ಮಂಡ್ಯ, (ಏ.07): ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿಯೇ ಮೂವರಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದು ದೃಢವಾಗಿದೆ.

ಮಂಡ್ಯದಲ್ಲಿ ಲಾಕ್‌ಡೌನ್ ಮಧ್ಯೆಯೇ ಸಲೂನ್ ಹಾಗೂ ಬೇಕರಿ ತೆರೆಯುವುದಕ್ಕೆ ಜಿಲ್ಲಾಡಳಿತ ಒಪ್ಪಿಗೆ ಸೂಚಿಸಿತ್ತು. ಇದರ ಬೆನ್ನಲ್ಲೇ 3 ಕೊರೋನಾ ಕೇಸ್ ಪತ್ತೆಯಾಗಿರುವುದು ವಿಪರ್ಯಾಸ.

ಮಂಡ್ಯದಲ್ಲಿ ಲಾಕ್‌ಡೌನ್ ಸಡಿಲಿಕೆ, ಅಪಾಯ ಆಹ್ವಾನಿಸ್ತಿದ್ದಾರಾ ಡಿಸಿ..?

7 ಜನರು ದೆಹಲಿಯ ನಿಜಾಮುದ್ದೀನ್ ಮರ್ಕಜ್‌ನಲ್ಲಿ ನಡೆದಿದ್ದ ಸಭೆಗೆ ಹೋಗಿಬಂದಿದ್ದರು. ಈ ಹಿನ್ನೆಲೆಯಲ್ಲಿ ಏಳು ಜನರ ಗಂಟಲು ಧ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಪೈಕಿ ಮೂವರಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇನ್ನಾದರೂ ಮಂಡ್ಯ ಜಿಲ್ಲಾಡಳಿತ ಲಾಕ್‌ಡೌನ್‌ ಅನ್ನು ಮತ್ತಷ್ಟು ಬಿಗಿಗೊಳಿಸಬೇಕು.

ಸೋಂಕಿತರ ಟ್ರಾವೆಲ್ ಹಿಸ್ಟರಿ

* 7ಜನ ತಬ್ಲಿಘಿಗಳು ಮೂಲತಃ ಮಳವಳ್ಳಿಯವರು ಫೆ.4ರಂದು ದೆಹಲಿಯ ನಿಜಾಮುದ್ದೀನ್‌ಗೆ ತೆರಳಿದ್ದರು. ಅಲ್ಲಿ ಫೆ.13ರವರೆಗೂ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು..

ದೆಹಲಿಯಿಂದ ಕೊರೋನಾ ನಂಜು: ಕರ್ನಾಟಕದಲ್ಲೂ ಸೋಂಕಿತರ ಸಂಖ್ಯೆ ಏರಿಕೆಯಾಯ್ತು ಮತ್ತಷ್ಟು

* ಫೆ.14ರಂದು ದೆಹಲಿಯಿಂದ ಯಶವಂತಪುರ ರೆಲ್ವೆ ಸ್ಟೇಷನ್‌ಗೆ ಮದ್ಯ ರಾತ್ರಿ 1ಕ್ಕೆ ಬಂದಿರುತ್ತಾರೆ. ಲೋಕಲ್ ಟ್ಯಾಕ್ಸಿ ಮೂಲಕ ಮದ್ಯ ರಾತ್ರಿ 2ಗಂಟೆಗೆ ಸ್ಯಾಟಲೈಟ್ ಬಸ್ ಸ್ಟ್ಯಾಂಡ್‌ಗೆ ಬಂದಿದ್ದಾರು

* ಬೆಳಗಿನಜಾವ 3ಗಂಟೆಗೆ ಕೆಎಸ್‌ಆರ್‌ಟಿಸಿ ಬಸ್ ಮೂಲಕ ಮದ್ದೂರು ಬಸ್ ನಿಲ್ದಾಣಕ್ಕೆ ಬಂದು ಇಳಿದಿದ್ದರು. ಮದ್ದೂರಿನಿಂದ ಮಳವಳ್ಳಿಗೆ ಮಾರುತಿ 800 ಕಾರಿನಲ್ಲಿ ಬೆಳಿಗನ ಜಾವ 4ಗಂಟೆಗೆ ಬಂದಿದ್ದಾರೆ.

* ಫೆ.15ರಿಂದ ಫೆ.28ನೇ ತಾರೀಖಿನ ವರೆಗೆ ಕರ್ಫ್ಯೂ ಇದ್ದಿದ್ರಿಂದ ಮಳವಳ್ಳಿಯಲ್ಲೆ ಉಳಿದುಕೊಂಡಿದ್ರು

* ಮಾ.23ರಿಂದ 30ನೇ ತಾರೀಖಿನವರೆಗೂ ಸೋಂಕಿತ ಧರ್ಮಗುರುಗಳ ಸಂಪರ್ಕದಲ್ಲಿ ಈ ಏಳು ಜನರು ಇದ್ದರು. ದೆಹಲಿ ಮೂಲದ ಧರ್ಮಗುರುಗಳಿಗೆ ಪಾಸಿಟಿವ್ ಬಂದ ಹಿನ್ನಲೆ ಜಿಲ್ಲಾಡಳಿತ ಇವರನ್ನು ಗುರುತಿಸಿ ಐಸೋಲೇಷನ್‌ನಲ್ಲಿಟ್ಟಿತ್ತು. 

* ಮಾರ್ಚ್ 28ರಂದು ಬನ್ನೂರಿಗೆ ಭೇಟಿ ಕೊಟ್ಟಿದ್ದಾರೆ( ಮಟನ್ ಖರೀದಿ ಮಾಡಲು ಹೋಗಿದ್ದಾರೆಂಬ ಮಾಹಿತಿ)

"