ಧಾರವಾಡ(ಏ.03): ಲಾಕ್‌ಡೌನ್‌ ಉಲ್ಲಂಘಿಸಿ ಇಲ್ಲಿನ ಬಾರಾ ಇಮಾಮಗಲ್ಲಿಯ ಇರ್ಫಾನ್‌ ಬೆಳಗಾಂವಕರ್‌ ಮನೆ ಆವರಣದಲ್ಲಿ ಯುವಕರು ಸಾಮೂಹಿಕವಾಗಿ ಮಟನ್‌ ಬಿರಿಯಾನಿ ಸೇವಿಸಿ ಜನ್ಮದಿನದ ಪಾರ್ಟಿ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಐವರನ್ನು ಬಂಧಿಸಲಾಗಿದೆ.

ಇರ್ಫಾನ್‌ ಬೆಳಗಾಂಕರ್‌(31), ಅಸ್ಪಾಕ್‌ ಗೋಡಿ(35), ವಾಸೀಂ ಬಾಂದಾರ(18), ಅರ್ಬಾಜ್‌ ಪಠಾಣ(18) ಹಾಗೂ ಅಸ್ಲಾಂ(28) ಎಂಬವರನ್ನು ಗುರುವಾರ ಶಹರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಹಾಲಮ್‌, ತನ್ವೀರ್‌, ಮಲ್ಲೀಕ್‌, ಶನಿವುಲ್ಲಾ ಬಳ್ಳಾರಿ, ಇರ್ಷಾದ ಪರಾರಿಯಾಗಿದ್ದಾರೆ.

'ಕೊರೋನಾ ವಿಚಾರದಲ್ಲೂ ಬಿಜೆಪಿ ರಾಜಕೀಯ ಮಾಡ್ತಿದೆ'

ಈಗಾಗಲೇ ಕೊರೋನಾ ಭೀತಿ ಹೆಚ್ಚಾಗಿದ್ದು, ಜನರು ಮನೆಯಿಂದ ಹೊರಬರದಂತೆ ಆದೇಶ ನೀಡಲಾಗಿದೆ. ಹಾಗಿದ್ದರೂ, ಜನ ಮಾತ್ರ ಇದನ್ನು ಉಲ್ಲಂಘಿಸಿ ಬೇಕಾಬಿಟ್ಟಿ, ಅನಗತ್ಯವಾಗಿ ತಿರುಗುತ್ತಿರುವುದು ಅಪಾಯಕಾರಿ.