ಕರ್ನಾಟಕ ಮಾತ್ರವಲ್ಲದೇ ಇಡೀ ಇಂಡಿಯಾ ಲಾಕ್ ಡೌನ್ ಬೆನ್ನಲ್ಲೇ ಜನ ಜನಸಾಮಾನ್ಯರಿಗೆ ನಾನಾ ಪ್ರಶ್ನೆಗಳು ಭುಗಿಲೆದ್ದಿವೆ.  ಅಗತ್ಯ ಸೇವೆಗಳೇನೋ ಸಿಗುತ್ತೆ?  ಯಾವಾಗ ಸಿಗುತ್ತೆ..? ಎಲ್ಲಿ ಸಿಗುತ್ತೆ..? ಯಾವ ಸಮಯಕ್ಕೆ ಸಿಗುತ್ತೆ..? ಎನ್ನುವ ಎಲ್ಲಾ ಗೊಂದಲಗಳಿಗೆ ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತೆರೆ ಎಳೆದಿದ್ದಾರೆ.

ಬೆಂಗಳೂರು, (ಮಾ.25): ಕೊರೋನಾ ವೈರಸ್‌ ತಡೆಗೆ ದೇಶಾದ್ಯಂತ ಏಪ್ರಿಲ್ 14ರ ವರಗೆ ಅಂದ್ರೆ 21 ದಿನಗಳ ಲಾಕ್‌ಡೌನ್‌ ಘೋಷಿಸಿದೆ. ಕರುನಾಡಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ದಿನಸಿ, ಕಿರಾಣಿ ಅಂಗಡಿಗಳು ಮತ್ತು ಸೂಪರ್‌ ಮಾರ್ಕೆಟ್‌ಗಳನ್ನು ದಿನದ 24 ಗಂಟೆ ತೆರೆದಿಡಲು ಅವಕಾಶ ನೀಡಲಾಗಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಪ್ರವೀಣ್‌ ಸೂದ್‌, ಸಾರ್ವಜನಿಕರ ಅನುಕೂಲಕ್ಕಾಗಿ ಆಹಾರ ಪದಾರ್ಥ ಖರೀದಿಸಲು ರಾಜ್ಯದ ಎಲ್ಲ ಕಡೆ ದಿನಸಿ, ಕಿರಾಣಿ ಅಂಗಡಿಗಳು ಮತ್ತು ಸೂಪರ್ ಮಾರ್ಕೆಟ್‌ಗಳನ್ನು ದಿನದ 24 ಗಂಟೆ ತೆರೆದಿಡಲು ಅವಕಾಶ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೊರೋನಾ ವೈರಸ್ ಭೀತಿಯಿಂದ KSRTC ಸಿಬ್ಬಂದಿ ಆತ್ಮಹತ್ಯೆಗೆ ಶರಣು..!

ಭಾರತ ಆರ್ಥಿಕತೆ ಸಂಕಷ್ಟದಲ್ಲಿ ಸಿಲುಕಿದೆ. ಈ ನಡುವೆ ದೇಶಕ್ಕೆ ಮಹಾಮಾರಿ ಕೊರೋನಾ ವಕ್ಕರಿಸಿದ್ದರಿಂದ ಅನಿರ್ವಾಯವಾಗಿ ಇಡೀ ದೇಶವನ್ನ 21 ದಿನಗಳ ಕಾಲ ಲಾಕ್‌ ಡೌನ್ ಮಾಡಲಾಗಿದೆ. ಉಲ್ಬಣಸ್ತಿರೋ ಕೊರೋನಾ ನಿಯಂತ್ರಣಕ್ಕೆ ಜನರು ಕೂಡ ಸಹಕರಿಸಬೇಕಿದೆ.. 21 ದಿನ ಲಾಕ್ ಸಕ್ಸಸ್ ಆಗದಿದ್ರೆ ಇಡೀ ದೇಶಕ್ಕೆ ಗಂಡಾಂತರ ತಪ್ಪಿದ್ದಲ್ಲ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ.

Scroll to load tweet…

ಇನ್ನು, ಅಗತ್ಯ ಸಾಮಗ್ರಿಗಳನ್ನ ಖರೀದಿಸೋ ಸಾರ್ವಜನಿಕರಿಗೆ ಜನ ಪರ ಕಾಳಜಿವಹಿಸೋ ಸುವರ್ಣ ನ್ಯೂಸ್ ಕೂಡ ಕೆಲ ಸಲಹೆಗಳನ್ನ ನೀಡುತ್ತಿದ್ದು, ದಯವಿಟ್ಟು ಪಾಲಿಸಿ.

ಜನರಿಗೆ ನಮ್ಮ ಸಲಹೆಗಳು
* ದಿನಸಿ ಖರೀದಿಗೆ ಅಂಗಡಿಗಳತ್ತ ಮುಗಿಬೀಳಬೇಡಿ
* ಹೆಚ್ಚು ದಿನಗಳಿಗಾಗುವಷ್ಟು ದಿನಸಿಯನ್ನ ಒಂದೇ ಸಲ ಖರೀದಿಸಿ 
* ಅಂಗಡಿಗಳಲ್ಲಿ ವ್ಯಕ್ತಿಗಳಿಂದ ಅಂತರವನ್ನ ಕಾಯ್ದುಕೊಳ್ಳಿ
* ಆನ್ ಲೈನ್ ನಲ್ಲೂ ದಿನಸಿ ಖರೀದಿ ಸೇವೆ ಲಭ್ಯ, ಬಳಸಿ
* ಎಟಿಎಂಗೆ ಹೋಗುವ ಬದಲು, ಆನ್ ಲೈನ್ ವ್ಯವಹಾರ ಮಾಡಿ
* ಸರ್ಕಾರದ ಆದೇಶವನ್ನ ಕಟ್ಟುನಿಟ್ಟಾಗಿ ಪಾಲಿಸಿ.