ಬೆಂಗಳೂರು(ಮಾ.29): ಕೊರೋನಾ ಎಂಬ ಮಹಾಮಾರಿಗೆ ವಿಶ್ವವೇ ತತ್ತರಿಸುತ್ತಿರುವ ಸಂದರ್ಭ ಪುಟ್ಟ ಬಾಲಕನೊಬ್ಬ ಹೇಳಿದ ಭವಿಷ್ಯವಾಣಿ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಪ್ರಸ್ತುತ ಆತನ ಹೆಸರು ದಿಢೀರ್ ಸದ್ದು ಮಾಡುತ್ತಿರುವುದು ಆತ ಹೇಳಿದ ಭವಿಷ್ಯದಿಂದ. 

ವಾಸ್ತುಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ತಿಳಿದಿರುವ, ಸ್ಪಷ್ಟವಾಗಿ ಸಂಸ್ಕೃತ ಮಾತನಾಡುವ ಈ ಬಾಲಕನಿಗೆ 2015ರಲ್ಲಿಯೇ ರಾಜ್ಯ ಪ್ರಶಸ್ತಿಯೂ ಬಂದಿತ್ತು. ಕೊರೋನಾ ಎಂಬ ಕಣ್ಣಿಗೆ ಕಾಣದ ವೈರಸ್ ಬಗ್ಗೆ ಈ ಬಾಲಕ ಈ ಹಿಂದೆಯೇ ಭವಿಷ್ಯ ಹೇಳಿದ್ದರಿಂದ ಅಭಿಗ್ಯ ಆನಂದ್ ಎಂಬ ಈ ಬಾಲಕ ಸದ್ಯ ಸುದ್ದಿಯಲ್ಲಿದ್ದಾನೆ.

ಹಲವಾರು ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ಹರಿಯಬಿಡುವ ಈ ಬಾಲಕ 2019ರ ಆಗಸ್ಟ್‌ನಲ್ಲಿ ಒಂದು ಮಾಹಿತಿ ಹಂಚಿಕೊಂಡಿದ್ದ. 2019ರ ನವೆಂಬರ್‌ನಲ್ಲಿ ಜಗತ್ತಿಗೇ ಆಪತ್ತು ಎದುರಾಗುತ್ತದೆ. 2020ರ ತನಕವೂ ವಿಶ್ವದ ದೇಶಗಳೆಲ್ಲವೂ ದೊಡ್ಡ ಕಂಟಕವನ್ನು ಎದುರಿಲಿವೆ ಎಂದು ಈ ಬಾಲಕ ಭವಿಷ್ಯ ನುಡಿದಿದ್ದ. ಕಳೆದ ನವೆಂಬರ್‌ನಿಂದ ಚೀನಾದಲ್ಲಿ ಆರಂಭವಾದ ಕೊರೋನಾ ಕಾಟ ಈಗ ಜಗತ್ತನ್ನೇ ಪೀಡಿಸುತ್ತಿದೆ.

ಈ ಸಂದರ್ಭದಲ್ಲಿ ಅಭಿಗ್ಯ ಆನಂದ್‌ ಭವಿಷ್ಯ ನಿಜಾಯ್ತು ಎಂದು ಅನಿಸಿದರೆ ಅದು ತಪ್ಪಲ್ಲ. ಮಾರ್ಚ್ ಕೊನೆಯ ಹಂತ ಅಥವಾ ಎಪ್ರಿಲ್ ಆರಂಭದಲ್ಲಿ ಬಹು ದೊಡ್ಡ ವಿಪತ್ತು ಎದುರಾಗಲಿದೆ. ಆಗ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಾಗುತ್ತದೆ ಎಂದೂ ಈ ಬಾಲಕ ಎಚ್ಚರಿಸಿದ್ದ.

ಲಾಕ್‌ಡೌನ್‌: ಗಗನಕ್ಕೇರಿದ ತರಕಾರಿ ಬೆಲೆ

ಇಂತಹದೊಂದು ಎಚ್ಚರಿಕೆಯ ಭವಿಷ್ಯ ಹೇಳಿದ್ದ ಅಭಿಗ್ಯ ಈ ಕಂಟಕ ಯಾವಾಗ ಪರಿಹಾರವಾಗಲಿದೆ ಎಂಬುದನ್ನೂ ತಿಳಿಸಿದ್ದ. ಮೇ 29ರ ಸಮಯದಲ್ಲಿ ರೋಗದ ಪ್ರಭಾವ ಇಳಿಯುತ್ತದೆ. ಆಗ ಅದನ್ನು ಸಂಭಾಳಿಸುವುದು ಸಾಧ್ಯವಾಗಲಿದೆ ಎಂದು ಆತ ನುಡಿದಿದ್ದ. ಮಾರ್ಚ್ 31ರಂದು ವಾತಾವರಣದ ತೇವಾಂಶ ಹೆಚ್ಚಾಗಿ ಶೀತ, ಕೆಮ್ಮು ವ್ಯಾಪಕವಾಗಿ ಕಾಯಿಲೆ ಇನ್ನಷ್ಟು ಗಂಭೀರ ಹಂತಕ್ಕೆ ತಲುಪಲಿದೆ ಎಂದೂ ನುಡಿದಿದ್ದಾನೆ.

ಜೂನ್‌ವರೆಗೆ ಉಳಿಯಲಿದ್ಯಂತೆ ಕೊರೋನಾ: ಜ್ಯೋತಿಷಿ ಏನ್ ಹೇಳಿದ್ರು ಕೇಳಿ