Asianet Suvarna News Asianet Suvarna News

ಭಾರತ್‌ ಲಾಕ್‌ಡೌನ್‌: 'ವೈದ್ಯಕೀಯ ತುರ್ತು ಸೇವೆಗೆ ಹೊಯ್ಸಳ ವಾಹನ ಬಳಸಿ'

ಬೆಂಗಳೂರು ನಗರ ಪೊಲೀಸ್‌ ವಿಭಾಗದಲ್ಲಿ 250 ಹೊಯ್ಸಳ ವಾಹನಗಳಿವೆ| ಜನರಿಗೆ ತುರ್ತು ವೈದ್ಯಕೀಯ ಸೇವೆಗಳಿಗೆ ಲಭ್ಯವಿದ್ದು, ಸಾರ್ವಜನಿಕರು ಬಳಸಿಕೊಳ್ಳಬಹುದು| ಹೊಯ್ಸಳ ವಾಹನಗಳು ಟ್ಯಾಕ್ಸಿಗಳಲ್ಲ ಎಂದ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಎಸ್‌. ಭಾಸ್ಕರ್‌ರಾವ್‌|

Bengaluru City Police Commissioner Bhaskar Rao Says public can use Hoysala vehicles For Medical Emergency service
Author
Bengaluru, First Published Apr 3, 2020, 7:46 AM IST
  • Facebook
  • Twitter
  • Whatsapp

ಬೆಂಗಳೂರು(ಏ.03): ಪ್ರಸ್ತುತ ಲಾಕ್‌ಡೌನ್‌ ಜಾರಿ ಇರುವ ಸಂದರ್ಭದಲ್ಲಿ ತುರ್ತು ವೈದ್ಯಕೀಯ ಸೇವೆಗಳಿಗೆ ಸಾರ್ವಜನಿಕರು ಹೊಯ್ಸಳ ವಾಹನಗಳನ್ನು ಬಳಸಿಕೊಳ್ಳಬಹುದು ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಎಸ್‌. ಭಾಸ್ಕರ್‌ರಾವ್‌ ತಿಳಿಸಿದ್ದಾರೆ.

ನಗರ ಪೊಲೀಸ್‌ ವಿಭಾಗದಲ್ಲಿ 250 ಹೊಯ್ಸಳ ವಾಹನಗಳಿವೆ. ಅವು ಜನರಿಗೆ ತುರ್ತು ವೈದ್ಯಕೀಯ ಸೇವೆಗಳಿಗೆ ಲಭ್ಯವಿದ್ದು, ಸಾರ್ವಜನಿಕರು ಬಳಸಿಕೊಳ್ಳಬಹುದು. ಆದರೆ ಹೊಯ್ಸಳ ವಾಹನಗಳು ಟ್ಯಾಕ್ಸಿಗಳಲ್ಲ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಕಳ್ಳರಿಗೂ ಕೊರೋನಾ ಭೀತಿ: ನಿಯಂತ್ರಣಕ್ಕೆ ಬಂದ ಕೊಲೆ, ಕಳ್ಳತನ, ದರೋಡೆ!

ವೈದ್ಯಕೀಯ ಚಿಕಿತ್ಸೆಗೆ ನೆರವು ಕೋರಿ ನಮ್ಮ-100 ಗೆ ಕರೆಗಳು (ಪೊಲೀಸ್‌ ನಿಯಂತ್ರಣ ಕೊಠಡಿ) ಬರುತ್ತಿವೆ. ಈಗಾಗಲೇ 1400 ಕರೆಗಳನ್ನು ಸ್ವೀಕರಿಸಿದ್ದು, ಅವುಗಳನ್ನು ಪರಿಹರಿಸಲಾಗಿದೆ. ಡಯಾಲಿಸಿಸ್‌ ಹಾಗೂ ಹೃದ್ರೋಗ ಸೇರಿದಂತೆ ತುರ್ತು ವೈದ್ಯಕೀಯ ಚಿಕಿತ್ಸೆಗಳಿಗೆ ಆಸ್ಪತ್ರೆಗೆ ತೆರಳಲಿರುವ ಜನರನ್ನು ಪಿಕ್‌ ಆ್ಯಂಡ್‌ ಡ್ರಾಪ್‌ ಮಾಡಲಾಗುತ್ತದೆ. ಹೊಯ್ಸಳ ವಾಹನಗಳು ರೋಗಿಗಳಿಗೆ ಮಾತ್ರ ಸೀಮಿತವಾಗಿವೆ ಎಂದು ಆಯುಕ್ತರು ತಿಳಿಸಿದ್ದಾರೆ.
 

Follow Us:
Download App:
  • android
  • ios