ಉತ್ತರ ಕನ್ನಡ(ಏ.02): ಸದ್ದು ಮಾಡುವ ಕೊರೋನಾ ಮಧ್ಯೆ ಸದ್ದಿಲ್ಲದೇ 26 ಜನರಿಗೆ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಕಾಡಿದೆ. ಇವರಲ್ಲಿ 25 ಜನ ಮಣಿಪಾಲ ಕಸ್ತೂರ್‌ಬಾ ಆಸ್ಪತ್ರೆಗೆ, ಒಬ್ಬರು ದಕ್ಷಿಣ ಕನ್ನಡದ ಆಸ್ಪತ್ರೆಗೆ ದಾಖಲಾಗಿ ಗುಣಮುಖರಾಗಿದ್ದಾರೆ.

ಮಂಗನ ಕಾಯಿಲೆ ಚಿಕಿತ್ಸೆಯನ್ನು ಆರೋಗ್ಯ ಕರ್ನಾಟಕ ಯಾದಿಯಲ್ಲಿ ಸೇರಿಸಲಾಗಿದ್ದು, ಬಿಪಿಎಲ್‌ ಕಾರ್ಡುದಾರರು ಮಾನ್ಯತೆ ಪಡೆದ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಪ್ರಕಟಿಸಲಾಗಿದೆ.

ವೈದ್ಯರ ಚೀಟಿ ಇದ್ರೆ ಮದ್ಯ ವಿತರಿಸುವ ನಿರ್ಧಾರ: ಕೇರಳ ಸರ್ಕಾರಕ್ಕೆ ಛೀಮಾರಿ!

14 ಜನ ಸಿದ್ದಾಪುರದಿಂದ, 1 ಕುಮಟಾ, 1 ಅಂಕೋಲಾ, ಹೊನ್ನಾವರದ ಗೇರಸೊಪ್ಪಾದಿಂದ 6, ಸಂಶಿಯಿಂದ 2, ಖರ್ವಾದಿಂದ ಒಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು. ಇನ್ನೆರಡು ತಿಂಗಳು ಮಳೆ ಬೀಳುವ ವರೆಗೆ ಮಂಗನ ಕಾಯಿಲೆ ತೀವ್ರವಾಗುವ ಸಂಭವವಿದ್ದು, ಈ ಪರಿಸ್ಥಿತಿಯಲ್ಲಿ ಲಸಿಕೆ ಪಡೆದರೂ ಅದರ ಪರಿಣಾಮವಾಗಲು ಮೂರು ತಿಂಗಳು ಬೇಕಾಗುವುದರಿಂದ ಲಸಿಕೆ ಪ್ರಯೋಜನವಾಗುತ್ತಿಲ್ಲ. ತೀವ್ರ ಜ್ವರ ಕಾಡಿದವರು ತಕ್ಷಣ ತಮ್ಮ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಬರಬೇಕು ಅಥವಾ ತಾಲೂಕಾಸ್ಪತ್ತೆಯಲ್ಲಿ ಚಿಕಿತ್ಸೆ ಪಡೆ​ಯ​ಬ​ಹು​ದು.