ಬೆಂಗಳೂರು, (ಏ.07):  ಐತಿಹಾಸಿಕ ಬೆಂಗಳೂರು ಕರಗಕ್ಕೆ ಕರ್ನಾಟಕ ಹೈಕೋರ್ಟ್ ಬೇಕ್ ಹಾಕಿದೆ. ಈ ವರ್ಷ ಕರಗ ಮಾರ್ಚ್ 31ರಿಂದ ಏಪ್ರಿಲ್ 9ರ ತನಕ 11 ದಿನಗಳ ಕಾಲ ನಡೆಯಬೇಕಿತ್ತು.

ಈಗಾಗಲೇ ನಿನ್ನೆ (ಸೋಮವಾರ) ಕರಗ ಐದು ಜನರ ಸಮ್ಮುಖದಲ್ಲಿ ಆರಂಭವಾಗಿದೆ. ಆದರೆ, ಮುಂದುವರಿಸಲು ಇದೀಗ ಹೈ ಕೋರ್ಟ್ ಬ್ರೇಕ್ ಹಾಕಿದೆ.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಮೊನ್ನೆ ಅಷ್ಟೇ ಉನ್ನತ ಮಟ್ಟದ ಸಭೆ ನಡೆಸಿ, ಬೆಂಗಳೂರು ಐತಿಹಾಸಿಕ ಕರಗವನ್ನು ಸರಳವಾಗಿ ನಡೆಸಲು ತೀರ್ಮಾನ ಕೈಗೊಳ್ಳಲಾಗಿತ್ತು. 

ಕೊರೋನಾ ಆತಂಕದ ನಡುವೆಯೂ ಬೆಂಗಳೂರು ಕರಗಕ್ಕೆ ಸಿದ್ಧತೆ!

ಈ ಕುರಿತಂತೆ ಮಾಧ್ಯಮಗಳ ವರದಿಯ ಅನುಸಾರ ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮದ್ಯಪ್ರವೇಶಿಸಿದ್ದು, ನಾಳೆ ಐತಿಹಾಸಿಕ ಬೆಂಗಳೂರು ಕರಗ ನಡೆಸಲು ಸರ್ಕಾರ ಅನುಮತಿ ನೀಡಿದ್ಯಾ ಎಂಬುದಾಗಿ ಪ್ರಶ್ನಿಸಿದ್ದಾರೆ. 

ಅಲ್ಲದೇ ಲಾಕ್ ಡೌನ್ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದ್ದಾರೆ.ಲಾಕ್‌ಡೌನ್ ಆಗಿನಿಮದಲೂ ಕರಗ ನಡೆಸಬೇಕೋ ಬೇಡವೋ ಎನ್ನುವ ಬಗ್ಗೆ ಬಿಬಿಎಂಪಿ ಯೋಚಿಸಿತ್ತು.

ಒಂದು ಬಾರಿ ಕರಗ ನಡೆಸಲು ನಿಷೇಧಿಸಿತ್ತು.ಬಳಿಕ ನಡೆಸಲು ಗ್ರೀನ್ ಸಿಗ್ನಲ್ ನೀಡಲಾಗಿತ್ತು. ಇದೀಗ ಹೈಕೋರ್ಟ್‌ ಮಧ್ಯೆ ಪ್ರವೇಶಿಸಿ ಯಾವುದೇ ಕಾರಣಕ್ಕೂ ಕರಗ ನಡೆಯಬಾರದು ಎಂದು ಹೇಳಿದೆ.