ಉಡುಪಿ(ಮಾ.28): ಕೊರೋನಾ ವೈರಸ್‌ ಹಾವಳಿಯಿಂದಾಗಿ ಸಂಪಾದನೆ ಇಲ್ಲದೆ, ಕೈಯಲ್ಲಿ ಇರುವ ಹಣವೆಲ್ಲಾ ಖರ್ಚಾಗಿ ಜನರೆಲ್ಲ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದಂತೆ ಉಡುಪಿ ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕಿಶನ್‌ ಹೆಗ್ಡೆ ಕೊಳ್ಕೆಬೈಲು ತಮ್ಮಿಂದಾದ ಸಹಾಯಕ್ಕೆ ಮುಂದಾಗಿದ್ದಾರೆ.

ಅವರು ಮಾಲೀಕರಾಗಿರುವ ಬ್ರಹ್ಮಾವರ ಸಮೀಪದ ಸಾಯ್ಬರಕಟ್ಟೆಯ ಕೆ.ಆರ್‌. ಹೆಗ್ಡೆ ಕಾಂಪ್ಲೆಕ್ಸ್‌ನ ಎಲ್ಲ ಅಂಗಡಿಗಳ 1 ತಿಂಗಳ ಬಾಡಿಗೆ ಮೊತ್ತ 1.10 ಲಕ್ಷ ರು.ಗಳನ್ನು ಮನ್ನಾ ಮಾಡಿದ್ದಾರೆ.

ಉಡುಪಿ ಲಾಕ್‌ಡೌನ್‌: ಕುಡಿಯೋಕೆ ಮದ್ಯ ಸಿಗದೆ ವ್ಯಕ್ತಿ ಆತ್ಮಹತ್ಯೆ

ಈ ಅಂಗಡಿಗಳು ಈಗಾಗಲೇ ವಾರದಿಂದ ಮುಚ್ಚಿದ್ದು, ನಷ್ಟದಲ್ಲಿವೆ. ಈ ನಷ್ಟದ ಸಂದರ್ಭದಲ್ಲಿ ಅವರ ಬಾಡಿಗೆಯನ್ನು ಮನ್ನಾ ಮಾಡುತ್ತಿರುವುದಾಗಿ ಕಿಶನ್‌ ಹೆಗ್ಡೆ ತಿಳಿಸಿದ್ದಾರೆ. ಈಗಾಗಲೇ ಉಡುಪಿ ಸಂಪೂರ್ಣ ಲಾಕ್‌ಡೌನ್ ಆಗಿದ್ದು, ನಿತ್ಯದ ವಹಿವಾಟುಗಳಿಗೆ ಭಾರೀ ಹೊಡೆತ ಬಿದ್ದಿದೆ.