ಮಂಗಳೂರು(ಮಾ.24): ಎಸ್‌ಡಿಟಿಯು ನೇತೃತ್ವದ ಸೋಶಿಯಲ್‌ ಡೆಮೋಕ್ರೆಟಿಕ್‌ ಆಟೋ ಚಾಲಕರ ಯೂನಿಯನ್‌ ಪುತ್ತೂರು ತಾಲೂಕು ಸಮಿತಿ ವತಿಯಿಂದ ಕೊರೋನಾ ವೈರಾಣು ಹರಡುವುದನ್ನು ತಡೆಗಟ್ಟಲು ‘ಬ್ರೇಕ್‌ ದ ಚೈನ್‌’ ಆಂದೋಲನ ಅಂಗಾಗಿ ನಗರದ ಗಾಂಧಿಕಟ್ಟೆಮತ್ತು ದರ್ಬೆ ಜಂಕ್ಷನ್‌ನಲ್ಲಿ ಶನಿವಾರ ಕೈ ಮುಖ ಶುಚಿಗೊಳಿಸಲು ಬೇಸನ್‌ ಅಳವಡಿಸಲಾಯಿತು.

ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ಅಶ್ರಫ್‌ ಬಾವು ಗಾಂಧಿ ಕಟ್ಟೆಬಳಿ ಅಳವಡಿಸಲಾದ ಬೇಸಿನ್‌ ಉದ್ಘಾಟಿಸಿದರು. ಸಿವಿಲ್‌ ಇಂಜಿನಿಯರ್‌ ಕಬೀರ್‌ ಬಡಕ್ಕೋಡಿ ದರ್ಬೆ ಜಂಕ್ಷನ್‌ನಲ್ಲಿ ಅಳವಡಿಸಲಾದ ಬೇಸಿನ್‌ ಉದ್ಘಾಟಿಸಿದರು.

ಕೊರೋನಾಕ್ಕೆ ಕೇರಳ ಸವಾಲು, ಬ್ರೇಕ್ ದಿ ಚೈನ್..ನಾವಿರ್ತೇವೆ ಮಾಮೂಲು!

ಈ ಸಂದರ್ಭ ಎಸ್‌ಡಿಟಿಯು ತಾಲೂಕು ಅಧ್ಯಕ್ಷ ಅಬ್ದುಲ್‌ ಹಮೀದ್‌ ಸಾಲ್ಮರ ಮಾತನಾಡಿದರು. ಇ- ಫ್ರೆಂಡ್ಸ್‌ ಪುತ್ತೂರು ಅಧ್ಯಕ್ಷ ದಂತ ವೈದ್ಯ ಡಾ. ಸರ್ಫರಾಜ್‌ ಕೊರೋನಾ ವೈರಸ್‌ ಬಗ್ಗೆ ಜಾಗೃತಿ ಮೂಡಿಸಿದರು.

ಈ ಸಂದರ್ಭ ಪಿಸಿ ಪೈ ಪೆಟ್ರೋಲಿಯಂ ಮಾಲೀಕ ಕೇಶವ ಪೈ, ಎಸ್‌ಡಿಟಿಯು ಪುತ್ತೂರು ತಾಲೂಕು ಅಧ್ಯಕ್ಷ ಶಮೀರ್‌ ನಾಜೂಕು ಕೂರ್ನಡ್ಕ, ಪಿಎಫ್‌ಐ ಪುತ್ತೂರು ಸಿಟಿ ಡಿವಿಷನ್‌ ಅಧ್ಯಕ್ಷ ಉಮ್ಮರ್‌ ಕೆ. ಎಸ್‌., ಕಾರ್ಯದರ್ಶಿ ಬಾತಿಶ್‌ ಬಡಕ್ಕೋಡಿ, ಅಲಿ ನಾಜೂಕು, ಬಶೀರ್‌ ಬಡಕ್ಕೋಡಿ, ಹಮೀದ್‌ ಕೆ. ಎಸ್‌. ಸುಲೈಮಾನ್‌ ಉರಿಮಜಲು, ಉಮ್ಮರ್‌ ಸಂಪ್ಯ, ಮಹಮ್ಮದ್‌ ಕುಂಞಿ ಬಾಬಾ ಮತ್ತಿತರರು ಉಪಸ್ಥಿತರಿದ್ದರು.