ಬೆಂಗಳೂರು(ಮಾ.26): ಔಷಧಿ, ಆಹಾರ ವಿತರಣೆ, ಮಾಧ್ಯಮಗಳ ವಾಹನಗಳಿಗೆ ಹಾಗೂ ವ್ಯಕ್ತಿಗಳಿಗೆ ಪಾಸ್ ಕಡ್ಡಾಯವಾಗಿದೆ. ಹೀಗಾಗಿ ಇವರಿಗೆ ಪಾಸ್‌ಗಳನ್ನ ನೀಡಲು ನಿರ್ಧರಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಹೇಳಿದ್ದಾರೆ. 

ನಗರದಲ್ಲಿರುವ ಎಲ್ಲ ಡಿಸಿಪಿಗಳ ಕಚೇರಿಗಳಲ್ಲಿ ಪಾಸ್ ಪಡೆಯಬಹುದಾಗಿದೆ. ಕಚೇರಿಯಲ್ಲಿ ಕೆಲಸ ಮಾಡುವವರು ಬಲ್ಕ್ ಆಗಿ ಪಾಸ್ ಪಡೆಯಬಹುದು. ಯಾವ ಭಾಗದವರೇ ಆಗಲಿ ಯಾವ ಭಾಗದ ಕಚೇರಿಯಲ್ಲಿ ಆದ್ರೂ ಪಾಸ್ ಪಡೆಯಬಹುದಾಗಿದೆ. ಇದೇ ಕಚೇರಿಲೀ ಪಡೆಯಬೇಕು ಅನ್ನೋ‌ ನಿಯಮ ಇಲ್ಲ. ಸ್ವಲ್ಪ ಕಷ್ಟ ಆಗುತ್ತೆ, ಇದರಿಂದ ಎಲ್ಲರಿಗೂ ಒಳ್ಳೆಯದಾಗುತ್ತೆ. ಸ್ವಲ್ಪ ದಿನದ ಬಳಿಕ ನಿಯಮ‌ ಸಡಿಲು ಮಾಡುತ್ತೇವೆ ಎಂದು ಹೇಳಿದ್ದಾರೆ. 

ಕರ್ನಾಟಕ ಲಾಕ್‌ಡೌನ್: ದಿನದ 24 ಗಂಟೆ ದಿನಸಿ ಅಂಗಡಿ, ಸೂಪರ್‌ ಮಾರ್ಕೆಟ್‌ ಓಪನ್‌

ಇನ್ನುಳಿದಂತೆ ಖಾಸಗಿ ಭದ್ರತಾ ಸಿಬ್ಬಂದಿಗಳು, ಪೆಟ್ರೊಲ್ ಬಂಕ್, ಗ್ಯಾಸ್ ಏಜೆನ್ಸಿ, ಎಲ್‌ಪಿಜಿ ಚಿಲ್ಲರೆ ವಿತರಕರು ಮತ್ತು ಸಿಬ್ಬಂದಿಗಳು, ಆನ್‌ಲೈನ್‌ನಲ್ಲಿ ಆಹಾತ ಪೂರೈಸುವ ಸ್ವಿಗ್ಗಿ, ಜೊಮಾಟೊ ಸಂಸ್ಥೆಗಳ ನೌಕರರು, ಆನ್‌ಲೈನ್ ಔಷಧ ವಿತರಕರು, ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳ ನೌಕರರು, ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ ಸಿಬ್ಬಂದಿ, ದಿನಸಿ, ದಿನಬಳಕೆ ವಸ್ತುಗಳು, ಡೇರಿ, ಮಾಂಸ ಮತ್ತು ಮೀನು ಮಾರಾಟಮಳಿಗೆಗಳ ನೌಕರರು, ವೈದ್ಯಕೀಯ ಸಂಸ್ಥೆಗಳ ನೌಕರರು, ಟೆಲಿಕಾಂ ಮತ್ತು ಇಂಟರ್ನೆಟ್ ಸೇವಾದಾತ ಸಂಸ್ಥೆಗಳ ಸಿಬ್ಬಂದಿ, ಅತ್ಯಗತ್ಯ ಸೇವೆ ಒದಗಿಸುವ ಐಟಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರಿಗೆ ಸಂಚಾರ ಪಾಸ್‌ಗಳನ್ನು ವಿತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇನ್ನು ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ವಿತರಕ ಘಟಕಗಳಲ್ಲಿ ಕೆಲಸ ಮಾಡುವ ನೌಕರರು, ಷೇರು ಮಾರುಕಟ್ಟೆ ಸೇವಾದಾತ ಸಂಸ್ಥೆಗಳ ಸಿಬ್ಬಂದಿಗಳು, ಶೀತಲೀಕರಣ ಘಟಕ ಮತ್ತು ಗೋದಾಮು ಸೇವೆ ಒದಗಿಸುವ ಸಿಬ್ಬಂದಿ, ಅತ್ಯಗತ್ಯ ವಸ್ತುಗಳ ಉತ್ಪಾದನಾ ಘಟಕಗಳ ಸಿಬ್ಬಂದಿ ಮತ್ತು ಸರ್ಕಾರದ ನಿರ್ಬಂಧ ಆದೇಶದ ಕಾರಣ ಮನೆಗಳಿಗೆ ತೆರಳಲು ಸಾಧ್ಯವಾಗದ ಪ್ರವಾಸಿಗರು ಉಳಿದುಕೊಂಡಿರುವ ಹೊಟೆಲ್ ಮತ್ತು ಲಾಡ್ಜ್‌ ಸಿಬ್ಬಂದಿಗಳು ಕಡ್ಡಾಯವಾಗಿ ಸಂಚಾರ ಪಾಸ್‌ಗಳನ್ನು ಪಡೆಯಬೇಕು ಎಂದು ಹೇಳಿದ್ದಾರೆ.

ಕೊರೋನಾ ವೈರಸ್ ಭೀತಿಯಿಂದ KSRTC ಸಿಬ್ಬಂದಿ ಆತ್ಮಹತ್ಯೆಗೆ ಶರಣು..!

ಕಳೆದೆರಡು ದಿನಗಳಿಂದ ಸೇವಯನ್ನ ಸ್ಥಗಿತಗೊಳಿಸಿದ್ದ ಬಿಎಂಟಿಸಿ ಇಂದಿನಿಂದ(ಗುರುವಾರ) ನಗರದಲ್ಲಿ 180 ಬಸ್ಸುಗಳು ರಸ್ತೆಗೆ ಇಳಿಸಲಿದೆ. ಸರ್ಕಾರಿ ನೌಕರರು, ಬೆಸ್ಕಾಂ, ಬಿಎಂಟಿಸಿ, ಬಿಡಬ್ಲ್ಯುಎಸ್ಎಸ್ಬಿ, ಸರ್ಕಾರಿ, ಖಾಸಗಿ ವೈದ್ಯರು, ನರ್ಸ್ ಗಳು, ಫಾರೆಮ್ಸಿ ಎಂಪ್ಲಾಯಿಸ್, ವಾರ್ಡ್ ಬಾಯ್, ಬ್ಯಾಂಕ್ ಅಫೀಶಿಯಲ್ಸ್, ಬ್ಲಡ್ ಡೋನರ್ಸ್, ಸೆಕ್ಯೂರಿಟಿ ಗಾರ್ಡ್ ಸೇರಿ ಅಗತ್ಯ ಸೇವೆ ನೀಡುವವರಿಗೆ ಬಿಎಂಟಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. ಕರ್ಫ್ಯೂ ಪಾಸ್ ಅಥವಾ ತಮ್ಮ ಸೇವೆಸಲ್ಲಿಸುವ ಐಡಿ ಕಾರ್ಡ್ ಇದ್ದವರಿಗೆ ಮಾತ್ರ ಬಸ್ಸಿನಲ್ಲಿ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗುವುದು.