ಆನೇಕಲ್‌(ಮಾ.25): ಬಮೂಲ್‌ ವ್ಯಾಪ್ತಿಯ ಎಲ್ಲ ನಂದಿನಿ ಪಾರ್ಲರ್‌ಗಳನ್ನು ದಿನದ 12 ಗಂಟೆ ತೆರೆದಿರುವಂತೆ ಸೂಚನೆ ನೀಡಲಾಗುವುದು. ಗ್ರಾಹಕರಿಗೆ ಸಮರ್ಪಕವಾಗಿ ಲಭ್ಯವಾಗುವಂತೆ ಕ್ರಮಕೈಗೊಳ್ಳಲಾಗಿದೆ ಎಂದು ಬಮೂಲ್‌ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದ್ದಾರೆ.

‘ಕನ್ನಡಪ್ರಭ’ ಜೊತೆ ಮಾತನಾಡಿದ ಅವರು, ನಗರದಲ್ಲಿ ಪ್ರತಿದಿನ 9 ಲಕ್ಷ ಲೀಟರ್‌ ಹಾಲು ಹಾಗೂ 1.50 ಲಕ್ಷ ಲೀಟರ್‌ ಮೊಸರು ಪೂರೈಕೆ ಮಾಡಲಾಗುತ್ತಿದೆ. ಮಂಗಳವಾರ ಒಂದೇ ದಿನದಲ್ಲಿ 50 ಸಾವಿರ ಲೀಟರ್‌ ಹಾಲು ಹೆಚ್ಚುವರಿಯಾಗಿ ಮಾರಾಟವಾಗಿದೆ. ಹೀಗಾಗಿ ಬೇಡಿಕೆ ಹೆಚ್ಚಿದಂತೆ ಹಾಲು ಪೂರೈಕೆ ಮಾಡಲು ಬಮೂಲ್‌ ಸಿದ್ಧವಿದೆ. ಗ್ರಾಹಕರಿಗೆ ಅನುಕೂಲ ಆಗುವಂತೆ ಬೆಳಗ್ಗೆಯಿಂದ ಸಂಜೆವರೆಗೆ ಅಂದರೆ ದಿನದ 12 ಗಂಟೆ ಎಲ್ಲ ನಂದಿನಿ ಪಾರ್ಲರ್‌ಗಳು ತೆರೆದಿರುವಂತೆ ಏಜೆಂಟರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಕೊರೋನಾ ಕಾಟಕ್ಕೆ ಕಂಗಾಲಾದ ದಿನಗೂಲಿಗಳು: 'ತಿನ್ನಲು ಆಹಾರ ಸಿಗದೆ ಸಾಯುತ್ತೇವೆ ಅನಿಸುತ್ತಿದೆ'

ಯಾರು ಕೂಡ ನಂದಿನಿ ಹಾಲನ್ನು ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಕೊಟ್ಟು ಖರೀದಿಸಬಾರದು. ಒಂದು ವೇಳೆ ಏಜೆಂಟರು ಅಥವಾ ಇತರರು ನಿಗದಿತ ದರಕ್ಕಿಂತ ಅಧಿಕ ಬೆಲೆಗೆ ಹಾಲು ಮಾರಾಟ ಮಾಡುವುದು ಕಂಡು ಬಂದರೆ ಬಮೂಲ್‌ಗೆ ದೂರು ಸಲ್ಲಿಸಬೇಕು ಎಂದು ಹೇಳಿದ್ದಾರೆ.