Asianet Suvarna News Asianet Suvarna News

ಕೊರೋನಾ ಭೀತಿ: ಯಾದಗಿರಿಯಲ್ಲಿ 12 ಜನರ ಮೇಲೆ ಜಿಲ್ಲಾಡಳಿತ ನಿಗಾ

ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಬಂದ 12 ಜನರ ಮೇಲೆ ಜಿಲ್ಲಾಡಳಿತ ನಿಗಾ| 12 ಜನರಿಗೆ ಪ್ರತ್ಯೇಕ ವಸತಿ|  ಬೆಂಗಳೂರಿನಿಂದ ಯಾದಗಿರಿಗೆ ಕ್ರೂಜರ್‌ನಲ್ಲಿ ಬಂದಿದ್ದ ಸುಮಾರು 21 ಮಂದಿ| 

12 People in Isolation Ward in Yadgir District
Author
Bengaluru, First Published Mar 29, 2020, 4:08 PM IST

ಯಾದಗಿರಿ(ಮಾ.29): ಬೆಂಗಳೂರಿನಿಂದ ಸ್ವಗ್ರಾಮಕ್ಕೆ ವಾಪಸ್ಸಾದ ಜನರಿಂದ ಕೊರೋನಾ ಸೋಂಕು ತಗುಲುವ ಶಂಕೆ ಇರುವ ಹಿನ್ನೆಲೆಯಲ್ಲಿ ಎರಡು ಪ್ರತ್ಯೇಕ ಕುಟುಂಬಗಳ 12 ಜನರ ಮೇಲೆ ಜಿಲ್ಲಾಡಳಿತ ನಿಗಾ ಇಟ್ಟ ಘಟನೆ ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ ನಡೆದಿದೆ.

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಎನ್ ಕೂರ್ಮಾರಾವ್ ಅವರು, ಬೆಂಗಳೂರು ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ನೀಡಿದ ಮಾಹಿತಿ ಮೇರೆಗೆ 12 ಜನರನ್ನು ಪ್ರತ್ಯೇಕವಾಗಿ ವಸತಿ ಶಾಲೆಯ ಒಂದರಲ್ಲಿ ಐಸೋಲೇಶನ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ. 

ದಮ್ಮಯ್ಯ ನಮ್ಮನ್ನು ಊರಿಗೆ ಹೋಗಲು ಬಿಡಿ ಎಂದು ಅಂಗಲಾಚುತ್ತಿರುವ ಕಾರ್ಮಿಕರು! 

ಬೆಂಗಳೂರಿನ ಸಂಜಯ ನಗರದ ಟೆಕ್ಕಿ ಮನೆಯೊಂದರಲ್ಲಿ ಕೆಲಸಕ್ಕಿದ್ದ ಮಹಿಳೆಯ ಮನೆಯ ಪಕ್ಕದಲ್ಲಿ ಇದ್ದ ಇವರೆಲ್ಲ, ಆ ಮಹಿಳೆಯ ಜೊತೆ ಪ್ರಾರ್ಥಮಿಕ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.ನಿನ್ನೆ ಬೆಂಗಳೂರಿನಿಂದ ಯಾದಗಿರಿಗೆ ಕ್ರೂಜರ್‌ನಲ್ಲಿ ಬಂದ ಸುಮಾರು 21 ಜನರಲ್ಲಿ ಅರಕೆರೆ ಗ್ರಾಮದ ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ, ಕೆಲವರು ರಾಯಚೂರು ಜಿಲ್ಲೆ ದೇವದುರ್ಗದ ಬಳಿ ಇಳಿದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. 
 

Follow Us:
Download App:
  • android
  • ios