ಬೆಂಗಳೂರು, (ಮಾ.29): ಕರ್ನಾಟಕದಲ್ಲಿ ಇದುವರೆಗೆ ಮತ್ತೆ 7 ಕೊರೋನಾ ವೈರಸ್ ಕೇಸ್‌ಗಳು ದೃಢವಾಗಿವೆ. ಈ ಮೂಲಕ ಒಟ್ಟು 83 ಜನರಿಗೆ ಸೋಂಕು ತಗುಲಿದಂತಾಗಿದೆ.

ಈ ಬಗ್ಗೆ ರಾಜ್ಯ ಆರೋಗ್ಯ ಕಲ್ಯಾಣ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸಿದೆ. ಇದರಲ್ಲಿ 3 ಜನರು ಸಾವನ್ನಪ್ಪಿದ್ರೆ, ಇನ್ನು ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 

ಕರ್ನಾಟಕದಲ್ಲಿ ಶನಿವಾರ ಒಂದೇ ದಿನ 12 ಕೊರೋನಾ: ಇಲ್ಲಿದೆ ಜಿಲ್ಲಾವಾರು ಮಾಹಿತಿ..!

ನಿನ್ನೆ ಅಂದ್ರೆ ಶನಿವಾರ ಒಂದೇ ದಿನ 12 ಜನರಿಗೆ ಸೋಂಕು ತಗುಲಿ ಒಟ್ಟು 76 ಕೊರೋನಾ  ಕೇಸ್‌ಗಳು ದಾಖಲಾಗಿದ್ದವು. ಆದ್ರೆ, ಭಾನುವಾರ ಏಳು ಸೋಂಕಿತರು ಪತ್ತೆಯಾಗಿದ್ದು, ಅದು 83ಕ್ಕೆ ಏರಿಕೆಯಾಗಿದೆ.

ಹಾಗಾದ್ರೆ ಯಾವ-ಯಾವ ಜಿಲ್ಲೆಗಳಲ್ಲಿ ಎಷ್ಟು ಕೊರೋನಾ ದೃಢವಾಗಿವೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ ನೋಡಿ.

ಬೆಂಗಳೂರು- 41
ಚಿಕ್ಕಬಳ್ಳಾಪುರ-8
ಮೈಸೂರು-8
ದಕ್ಷಿಣ ಕನ್ನಡ-7
ಉತ್ತರ ಕನ್ನಡ-7
ಕಲಬುರಗಿ-3
ದಾವಣಗೆರೆ-3
ಉಡುಪಿ-3
ಕೊಡಗು-1
ಧಾರವಾಡ-1
ತುಮಕೂರು-1
ಒಟ್ಟು 83