ಚಿಕ್ಕಮಗಳೂರು(ಮಾ.29): ಈ ಮಾರ್ಚ್ ತಿಂಗಳು ಮುಕ್ತಾಯಗೊಳ್ಳಲು ಇನ್ನು ಮೂರೇ ದಿನ ಬಾಕಿ. ಈ ಮಾಹೆ ಮುಗಿಯುತ್ತಿದ್ದಂತೆ ಮನೆ ಬಾಡಿಗೆ ಕಟ್ಟಬೇಕು. ಇದು, ಬಹಳಷ್ಟುಮಂದಿಗೆ ದೊಡ್ಡ ತಲೆನೋವಾಗಿದೆ.

ಕೊರೋನಾ ವೈರಸ್‌ನಿಂದ ಲಾಕ್‌ ಡೌನ್‌ ಆಗಿದ್ದರಿಂದ ಎಲ್ಲೂ ಕೆಲಸಕ್ಕೆ ಹೋಗಲು ಆಗುತ್ತಿಲ್ಲ. ಜೀವನ ನಿರ್ವಹಣೆ ಕಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮನೆ ಬಾಡಿಗೆ ಕಟ್ಟುವುದು ಹೇಗೆಂಬ ಸಂಕಟ ಎದುರಾಗಿದೆ. ಆದರೆ, ಇಲ್ಲಿನ ಮೂಡಿಗೆರೆ ತಾಲೂಕಿನ ಕಳಸದ ಶ್ರೀಕಾಂತ್‌ ಹಾಗೂ ಅವರ ಸಹೋದರರು ಬಾಡಿಗೆದಾರರಿಗೆ ಬಾಡಿಗೆ ಕಟ್ಟುವಲ್ಲಿ ವಿನಾಯಿತಿ ನೀಡಿದ್ದಾರೆ.

ಕೊರೋನಾ ಪೀಡಿತರು ಕಾರವಾರಕ್ಕೆ ಶಿಫ್ಟ್‌!

ಕಳಸದಲ್ಲಿ 3 ಮಳಿಗೆ ಹಾಗೂ ಬೆಂಗಳೂರಿನ ಎಲ್‌.ಎನ್‌. ಪುರ ದೇವಿಪಾರ್ಕ್ನಲ್ಲಿ 6 ಅಂಗಡಿ ಮಳಿಗೆ, 4 ಮನೆಗಳನ್ನು ಹೊಂದಿದ್ದಾರೆ. ಈ ತಿಂಗಳು ಯಾರಿಂದಲೂ ಬಾಡಿಗೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿರುವ ಪ್ರಕಾಶ್‌ ಅವರು, ಪ್ರಧಾನಿ ಮೋದಿ ಅವರ ಕರೆಯನ್ನು ಬೆಂಬಲಿಸಿ, ಬಾಡಿಗೆಯನ್ನು ಒಂದು ತಿಂಗಳು ಪಡೆಯದಿರಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.