ಬೆಂಗಳೂರು(ಮಾ.26): ಮಹಾಮಾರಿ ಕೊರೋನಾ ವೈರಸ್‌ ಸೋಂಕು ಹರಡುವಿಕೆ ತಡೆಗಟ್ಟಲು ಶ್ರಮಿಸುತ್ತಿರುವ ವೈದ್ಯಕೀಯ ಕ್ಷೇತ್ರದ ಸಿಬ್ಬಂದಿಗೆ ತಮ್ಮ ಮನೆಗಳನ್ನು ಖಾಲಿ ಮಾಡಲು ಮನೆ ಮಾಲೀಕರು ಒತ್ತಾಯಿಸುತ್ತಿವಂತಿಲ್ಲ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ. 

ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ಸಾರ್ವಜನಿಕ ಸೇವೆ ಮಾಡುವವರ ಕರ್ತವ್ಯಕ್ಕೆ ಅಡ್ಡಿಪಡಿಸುವಂತಹ ಗಂಭೀರ ಸ್ವರೂಪದ ಅಪರಾಧವಾಗುತ್ತದೆ. ಹೀಗಾಗಿ ಮನೆಗಳ ಮಾಲೀಕರು ಯಾವುದೇ ಕಾರಣಕ್ಕೂ ಮನೆ ಖಾಲಿ ಮಾಡುವಂತೆ ಒತ್ತಾಯಿಸುವಂತಿಲ್ಲ ಎಂದು ಮನೆ ಓನರ್‌ಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. 

ಕೊರೋನಾ ಭೀತಿ: ಡಾಕ್ಟರ್‌ಗಳಿಗೆ ಜಾಗವಿಲ್ಲ, ಮನೆ ಓನರ್‌ಗಳ ಕಿರಿಕ್!

 

ವೈದ್ಯಕೀಯ ಕ್ಷೇತ್ರದ ಸಿಬ್ಬಂದಿಗಳಿಗೆ ನಮ್ಮ ಮನೆಗಳಲ್ಲಿ ಜಾಗ ನೀಡೋದಿಲ್ಲ ಹೀಗಾಗಿ ಮನೆಗಳನ್ನ ಖಾಲಿ ಮಾಡಿ ಎಂದು ಮನೆ ಮಾಲೀಕರು ಒತ್ತಾಯ ಮಾಡಿದ್ದರು. ಈ ಸಂಬಂಧ ವೈದ್ಯಕೀಯ ಕ್ಷೇತ್ರದ ಸಿಬ್ಬಂದಿಗಳು ಸರ್ಕಾರಕ್ಕೆ ದೂರೊಂದನ್ನ ನೀಡಿದ್ದರು. ದೂರಿಗೆ ಸ್ಪಂದಿಸಿದ ಸಿಎಂ ಯಡಿಯೂರಪ್ಪ ಮನೆ ಖಾಲಿ ಮಾಡುವಂತೆ ಒತ್ತಾಯ ಮಾಡುತ್ತಿರುವ ಮನೆ ಮಾಲೀಕರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.