Asianet Suvarna News Asianet Suvarna News

ಎಚ್ಚರ.. ಕೊರೋನಾ ಸುಳ್ಳು ಸುದ್ದಿ ಹಬ್ಬಿಸಿದ ಕಾರ್ಪೋರೇಟರ್ ಪತಿ ಅಂದರ್!

ಕೊರೋನಾ ವೈರಸ್ ಇದೆ ಎಂದು ಸುಳ್ಳು ಸುದ್ದಿ ಹರಡಿದ್ದ ಕಾರ್ಪೋರೇಟರ್ ಪತಿ ಬಂಧನ/ ಸೋಶಿಯಲ್ ಮೀಡಿಯಾ ಮೂಲಕ ಸುಳ್ಳು ಸುದ್ದಿ ರವಾನೆ/ ಅಮರನಾಥನ ಬಂಧಿಸಿದ ಯಲಹಂಕ ಪೊಲೀಸರು

Bengaluru Corporator husband arrested for spreading fake news on covid 19
Author
Bengaluru, First Published Mar 30, 2020, 10:50 PM IST

ಬೆಂಗಳೂರು(ಮಾ. 30)  ಕೋರೋನಾ ಬಗ್ಗೆ ಸುಳ್ಳು ಸುದ್ದಿ ಹರಡಿ ಕಾರ್ಫೋರೇಟರ್ ಪತಿ ಅಂದರ್ ಆಗಿದ್ದಾನೆ.  ಯಲಹಂಕ ಪೊಲೀಸರಿಂದ ಕಾರ್ಪೋರೇಟರ್ ಪದ್ಮಾವತಿ ಪತಿ ಅಮರ್ ನಾಥ್ ಬಂಧನವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬನಿಗೆ ಕೊರೋನಾ ಇದೆ ಎಂದು ವದಂತಿ ಹಬ್ಬಿಸಿದ್ದ ಅಮರ್ ನಾಥ್ ಇದೀಗ ಪೊಲೀಸರ ಕಸ್ಟಡಿಯಲ್ಲಿ ಇದ್ದಾನೆ.

ಚೌಡೇಶ್ವರಿ ವಾರ್ಡ್ 2 ರ ಕಾರ್ಫೋರೇಟರ್ ಪದ್ಮಾವತಿ ಪತಿ ಈ ಅಮರ್ ನಾಥ್ ಬಂಧನವಾಗಿದೆ.  ಜನಪ್ರತಿನಿಧಿಯ ಗಂಡ ಎಂಬುದನ್ನೂ ಮರೆತು ಪುಂಡು-ಪೋಕರಿಗಳಂತೆ ಸುಳ್ಳು ಸುದ್ಧಿ ಹರಿಬಿಟ್ಟ ವಿಕೃತಿ ಮೆರೆದಿದ್ದಕ್ಕೆ ಇದೀಗ ವಿಚಾರಣೆ ಎದುರಿಸಬೇಕಾಗಿ ಬಂದಿದೆ. ಅಮರ್ ನಾಥ್ ವಿರುದ್ಧ ಐಪಿಸಿ ಸೆಕ್ಷನ್ 153, 188, 504 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಸದ್ಯಕ್ಕೆ ಅರೆಸ್ಟ್ ಮಾಡಿ ಯಲಹಂಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಯಾರೇಳಿದ್ದು ಗಡಿ ಬಂದ್ ಮಾಡಿದ್ದಾರೆ ಅಂಥ, ಅರಣ್ಯದಲ್ಲಿ ಹರಿದ ಮದ್ಯದ ಹೊಳೆ!

ಕೊರೋನಾ ಆತಂಕ ಇಡೀ ಪ್ರಪಂಚ ಕಾಡುತ್ತಿದೆ. ದಯವಿಟ್ಟು ಎಲ್ಲರೂ ಜಾಗೃತರಾಗಿರಿ, ಸ್ವಚ್ಛತೆಗೆ ವಿಶೇಷ ಗಮನ ನೀಡಿ, ಸುಳ್ಳು ಸುದ್ದಿ ಹರಬೇಡಿ ಎಂದು ಕೇಳಿಕೊಂಡಿದ್ದರೂ ಈ ರೀತಿಯ ಬೆಳವಣಿಗೆ ನಡೆದಿರುವುದು ನಿಜಕ್ಕೂ ಆತಂಕಕಾರಿ. ಸೋಶಿಯಲ್ ಮೀಡಿಯಾದ ಕಣ್ಣಿಡುವಾಗ ಒಂಚೂರು ಪರಾಮರ್ಶೆಗೆ ಒಳಪಡಿಸುವುದು ಒಳಿತು.

 

Follow Us:
Download App:
  • android
  • ios