ಕೊರೋನಾ ವೈರಸ್‌ ನಿಯಂತ್ರಿಸುವ ಉದ್ದೇಶದಿಂದ ಈಗಾಗಲೇ ಏಪ್ರಿಲ್ 14ರ ವರೆಗೆ ದೇಶಾದ್ಯಂತ ಲಾಕ್‌ಡೌನ್‌ ಘೋಷಿಸಲಾಗಿದೆ. ಆದರೆ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಅನ್ನು ಮೇ 4ರ ವರೆಗೆ ವಿಸ್ತರಿಸಲಾಗಿದೆ.

ಸ್ವತಃ ಪ್ರಧಾನಿ ನರೇಂದ್ರ ಮೋದಿಯೇ ಈ ಬಗ್ಗೆ ಘೋಷಿಸಿದ್ದಾರೆ ಎಂದು ಇಂಡಿಯಾ ಟುಡೇ ಸುದ್ದಿ ವಾಹಿನಿ ಹೆಸರಿನಲ್ಲಿ ಸುದ್ದಿಯೊಂದು ವೈರಲ್‌ ಆಗುತ್ತಿದೆ. ಅದರಲ್ಲಿ ‘ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ’ ಹಾಗೂ ‘ಭಾರತದಾದ್ಯಂತ ಮೇ 4ರ ವರೆಗೆ ಲಾಕ್‌ಡೌನ್‌ ವಿಸ್ತರಣೆ’ ಎಂದಿದೆ.

ಆದರೆ ನಿಜಕ್ಕೂ ಲಾಕ್‌ಡೌನ್‌ ಅನ್ನು ವಿಸ್ತರಿಸಲಾಗಿದೆಯೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ಮಾಚ್‌ರ್‍ 24ರಂದು ಕೊರೋನಾ ನಿಯಂತ್ರಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ 21 ದಿನ ದೇಶಾದ್ಯಂತ ಲಾಕ್‌ಡೌನ್‌ ಘೋಷಿಸಿದ್ದರು. ಇದನ್ನು ದೇಶಾದ್ಯಂತ ಎಲ್ಲಾ ಮಾಧ್ಯಮಗಳೂ ಬಿತ್ತರಿಸಿದ್ದವು.

Fact Check: ಸನ್ನಿ ನಂ. 1, ಕೊರೋನಾ ಔಷಧಿಗೆ ಲಿಯೋನ್ 650 ಕೋಟಿ ಕೊಟ್ರಂತೆ!

ಇಂಡಿಯಾ ಟುಡೇ ಕೂಡ ಇದನ್ನು ವರದಿ ಮಾಡಿತ್ತು. ಇದೇ ವರದಿಯನ್ನು ಬಳಸಿಕೊಂಡು ಫೋಟೋಶಾಪ್‌ ಮೂಲಕ ಎಡಿಟ್‌ ಮಾಡಿ ಮೇ 4ರ ವರೆಗೆ ವಿಸ್ತರಿಸಲಾಗಿದೆ ಎಂಬ ಅಂಶವನ್ನು ಸಂಕಲಿಸಲಾಗಿದೆ. ‘ಇಂಡಿಯಾ ಅಂಡರ್‌ ಲಾಕ್‌ಡೌನ್‌’ ಎಂದಿದ್ದನ್ನು ‘ಇಂಡಿಯಾ ಅಂಡರ್‌ ಲಾಕ್‌ಡೌನ್‌ ಡೇಟ್‌ ಇನ್‌ಕ್ರೀಸ್ಡ್‌’ ಎಂದು ತಿದ್ದಲಾಗಿದೆ. ಹಾಗೆಯೇ ಸುದ್ದಿವಾಹಿನಿ ಮೂಲ ಫಾಂಟ್‌ ಸೈಜ್‌ಗೂ ವೈರಲ್‌ ಸ್ಕ್ರೀನ್‌ಶಾಟ್‌ನಲ್ಲಿರುವ ಫಾಂಟ್‌ ಸೈಜಿಗೂ ಸಾಕಷ್ಟುವ್ಯತ್ಯಾಸವಿದೆ. ಹಾಗಾಗಿ ಈ ಸುದ್ದಿ ಸುಳ್ಳು ಎಂಬುದು ಸ್ಪಷ್ಟ.

- ವೈರಲ್ ಚೆಕ್