Asianet Suvarna News Asianet Suvarna News

ಕೋವಿಡ್‌-19: ಚಿತ್ರದುರ್ಗ ಜಿಲ್ಲೆಯಲ್ಲಿ 12 ಫೀವರ್‌ ಆಸ್ಪತ್ರೆ ಆರಂಭ

ಕೊರೋನಾ ವೈರಸ್‌ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಜಿಲ್ಲಾಡಳಿತ ಸಜ್ಜು: ಡಿಸಿ ವಿನೋತ್‌ ಪ್ರಿಯಾ| ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ತಲಾ 200 ಹಾಸಿಗೆ ಸಾಮರ್ಥ್ಯದ 7 ಐಸೋಲೇಷನ್‌ ಸೆಂಟರ್‌ ಆರಂಭ|   ಕೋವಿಡ್‌-19 ಸೋಂಕು ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡಲು ಚಿತ್ರದುರ್ಗದಲ್ಲಿ ಎರಡು ಕೋವಿಡ್‌ ಆಸ್ಪತ್ರೆಗಳ ಸ್ಥಾಪನೆ|  

12 Fever Hospital Start in Chitradurga District for Coronavirus
Author
Bengaluru, First Published Mar 30, 2020, 3:00 PM IST

ಚಿತ್ರದುರ್ಗ(ಮಾ.30): ಜಿಲ್ಲೆಯಲ್ಲಿ ಕೋವಿಡ್‌-19 ವೈರಸ್‌ ಸೋಂಕು ಹರಡುವಿಕೆ ನಿಯಂತ್ರಣ ಹಾಗೂ ಯಾವುದೇ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಲು ಜಿಲ್ಲೆಯಲ್ಲಿ ಮಾ. 29ರಿಂದ 12 ಫೀವರ್‌ ಆಸ್ಪತ್ರೆಗಳು ಕಾರ್ಯಾರಂಭಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ತಲಾ 200 ಹಾಸಿಗೆ ಸಾಮರ್ಥ್ಯದ 7 ಐಸೋಲೇಷನ್‌ ಸೆಂಟರ್‌ ಹಾಗೂ ತಲಾ 30 ಹಾಸಿಗೆ ಸಾಮರ್ಥ್ಯದ ಐಸಿಯು ವ್ಯವಸ್ಥೆಯುಳ್ಳ ಎರಡು ಆಸ್ಪತ್ರೆಗಳನ್ನು ಕೋವಿಡ್‌ ಆಸ್ಪತ್ರೆಯನ್ನಾಗಿ ಸಜ್ಜುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ತಿಳಿಸಿದ್ದಾರೆ.

ಫೀವರ್‌ ಆಸ್ಪತ್ರೆ ಹಾಗೂ ನೋಡಲ್‌ ಅಧಿಕಾರಿಗಳ ವಿವರ ಇಂತಿದೆ. ಹಿರಿಯೂರು ತಾಲೂಕಿನಲ್ಲಿ ಐಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಹಿರಿಯೂರಿನ ಗೌಂಡರ್‌ ಸಮುದಾಯ ಭವನ, ನೋಡಲ್‌ ಅಧಿಕಾರಿ ಡಾ ವೆಂಕಟೇಶ್‌-82777508833.

ಕೊರೋನಾ ಆತಂಕ: ಬಾಳೆಹೊನ್ನೂರು ವ್ಯಾಪ್ತಿಯಲ್ಲಿ 81 ಮಂದಿಗೆ ಹೋಂ ಕ್ವಾರಂಟೈನ್‌

ಚಳ್ಳಕೆರೆಯ ವಾಲ್ಮೀಕಿ ಸಮುದಾಯ ಭವನ, ಅಜ್ಜನಗುಡಿ ಹಾಗೂ ಪರಶುರಾಂಪುರ ವೇದಾ ಅನುದಾನಿತ ಪ್ರೌಢಶಾಲೆ, ನೋಡಲ್‌ ಅಧಿಕಾರಿ - ಡಾ. ಪ್ರೇಮಸುಧಾ-8277508822. ಹೊಸದುರ್ಗ ತಾಲೂಕಿನಲ್ಲಿ ಸಮುದಾಯ ಭವನ, ಶ್ರೀರಾಂಪುರ ಹಾಗೂ ಸಿದ್ದರಾಮೇಶ್ವರ ಕಲ್ಯಾಣಮಂಟಪ, ಹೊಸದುರ್ಗ. ನೋಡಲ್‌ ಅಧಿಕಾರಿ ಡಾ. ಕಂಬಾಳಿಮಠ-8277508855, ಹೊಳಲ್ಕೆರೆಯಲ್ಲಿ ಶಿವಮೊಗ್ಗ ರಸ್ತೆಯಲ್ಲಿರುವ ವಾಲ್ಮೀಕಿ ಭವನ, ನೋಡಲ್‌ ಅಧಿಕಾರಿ ಡಾ. ಜೈಸಿಂಹ-8277508844. ಮೊಳಕಾಲ್ಮೂರು ತಾಲೂಕಿನಲ್ಲಿ ಪತ್ರಿ ಬಸಪ್ಪ ಚೌಲ್ಟಿ್ರ, ರಾಂಪುರ, ನೋಡಲ್‌ ಅಧಿಕಾರಿ ಡಾ. ಫಾರುಖ್‌-9964501320 ಹಾಗೂ ಗುರುಭವನ, ಮೊಳಕಾಲ್ಮೂರು, ನೋಡಲ್‌ ಅಧಿಕಾರಿ, ಡಾ. ಪದ್ಮಾವತಿ-8277508866.

ಚಿತ್ರದುರ್ಗ ತಾಲೂಕಿನಲ್ಲಿ ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯಲ್ಲಿರುವ ಎಸ್‌ಜೆಎಂ ಕಲಾ ಕಾಲೇಜು, ನೋಡಲ್‌ ಅಧಿಕಾರಿ ಡಾ. ಗಿರೀಶ್‌-8277508811. ಭೀಮಸಮುದ್ರ ಪ್ರಾಥಮಿಕ ಆರೋಗ್ಯ ಕೇಂದ್ರ, ನೋಡಲ್‌ ಅಧಿಕಾರಿ ಡಾ. ಸಾದಿಕ್‌-9535612351. ಬಸವೇಶ್ವರ ಹಾಸ್ಪಿಟಲ್‌, ಚಿತ್ರದುರ್ಗ ನೋಡಲ್‌ ಅಧಿಕಾರಿ ಡಾ. ಪಾಲಾಕ್ಷಯ್ಯ-900886111. ಈ ಎಲ್ಲ ಫೀವರ್‌ ಆಸ್ಪತ್ರೆಗಳಿಗೆ ಸಹಾಯಕ ನೋಡಲ್‌ ಅಧಿಕಾರಿಗಳನ್ನಾಗಿ ಆಯಾ ವ್ಯಾಪ್ತಿಯ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ನಿರೀಕ್ಷಕರನ್ನು ನೇಮಿಸಲಾಗಿದೆ.

7 ಐಸೋಲೇಷನ್‌ ಸೆಂಟರ್‌ ಆರಂಭ

ಜಿಲ್ಲೆಯ 200 ಹಾಸಿಗೆ ಸಾಮರ್ಥ್ಯದ ಐಸೋಲೇಷನ್‌ ಸೆಂಟರ್‌ಗಳನ್ನು ತೆರೆಯಲಾಗಿದ್ದು, ಚಿತ್ರದುರ್ಗ ತಾಲೂಕಿನಲ್ಲಿ ಅಲ್ಪಸಂಖ್ಯಾತರ ಎಂಡಿಆರ್‌ಎಸ್‌ ವಸತಿ ಶಾಲೆ, ಮೆದೆಹಳ್ಳಿ, ರಾಷ್ಟ್ರೀಯ ಹೆದ್ದಾರಿ 4ರಲ್ಲಿರುವ ಸಿದ್ದೇಶ್ವರ ಮಠ, ಸಂಪರ್ಕ ಸಂಖ್ಯೆ-8748939238. ಚಳ್ಳಕೆರೆ ತಾಲೂಕಿನಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಪಾವಗಡ ರಸ್ತೆ, ಚಳ್ಳಕೆರೆ. ಸಂಪರ್ಕ ಸಂಖ್ಯೆ-9448233549. ಹಿರಿಯೂರು ತಾಲೂಕಿನಲ್ಲಿ ಹಿರಿಯೂರು ನಗರ ಹುಳಿಯಾರು ರಸ್ತೆಯಲ್ಲಿರುವ ಜೆ.ಎನ್‌.ವಿ. ಕಾಲೇಜು, ಸಂಪರ್ಕ ಸಂಖ್ಯೆ-9008305019. ಹೊಳಲ್ಕೆರೆ ತಾಲೂಕಿನಲ್ಲಿ ಹೊಳಲ್ಕೆರೆ ಹೊಸದುರ್ಗ ರಸ್ತೆಯಲ್ಲಿ ಬೊಮ್ಮನಕಟ್ಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಸಂಪರ್ಕ ಸಂಖ್ಯೆ-7349356262. ಹೊಸದುರ್ಗ ತಾಲ್ಲೂಕಿನಲ್ಲಿ ನಾಗೇನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಸಂಪರ್ಕ ಸಂಖ್ಯೆ-9880809180. ಮೊಳಕಾಲ್ಮೂರು ತಾಲೂಕಿನಲ್ಲಿ ಹಾನಗಲ್‌ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಸಂಪರ್ಕ ಸಂಖ್ಯೆ-9481181569.

2 ಕೋವಿಡ್‌ ಆಸ್ಪತ್ರೆ ಶುರು

ಕೋವಿಡ್‌-19 ಸೋಂಕು ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಚಿತ್ರದುರ್ಗದಲ್ಲಿ ಸರ್ಕಾರಿ ವಿಜ್ಞಾನ ಕಾಲೇಜು ಹಾಗೂ ಸರ್ಕಾರಿ ಕಲಾ ಕಾಲೇಜುಗಳನ್ನು ಕೋವಿಡ್‌ ಆಸ್ಪತ್ರೆಗಳನ್ನಾಗಿ ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ತಿಳಿಸಿದ್ದಾರೆ.

ಈ ಎರಡೂ ಕಾಲೇಜುಗಳಲ್ಲಿ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದರ ಜೊತೆಗೆ ಜಿಲ್ಲಾ ಆಸ್ಪತ್ರೆ ಮತ್ತು ಬಸವೇಶ್ವರ ಆಸ್ಪತ್ರೆಗಳಲ್ಲಿ ತಲಾ 30 ಹಾಸಿಗೆ ಸಾಮರ್ಥ್ಯದ ಐಸಿಯು ಅಂದರೆ ತೀವ್ರ ನಿಗಾ ಘಟಕದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಯಾವುದೇ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ, ಆದರೆ ಸಾರ್ವಜನಿಕರ ಸಹಕಾರವೂ ಕೂಡ ಅಗತ್ಯವಾಗಿದ್ದು, ಏ. 14 ರವರೆಗೂ ಸಾರ್ವಜನಿಕರು ಮನೆಯಿಂದ ಹೊರಗೆ ಬಾರದಂತೆ ಎಚ್ಚರವಹಿಸಬೇಕು. ಆದೇಶ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
 

Follow Us:
Download App:
  • android
  • ios