ಮಂಡ್ಯ(ಮಾ.27) : ಕೊರೊನ ಭೀತಿಯಿಂದಾಗಿ ರಾಜ್ಯದೆಲ್ಲೆಡೆ ಸಂತೆ, ಜಾತ್ರೆ ಹಾಗೂ ದೇವರ ಉತ್ಸವಗಳನ್ನು ಸರ್ಕಾರವೇ ಒಂದೆಡೆ ಮುಂದೂಡುತ್ತಿದೆ. ಮತ್ತೊಂದೆಡೆ ಮೇಲುಕೋಟೆ ವೈರಮುಡಿ ಉತ್ಸವವನ್ನು ಮುಂದೂಡುವಂತೆ ಗ್ರಾಮಸ್ಥರು ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ. 

ಯುಗಾದಿ ನಂತ್ರ ದಿಢೀರ್ ಹೆಚ್ಚಿದ ಶಂಕಿತರ ಸಂಖ್ಯೆ: ಮೈಸೂರಿನಲ್ಲಿ 1122 ಮಂದಿ ಮೇಲೆ ನಿಗಾ..

ಮೇಲುಕೋಟೆ ವೈರಮುಡಿ ಉತ್ಸವವನ್ನು ಸಾಂಕೇತಿಕ ಮತ್ತು ಸಂಪ್ರದಾಯವಾಗಿ ಆಚರಿಸಿದರೂ ಸಹ ಆ ಸಂದರ್ಭದಲ್ಲಿ 100ಕ್ಕಿಂತ ಹೆಚ್ಚು ಜನರು ಸೇರುತ್ತಾರೆ. ಇದು ಕೂಡ 144 ಉಲ್ಲಂಘನೆಯಾಗಲಿದೆ. ಹೀಗಾಗಿ ಏಪ್ರಿಲ್ 2 ರಂದು ನಡೆಯಲಿರುವ ಸಾಂಕೇತಿಕ ಕಿರೀಟಧಾರಣೆ ಮಹೋತ್ಸವ ಸೇರಿದಂತೆ ಮಾರ್ಚ್ 28ರಂದು ಆರಂಭಗೊಳ್ಳುವ ಇಡೀ ವೈರಮುಡಿ ಜಾತ್ರಾಮಹೋತ್ಸವ ಮುಂದೂಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಕೊರೋನಾ ಕಾಟ: 110 ಗ್ರಾಮಗಳಲ್ಲಿ ಬೇರೆ ಊರಿನ ಜನರಿಗೆ ನಿಷೇಧ.

ಈ ಸಂಬಂಧ ಜಿಲ್ಲಾಧಿಕಾರಿಗೆ ಬರೆದಿರುವ ಪತ್ರವನ್ನು ಮೇಲುಕೋಟೆ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ನಾಗರೀಕರು ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಗೆ ಶುಕ್ರವಾರ ಬೆಳಗ್ಗೆ ಸಲ್ಲಿಸಿದರು. 

ದೇವಾಲಯ ಅನುಸರಿಸುತ್ತಿರುವ ಪೂಜಾ ಪದ್ಧತಿ ಈಶ್ವರ ಸಂಹಿತೆಯ ಪುಟ ಸಂಖ್ಯೆ 633 ಮತ್ತು 644 ರ ಪ್ರಕಾರ ಕ್ಷಾಮ ಹಾಗೂ ಸಂಕಷ್ಟದ ಸಮಯದಲ್ಲಿ ನಿಗದಿತ ಬ್ರಹ್ಮೋತ್ಸವವನ್ನು ಮುಂದೂಡಲು ಅವಕಾಶ ನೀಡಲಾಗಿದೆ. ಹೀಗಾಗಿ ವೈರಮುಡಿ ಉತ್ಸವವನ್ನು ಮುಂದೂಡಲು ಯಾವುದೇ ನಿರ್ಬಂಧಗಳಿಲ್ಲ. ಇದರಿಂದ ಮಾರ್ಚ್ 28 ರಿಂದ ಆರಂಭಗೊಳ್ಳಬೇಕು ಆಗಿರುವ ಇಡೀ ವೈರಮುಡಿ ಬ್ರಹ್ಮೋತ್ಸವ ವನ್ನು ಮುಂದೂಡಬೇಕು ಎಂದು ಒತ್ತಾಯಿಸಿದ್ದಾರೆ.