ಸುಡು ಬಿಸಿಲಿನಲ್ಲಿ ಕೊರೋನಾ ಮಾರಿ ತಡೆಗಾಗಿ ಜನಸಂಚಾರ, ವಾಹನ ಸಂಚಾರ ತಡೆಗೆ ಶ್ರಮಿಸುತ್ತಿರುವ ಪೊಲೀಸ್‌ ಸಿಬ್ಬಂದಿಗೆ ವಿದ್ಯಾರ್ಥಿಯೊಬ್ಬ ಸ್ವತಃ ಮನೆಯಲ್ಲಿ ನಿಂಬೆಹಣ್ಣು ಜ್ಯೂಸ್‌ ಮಾಡಿಕೊಂಡು ಸೈಕಲ್‌ನಲ್ಲಿ ನಗರದಾದ್ಯಂತ ಪೊಲೀಸರಿಗೆ ವಿತರಿಸುವ ಮೂಲಕ ದೇಶ ಪ್ರೇಮ ಮೆರೆದಿದಾನೆ. 

ಕೋಲಾರ(ಮಾ.29): ಸುಡು ಬಿಸಿಲಿನಲ್ಲಿ ಕೊರೋನಾ ಮಾರಿ ತಡೆಗಾಗಿ ಜನಸಂಚಾರ, ವಾಹನ ಸಂಚಾರ ತಡೆಗೆ ಶ್ರಮಿಸುತ್ತಿರುವ ಪೊಲೀಸ್‌ ಸಿಬ್ಬಂದಿಗೆ ವಿದ್ಯಾರ್ಥಿಯೊಬ್ಬ ಸ್ವತಃ ಮನೆಯಲ್ಲಿ ನಿಂಬೆಹಣ್ಣು ಜ್ಯೂಸ್‌ ಮಾಡಿಕೊಂಡು ಸೈಕಲ್‌ನಲ್ಲಿ ನಗರದಾದ್ಯಂತ ಪೊಲೀಸರಿಗೆ ವಿತರಿಸುವ ಮೂಲಕ ದೇಶ ಪ್ರೇಮ ಮೆರೆದಿದಾನೆ.

ನಗರದ ತೇರಹಳ್ಳಿ ಬೆಟ್ಟದ ನಿವಾಸಿ ಆನಂದ್‌ ಹೊಸಕೋಟೆಯ ವಿವೇಕಾನಂದ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಾನೆ. ಇದೀಗ ಶಾಲೆಗೆ ರಜೆ ನೀಡಿರುವುದರಿಂದ ಈತ ತನ್ನೂರಾದ ತೇರಹಳ್ಳಿಗೆ ಬಂದಿದ್ದು, ಈತ ಬಿಸಿಲಿನಲ್ಲಿ ಶ್ರಮಿಸುತ್ತಿರುವ ಪೊಲೀಸ್‌ ಸಿಬ್ಬಂದಿಗೆ ನಿಂಬೆ ಹಣ್ಣಿನ ಜೂಸ್‌ ಮಾಡಿ ಹಂಚುವ ಕೆಲಸವನ್ನು ಮಾಡಿ ಮೆಚ್ಚುಗೆ ಗಳಿಸಿದ್ದಾನೆ.

ಚೀನಾ ಭಾರತಕ್ಕೆ ಕೊಟ್ಟ ಕೊರೋನಾ ಟೆಸ್ಟಿಂಗ್ ಕಿಟ್ ಅಸಲಿಯಲ್ಲ, ನಕಲಿ! ಇದೆಂಥಾ ಮೋಸ?

ಲಾಕ್‌ಡೌನ್ ಹಿನ್ನಲೆಯಲ್ಲಿ ಹಗಲಿರುಳು ಪೊಲೀಸರು ಕರ್ತ್ಯ ನಿರ್ವಹಿಸುತ್ತಿದ್ದು, ಕೊರೋನಾ ವೈರಸ್ ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದರೆ. ಇವರಿಗೆ ನಿಂಬೆ ಹಣ್ಣಿನ ಜ್ಯೂಸ್ ಹಂಚಿದ್ದು, ಇದರಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚಿದೆ.