ಬೆಂಗಳೂರು(ಮಾ.31): ಕೊರೋನಾ ಲಾಕ್‌ಡೌನ್‌ನಿಂದ ಸಮಸ್ಯೆ ಎದುರಿಸುತ್ತಿರುವ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಸಾರ್ವಜನಿಕರ ನೆರವಿಗೆ ಧಾವಿಸಿರುವ ಶಾಸಕ ಬೈರತಿ ಸುರೇಶ್‌ ಸ್ವಂತ ಹಣದಲ್ಲಿ 100 ಟನ್‌ ಗೋಧಿ, ಸಕ್ಕರೆ ಹಾಗೂ ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳನ್ನು ಮನೆ-ಮನೆಗೆ ತಲುಪಿಸುವ ಕಾರ್ಯಕ್ಕೆ ಸೋಮವಾರ ಚಾಲನೆ ನೀಡಿದ್ದಾರೆ.

ಅಲ್ಲದೆ, ಕೊರೋನಾ ಸೋಂಕು ತಡೆಯಲು ಸಾರ್ವಜನಿಕರಿಗೆ ಸಾವಿರಾರು ಮಾಸ್ಕ್‌, ಸ್ಯಾನಿಟೈಸರ್‌ ವಿತರಣೆ ಮಾಡಿದ್ದಾರೆ. ಬಿಬಿಎಂಪಿ ಸಹಾಯದಿಂದ ವಿಧಾನಸಭಾ ಕ್ಷೇತ್ರಾದ್ಯಂತ ವೈರಾಣು ನಿವಾರಕ ದ್ರಾವಣ ಸಿಂಪಡಣೆ ಕಾರ್ಯ ಮಾಡಿದ್ದಾರೆ.

ಎಚ್ಚರ.. ಕೊರೋನಾ ಸುಳ್ಳು ಸುದ್ದಿ ಹಬ್ಬಿಸಿದ ಕಾರ್ಪೋರೇಟರ್ ಪತಿ ಅಂದರ್!

ಸೋಮವಾರ ನೂರಾರು ಸ್ವಯಂ ಸೇವಕರ ತಂಡದ ನೇತೃತ್ವ ವಹಿಸಿ 50ಕ್ಕೂ ಹೆಚ್ಚು ಟಾಟಾ ಏಸ್‌ ವಾಹನಗಳ ಮೂಲಕ ಮನೆ-ಮನೆಗೂ ಸಕ್ಕರೆ, ಗೋಧಿ, ಅಕ್ಕಿಯುಳ್ಳ ಅಗತ್ಯ ವಸ್ತುಗಳ ಚೀಲಗಳನ್ನು ಸರಬರಾಜು ಮಾಡಿದರು. ಅಲ್ಲದೆ, ಸಾವಿರಾರು ಮಂದಿಗೆ ಮಾಸ್ಕ್‌, ಸ್ಯಾನಿಟೈಸರ್‌ ವಿತರಿಸಿದರು.

ಯಾರೇಳಿದ್ದು ಗಡಿ ಬಂದ್ ಮಾಡಿದ್ದಾರೆ ಅಂಥ, ಅರಣ್ಯದಲ್ಲಿ ಹರಿದ ಮದ್ಯದ ಹೊಳೆ!

ಈ ವೇಳೆ ಮಾತನಾಡಿದ ಸುರೇಶ್‌, ಈ ಸೋಂಕು ನಿಯಂತ್ರಿಸಲು ಸಾರ್ವಜನಿಕರು ಮನೆಯಲ್ಲೇ ಇದ್ದು ಸಹಕಾರ ನೀಡಬೇಕು. ದವಸ ಧಾನ್ಯ ಇಲ್ಲದೆ ಸಾರ್ವಜನಿಕರು ಪರದಾಡಬಾರದು ಎಂಬ ಉದ್ದೇಶದಿಂದ ಸ್ವಂತ ಹಣದಲ್ಲಿ 100 ಟನ್‌ ಗೋಧಿ, ಸಕ್ಕರೆ ಹಾಗೂ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಲಾಕ್‌ಡೌನ್‌ನ ಮೊದಲ ದಿನವೇ ವಿತರಣೆ ಮಾಡಲು ಪ್ರಯತ್ನಿಸಿದರೂ ಇಷ್ಟುದೊಡ್ಡ ಪ್ರಮಾಣದ ಧವಸ ಧಾನ್ಯ ದಾಸ್ತಾನು ಮಾಡಲು ಸಮಯಾವಕಾಶ ಬೇಕಾಯಿತು ಎಂದು ಹೇಳಿದರು.