ಮೈಸೂರು(ಮಾ.27): ಜಗತ್ತನ್ನೇ ಕಾಡುತ್ತಿರುವ ಮಹಾಮಾರಿ ಕೊರೋನಾ ವೈರಸ್‌ ನಿರ್ಮೂಲನೆಗೆ ನಾನು ಮತ್ತು ನಮ್ಮ ಸ್ನೇಹಿತರು ಔಷಧಿ ಕಂಡು ಹಿಡಿದಿರುವುದಾಗಿ ಪಟ್ಟಣದ ಮೂಳೆತಜ್ಞ ಡಾ.ಮೆಹಬೂಬ್‌ಖಾನ್‌ ಹೇಳಿದ್ದಾರೆ.

ವೈರಸ್‌ ತಗುಲಿರುವ ಇಬ್ಬರು ರೋಗಿಗಳನ್ನು ಜಿಲ್ಲಾಡಳಿತ ನಮ್ಮ ಬಳಿ ಕರೆದುಕೊಂಡು ಬಂದರೆ ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ಮೂರರಿಂದ ಐದು ದಿನಗಳಲ್ಲಿ ಗುಣಪಡಿಸುವುದಾಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮಹಾಮಾರಿ ಕೊರೋನಾ ಹರಡೋಣ ಬನ್ನಿ ಎಂದು ಕರೆ ಕೊಟ್ಟ ಟೆಕ್ಕಿ!

ಹನೂರು ತಾಲೂಕಿನ ಆರ್‌.ಎಸ್‌. ದೊಡ್ಡಿ ಗ್ರಾಮದ ಗ್ರಾಮದ ಆರ್‌. ನದೀಮ್‌ಖಾನ್‌ ಮತ್ತು ರಿಯಾಜ್‌ಖಾನ್‌ ಹಾಗೂ ಕೊಳ್ಳೇಗಾಲ ಸಮೀಪದ ಮಲ್ಲನಕಟ್ಟೆಯ ಇಬ್ರಾಹಿಂಷಾ ಖಾದ್ರಿ ಅವರ ಜತೆ ಸೇರಿ ದೇಶೀಯವಾಗಿ ದೊರೆಯುವ ಗಿಡಮೂಲಿಕೆಯಿಂದ ಔಷಧಿ ಕಂಡು ಹಿಡಿದಿರುವುದಾಗಿ ಅವರು ಹಸಿರು ಔಷಧವನ್ನು ಪ್ರದರ್ಶಿಸಿದರು. ನಾನು ಪ್ರಚಾರಕ್ಕಾಗಿ ಈ ಹೇಳಿಕೆ ನೀಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಟೆಕ್ಕಿ ತಂದ ಆತಂಕ: ವಿದೇಶದಿಂದ ಆಗಮಿಸಿದ್ದ ವಿಚಾರ ಮುಚ್ಚಿಟ್ಟು ಚಿಕಿತ್ಸೆ ಪಡೆದಿದ್ದ!

ಕೇಂದ್ರ ಮತ್ತು ರಾಜ್ಯ ಸರ್ಕಾರದವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಈಗಾಗಲೇ ಐದು ಮಂದಿಗೆ ಸಾಕಾಗುವಷ್ಟು ಔಷಧಿ ತಮ್ಮ ಬಳಿ ಇದೆ ಎಂದು ಮಾಹಿತಿ ನೀಡಿದರು.