Asianet Suvarna News Asianet Suvarna News

ಗದಗ: 47 ವರದಿಗಳು ನೆಗೆಟಿವ್‌, ನಿಟ್ಟು​ಸಿ​ರು ಬಿಟ್ಟ ಜನತೆ!

80 ವರ್ಷದ ವೃದ್ಧೆಗೆ ಕೊರೋನಾ ಸೋಂಕು ದೃಢ| ವೃದ್ಧೆಯ ಪ್ರಾಥ​ಮಿಕ ಹಾಗೂ ದ್ವಿತೀಯ ಹಂತದ ಸಂಪ​ಕ​ರ್‍ದಲ್ಲಿದ್ದ ಎಲ್ಲ 47 ಜನರ ಪರೀಕ್ಷೆ ವರ​ದಿ​ ನೆಗೆಟಿವ್| ವೃದ್ಧೆಗೆ ಚಿಕಿತ್ಸೆ ನೀಡಿದ 7 ಜನ ವೈದ್ಯ ಸಿಬ್ಬಂದಿಗಳು ಸೇರಿ 42 ಮತ್ತು ಇನ್ನುಳಿದ 5 ಪ್ರಕರಣಗಳ ವರದಿಯ ನೆಗೆಟಿವ್‌|

47 Coronavirus Negative Cases in Gadag district
Author
Bengaluru, First Published Apr 9, 2020, 10:01 AM IST

ಗದಗ(ಏ.09): ಕೊರೋನಾ ಸೋಂಕು ದೃಢ​ಪ​ಟ್ಟ 80 ವರ್ಷದ ವೃದ್ಧೆಯ ಪ್ರಾಥ​ಮಿಕ ಹಾಗೂ ದ್ವಿತೀಯ ಹಂತದ ಸಂಪ​ರ್ಕದಲ್ಲಿದ್ದ ಎಲ್ಲ 47 (ಇ​ನ್ನು​ಳಿದ 5 ಪ್ರಕ​ರಣ ಸೇರಿ​) ಜನರ ಗಂಟಲು ದ್ರವ ಹಾಗೂ ರಕ್ತ ಪರೀಕ್ಷೆ ವರ​ದಿ​ಗಳು ನೆಗೆ​ಟಿವ್‌ ಬಂದಿದ್ದು, ಗದ​ಗ-ಬೆಟ​ಗೇರಿ ಅವಳಿ ನಗರ ಸೇರಿ ಜಿಲ್ಲೆಯ ಜನತೆ ನಿಟ್ಟು​ಸಿ​ರು ಬಿಟ್ಟಿ​ದೆ.

ಯಾವುದೇ ವಿದೇಶ ಪ್ರಯಾಣದ ಕುಟುಂಬಸ್ಥರಾಗಲಿ ಅಥವಾ ದೆಹಲಿಯ ಧಾರ್ಮಿಕ ಕಾರ್ಯಕ್ರಮದ ಯಾವುದೇ ಸಂಪರ್ಕವಿಲ್ಲದ 80 ವರ್ಷದ ವೃದ್ಧೆಗೆ ಮಂಗಳವಾರ ಕೊರೋನಾ ಪಾಜಿಟಿವ್‌ ಆಗುವ ಮೂಲಕ ಜಿಲ್ಲೆ ಮಾತ್ರ ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು.

ಯಾವುದೇ ಲಿಂಕ್‌ ಇಲ್ಲದ ಗದಗದ 80ರ ಅಜ್ಜಿಗೆ ಕೊರೋನಾ! 3ನೇ ಹಂತಕ್ಕೆ ಕರ್ನಾಟಕ?

ಏ. 7ರ ಮಂಗಳವಾರ ಕಳುಹಿಸಲಾಗಿದ್ದ ಒಟ್ಟು 49 ಗಂಟಲು ದ್ರವ್ಯ ಮಾದರಿಗಳಲ್ಲಿ 2 ತಿರಸ್ಕೃತಗೊಂಡಿದ್ದು, ಉಳಿದ 47 ಪ್ರಕರಣಗಳ ವರದಿ ನಕಾರಾತ್ಮಕವಾಗಿವೆ. ಇದರಲ್ಲಿ ಪಿ-166 ಜೊತೆಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 35 ಜನ ಹಾಗೂ ಚಿಕಿತ್ಸೆ ನೀಡಿದ 7 ಜನ ವೈದ್ಯ ಸಿಬ್ಬಂದಿಗಳು ಸೇರಿ 42 ಮತ್ತು ಇನ್ನುಳಿದ 5 ಪ್ರಕರಣಗಳ ವರದಿಯೂ ನಕಾರಾತ್ಮಕ (ನೆಗೆಟಿವ್‌) ಆಗಿವೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

"

Follow Us:
Download App:
  • android
  • ios