ತಾಯಿಗಿಂತ ದೊಡ್ಡ ಯೋಧನಿಲ್ಲ, ಕೆಜಿಎಫ್ 1ರಲ್ಲಿ ಇರಲೇ ಇಲ್ಲ ಈ ಡೈಲಾಗ್! ಸೀನ್ ಹಿಂದಿದೆ ಇಂಟರೆಸ್ಟಿಂಗ್ ಕಥೆ
ಕೆಜಿಎಫ್ ಚಾಪ್ಟರ್ 1ರಲ್ಲಿ ಅಮ್ಮನ ಕಥೆ ಪ್ರೇಕ್ಷಕರನ್ನು ಹಿಡಿದಿಡಲು ಯಶಸ್ವಿಯಾಗಿದೆ. ಅದ್ರಲ್ಲೂ ಬನ್ ದೃಶ್ಯ ಸೂಪರ್ ಹಿಟ್ ಆಗಿತ್ತು. ಆದ್ರೆ ಆರಂಭದಲ್ಲಿ ಈ ಸೀನ್ ಇರಲೇ ಇಲ್ಲ. ಅದ್ರ ಬಗ್ಗೆ ಯಶ್ ಹೇಳಿದ್ದೇನು ಗೊತ್ತಾ?
ಕೆಜಿಎಫ್ (KGF).. ಕನ್ನಡ ಚಿತ್ರರಂಗಕ್ಕೆ ಹೊಸ ಭಾಷ್ಯ ಬರೆದ ಸಿನಿಮಾ. ರಾಕಿಂಗ್ ಸ್ಟಾರ್ ಯಶ್ (Rocking Star Yash), ಪ್ಯಾನ್ ಇಂಡಿಯಾ (Pan India) ಸ್ಟಾರ್ ಎನ್ನಿಸಿಕೊಂಡಿದ್ದು ಈ ಚಿತ್ರದ ಮೂಲಕ. ಗ್ಯಾಂಗ್ ಸ್ಟಾರ್ ಯಶ್ ಬಾಯಿಂದ ಬರ್ತಿದ್ದ ಒಂದೊಂದು ಡೈಲಾಗ್ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಕೆಜಿಎಫ್ ಅಂದಾಗ, ಪ್ರಪಂಚದಲ್ಲಿ ತಾಯಿಗಿಂದ ದೊಡ್ಡ ಯೋಧ ಯಾರೂ ಇಲ್ಲ ಎನ್ನುವ ಡೈಲಾಗ್ ಮತ್ತು ಸೀನ್ ಪ್ರತಿಯೊಬ್ಬರ ನೆನಪಿಗೆ ಬರುತ್ತದೆ. ಈ ಡೈಲಾಗನ್ನು ಪ್ರತಿಯೊಬ್ಬರೂ ಮೆಚ್ಚಿದ್ದು, ಥಿಯೇಟರ್ ನಲ್ಲಿ ಅತಿ ಹೆಚ್ಚು ಸಿಳ್ಳೆ ಕೇಳಿದ್ದು ಈ ಡೈಲಾಗ್ ಗೆ.
ಆದ್ರೆ ಈ ಒಂದು ಡೈಲಾಗ್ ಹಾಗೂ ಆ ದೃಶ್ಯ ಮೊದಲು ಚಿತ್ರೀಕರಣವೇ ಆಗಿರಲಿಲ್ಲ. ಚಿತ್ರ ತಂಡ ಸಂಪೂರ್ಣ ಚಿತ್ರೀಕರಣ ಮುಗಿಸಿ ಪ್ರೊಡಕ್ಷನ್ ಕೆಲಸಕ್ಕೆ ಬಂದಾಗ ಆದ ಒಂದೇ ಒಂದು ಬದಲಾವಣೆ ನಂತ್ರ ಆ ದೃಶ್ಯವನ್ನು ಸಂಪೂರ್ಣ ಬದಲಾಯಿಸಲಾಯ್ತು. ಅಲ್ಲಿ ಯಶ್ ಹೇಳಿದ ಡೈಲಾಗ್ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವಂತಾಯ್ತು.
ಎಲ್ಲ ಬಿಟ್ಟು ರಾವಣನ ಪಾತ್ರವನ್ನೇಕೆ ಒಪ್ಪಿದ್ರು ಯಶ್, ಅವರೇ ಹೇಳಿದ್ದಾರೆ ಕೇಳಿ
ಸಂದರ್ಶನವೊಂದರಲ್ಲಿ ಮಾತನಾಡಿದ ಯಶ್, ಈ ದೃಶ್ಯ ಚಿತ್ರೀಕರಣವಾದ ಬಗ್ಗೆ ಹೇಳಿದ್ದಾರೆ. ಕೆಜಿಎಫ್ 2018ರಲ್ಲಿ ತೆರೆಗೆ ಬಂದಿದೆ. ಪ್ರಶಾಂತ್ ನೀಲ್ (Prashant Neel) ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. 2014ರಿಂದಲೇ ಚಿತ್ರದ ತಯಾರಿ ನಡೆದಿತ್ತು. ನಾಲ್ಕೈದು ವರ್ಷಗಳ ಪ್ರಯತ್ನದ ನಂತ್ರ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿತ್ತು. ಆಡಿಟ್ ಕೆಲಸವನ್ನು ಯಶ್ ಹಾಗೂ ಪ್ರಶಾಂತ್ ವೀಕ್ಷಣೆ ಮಾಡ್ತಿದ್ದರು. ಆ ದೃಶ್ಯದಲ್ಲಿ ತಾಯಿ ಇರ್ಲಿಲ್ಲ. ವೃದ್ಧ ಮಹಿಳೆಯೊಬ್ಬಳು ರಸ್ತೆ ದಾಟುತ್ತಿದ್ದಳು. ಯಶ್ ಗನ್ ಹಿಡಿಯಬೇಕಿತ್ತು. ಇದನ್ನು ಅಲ್ಲೇ ಕುಳಿತು ನೋಡ್ತಿದ್ದ ಕಾರ್ಯನಿರ್ವಾಹಕ ನಿರ್ಮಾಪಕ ಶ್ರೀ ರಾಮರಾವ್, ಈ ದೃಶ್ಯ ನೋಡಿ ತಮ್ಮ ಅಭಿಪ್ರಾಯ ಹೇಳ್ತಾರೆ. ಇಡೀ ಸಿನಿಮಾ ರಾಕಿ ತಾಯಿ ಮೇಲೆ ನಿಂತಿದೆ. ಇಲ್ಲೇಕೆ ತಾಯಿಯಿಲ್ಲ ಎನ್ನುತ್ತಾರೆ.
ಇದನ್ನು ಕೇಳಿದ ಪ್ರಶಾಂತ್ ಹಾಗೂ ಯಶ್, ಮುಖ ನೋಡಿಕೊಳ್ತಾರೆ. ಐದಾರು ವರ್ಷದಿಂದ ಈ ಸಿನಿಮಾ ಮೇಲೆ ಕೆಲಸ ಮಾಡ್ತಿದ್ದರೂ ನಮಗೆ ಅದ್ರ ಬಗ್ಗೆ ಹೊಳೆಯಲಿಲ್ಲ. ಆ ತಕ್ಷಣ ಈ ಸೀನ್ ಬದಲಿಸುವ ನಿರ್ಧಾರಕ್ಕೆ ಪ್ರಶಾಂತ್ ಬರ್ತಾರೆ. ನಿರ್ಮಾಪಕರ ಬಳಿ ಮಾತನಾಡಿ, ವೃದ್ಧೆ ಬದಲು, ಸಣ್ಣ ಮಗುವನ್ನು ಹಿಡಿದ ತಾಯಿ ಪಾತ್ರವನ್ನು ಅಲ್ಲಿ ತರಲಾಗುತ್ತದೆ. ಆಕೆಯನ್ನು ನೋಡ್ತಿದ್ದಂತೆ ರಾಕಿ ಭಾಯ್ ಗೆ ತನ್ನ ಅಮ್ಮನ ನೆನಪಾಗುತ್ತದೆ. ಇದೊಂದು ಬದಲಾವಣೆಯಿಂದ ಇಡೀ ಚಿತ್ರದ ಚಿತ್ರಣವೇ ಬದಲಾಗುತ್ತದೆ.
ಸಿಹಿಗೆ ಗುದ್ದಿದ ಕಾರ್, ಸೀತಾರಾಮನಿಂದ ದೂರವಾದ ಮಗಳು!
ಸಂದರ್ಶನದಲ್ಲಿ ಈ ಸಮಯವನ್ನು ನೆನಪು ಮಾಡಿಕೊಳ್ಳುವ ಯಶ್. ಸೆಟ್ ನಲ್ಲಿ ಪ್ರತಿಯೊಬ್ಬರ ಮಾತನ್ನು ಆಲಿಸೋದು ಬಹಳ ಮುಖ್ಯ ಎಂದಿದ್ದಾರೆ. ನನ್ನ ಬಳಿ ಸ್ಟಾರ್ಡಮ್ ಫವರ್ ಇದ್ರೂ ಕ್ಯಾಮರಾ ಮುಂದೆ ನಾನೊಬ್ಬ ನಟ. ನಿರ್ದೇಶಕ ಮತ್ತು ಸಿನಿಮಾಟೋಗ್ರಾಫರ್ ನನ್ನ ಮೊದಲ ಪ್ರೇಕ್ಷಕರು ಎಂದು ಯಶ್ ಹೇಳಿದ್ದಾರೆ. ನಾನು ಪ್ರತಿ ಬಾರಿ ಹೊಸ ಆಲೋಚನೆಯನ್ನು ಸ್ವಾಗತಿಸುತ್ತೇನೆ. ನಾನು ಕೊನೆಯ ಸಹಾಯಕ ನಿರ್ದೇಶಕರಿಗೂ ಅವಕಾಶ ನೀಡ್ತೇನೆ, ಅವರು ಬಂದು ತಮ್ಮ ಅಭಿಪ್ರಾಯ ಹೇಳಬಹುದು. ಅನೇಕ ಬಾರಿ, ಜನರಿಂದ ನಾನು ಐಡಿಯಾ ಪಡೆದಿದ್ದೇನೆ ಎಂದು ಯಶ್ ಹೇಳಿದ್ದಾರೆ. ಪ್ರಬುದ್ಧ ವ್ಯಕ್ತಿಗಳ ಜೊತೆ ಕೆಲಸ ಮಾಡುವಾಗ ಕೆಲಸ ಕಷ್ಟವಾಗುವುದಿಲ್ಲ ಎಂದು ಇದೇ ಸಮಯದಲ್ಲಿ ಯಶ್ ಹೇಳಿದ್ದಾರೆ. ಯಶ್ ಅಭಿನಯದ ಕೆಜಿಎಫ್, ಕೆಜಿಎಫ್ 2 ದಾಖಲೆ ಬರೆದಿದ್ದು, ಕೆಜಿಎಫ್ 3 ನಿರೀಕ್ಷೆಯಲ್ಲಿ ಫ್ಯಾನ್ಸ್ ಇದ್ದಾರೆ. ಶೀಘ್ರವೇ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಯಶ್ ಹೇಳಿದ್ದಾರೆ.