ಮಂಡ್ಯ(ಮಾ.24): ಅಮೆರಿಕದಲ್ಲಿರುವ ತಂದೆ ಮಗಳೇ ನಿನ್ನನ್ನು ಕಾಣಲು ಭಾರತಕ್ಕೆ ಬರುತ್ತೇನೆ ಎನ್ನುತ್ತಿದ್ದಂತೆ, 4 ವರ್ಷದ ಮಗುವೊಂದು ಕೊರೋನಾ ವೈರಸ್‌ ಹೋದ ಮೇಲೆ ಭಾರತಕ್ಕೆ ಬಾ ಅಪ್ಪ ಎಂದಿದ್ದು, ತಂದೆ ಹಾಗೂ ಪುಟ್ಟಮಗುವಿನ ನಡುವಿನ ಈ ಮಾತುಕತೆ ವಿಡಿಯೋ ವೈರಲ್‌ ಆಗಿದೆ.

ಮಂಡ್ಯದ ಬಾಲರಾಜ್‌ ಎಂಬುವವರು ಅಮೆರಿಕದಲ್ಲಿ ಕೆಲಸದಲ್ಲಿದ್ದು, ಅವರ ಪತ್ನಿ ಹಾಗೂ ಪುತ್ರಿ ನಗರದಲ್ಲಿದ್ದಾರೆ. ಸೋಮವಾರ ಬಾಲರಾಜ್‌ ತಮ್ಮ 4 ವರ್ಷದ ಮಗಳಿಗೆ ವಿಡಿಯೋ ಕಾlf ಮಾಡಿದ್ದು, ನಿನ್ನನ್ನು ನೋಡಲು ಭಾರತಕ್ಕೆ ಬರುತ್ತಿದ್ದೇನೆ ಎಂದಿದ್ದಾರೆ.

ಇದಕ್ಕೆ ಪ್ರತಿಯಾಗಿ ಮಗಳು ಕೊರೋನಾ ವೈರಸ್‌ ಹೋದ ಮೇಲೆ ಬಾ ಅಪ್ಪ ಎಂದಿದ್ದಾಳೆ. ಕೊರೋನಾ ನೋಡಿದ್ದೀಯಾ ಮಗಳೇ ಎಂಬ ಬಾಲರಾಜ್‌ ಪ್ರಶ್ನೆಗೆ, ಹೂಂ ಅಪ್ಪಾ ಟಿ.ವಿ.ಯಲ್ಲಿ ನೋಡಿದ್ದೇನೆ ಎಂದು ಮಗು ಉತ್ತರಿಸಿದ್ದಾಳೆ.