶ ಎಂದು ಬೀದಿ ಬೀದಿ ತಿರುಗುತ್ತಲೇ ಇದ್ದಾರೆ.

ತಿರುಗಿದ್ದಕ್ಕೆ ಅವರಿಗೆ ತಕ್ಕ ಶಿಕ್ಷೆಯೂ ಆಗಿದೆ. ಪೊಲೀಸರಿಂದ ಲಾಠಿ ಏಟು ಬಿದ್ದಿದೆ. ಗಾಡಿಯೂ ಸ್ಟೇಶನ್ ಸೇರಿದೆ. ಸೋಶಿಯಲ್ ಡಿಸ್ಟಂಸಿಂಗ್ ಫಾಲೋ ಮಾಡಿ ಎಂದು ಬಡಕೊಂಡರೂ ನಮ್ಮ ಜನ ಸುಲಭಕ್ಕೆ ಕೇಳಬೇಕಲ್ಲ.

ಚೀನಾ ಹೇಳಿದ ಸತ್ಯ ಕೇಳಿ ಹೌಹಾರಿದ ವಿಶ್ವ!

ಆದರೆ ಈ ಶ್ವಾನಗಳನ್ನು ನೋಡಿ. ನಾಯಿ ನಿಯತ್ತಿಗೆ ಹೆಸರಾದ ಪ್ರಾಣಿ.  ಶ್ವಾನಗಳು ಸೈನ್ಯದಲ್ಲಿ, ಬಾಂಬ್ ಸ್ಕಾಡ್ ನಲ್ಲಿಯೂ ಕೆಲಸ ಮಾಡಿ ಶಿಸ್ತಿಗೂ ಹೆಸರು. ಇಲ್ಲಿ ನೋಡಿ ಎಷ್ಟು ಶಿಸ್ತಾಗಿ ಸೋಶಿಯಲ್ ಡಿಸ್ಟಂಸಿಂಗ್ ಫಾಲೋ ಮಾಡಿವೆ.

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಪೋಟೋ ಪುಕ್ಕಟೆ ತಿರುಗಾಡುವ ಮಂದಿಯ ಮುಖಕ್ಕೆ ಹೊಡೆದಂತೆ ಇದೆ. ನಾಯಿಗೆ ಇರುವ ಸಾಮಾನ್ಯ ಜ್ಞಾನವೂ ಪುಕ್ಕಟೆ ಬೀದಿ ಅಲೆಯುವ ಪುಂಡರಿಗೆ ಇಲ್ಲವಾಯಿತಲ್ಲ!