Viral News: ಬ್ಲೌಸ್ ಇಲ್ಲದೆ ಸೀರೆಯುಟ್ಟ ಸುಂದರಿ, ಎದೆ ಬೆನ್ನು ಮುಚ್ಚಿದ್ದು ಮೆಹಂದಿಯಿಂದ

  • Mehandi Blouse: ಕೈಗೆ ಹಚ್ಚೋ ಮೆಹಂದಿಯಿಂದ ದೇಹ ಮುಚ್ಚಿದ ಮಹಿಳೆ
  • Viral news: ಬ್ಲೌಸ್ ಇಲ್ಲ, ಎದೆ, ಬೆನ್ನಿನ ಮೇಲೆಲ್ಲಾ ಮೆಹಂದಿ
Woman gets brutally trolled for wearing mehndi blouse with saree dpl

ಹೆಣ್ಮಕ್ಕಳಿಗೆ ದಿನಕ್ಕೊಂದು ಫ್ಯಾಷನ್. ಹೆಣ್ಮಕ್ಕಳ ಉಡುಪು, ಸ್ಟೈಲ್, ಟ್ರೆಂಡ್ ಬದಲಾದಷ್ಟು ವೇಗವಾಗಿ ಮೆನ್ಸ್ ಫ್ಯಾಷನ್ ಬದಲಾಗಲ್ಲ. ಆದರೆ ಹೆಣ್ಮಕ್ಕಳ ಸೀರೆ, ಡ್ರೆಸ್ ವಿಚಾರದಲ್ಲಿ ಪ್ರತಿದಿನ ಪ್ರಯೋಗಗಳಾಗುತ್ತಲೇ ಇರುತ್ತವೆ. ಈಗ ಮಹಿಳೆಯೊಬ್ಬರು ಸೀರೆಗೆ ಮೆಹಂದಿ ಬ್ಲೌಸ್ ಧರಿಸಿದ್ದು ಈ ಫೋಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಹೌದು. ಈ ಚಂದದ ಸೀರೆಗೆ ಬ್ಲೌಸ್ ಇಲ್ಲ, ಬದಲಿಗೆ ಮೈಮೇಲೆ ಮೆಹಂದಿ (Mehandi)ರಂಗಿನ ಕುಪ್ಪಸ ಬಿಡಿಸಲಾಗಿದೆ. ಸೆರಗು ಹೇಗೆ ನಿಂತಿತೋ ಗೊತ್ತಿಲ್ಲ, ಆದರೆ ಈ ರಿಸ್ಕಿ ಸೀರೆಯಲ್ಲೂ ಚಂದಕ್ಕೆ ಸ್ಮೈಲ್ ಕೊಟ್ಟಿದ್ದಾರೆ ಈಕೆ.

ಭಾರತದಲ್ಲಿ ಮದುವೆಯ ಸೀಸನ್(Wedding season) ಅಧಿಕೃತವಾಗಿ ಪ್ರಾರಂಭವಾಗಿದೆ. ಜನರು ಯಾವಾಗಲೂ ಮದುವೆಯ ಸಮಯದಲ್ಲಿ ಉಳಿದವರಿಗಿಂತ ವಿಭಿನ್ನವಾಗಿ ಕಾಣಲು ಹೊಸ ಸ್ಫೂರ್ತಿಯನ್ನು ಹುಡುಕುತ್ತಿರುತ್ತಾರೆ. ಸಂಬಂಧಿಕರು, ನೆಂಟರ ಮುಂದೆ ಸ್ಪೆಷಲ್ ಆಗಿ ಕಾಣಿಸೋದು ಅಂದ್ರೆ ಚಿಕ್ಕ ಸವಾಲೇನಲ್ಲ. ಇದೀಗ ಮಹಿಳೆಯೊಬ್ಬಳು ತನ್ನ ಸೀರೆಯೊಂದಿಗೆ ಗೋರಂಟಿ (ಮೆಹಂದಿ) ಕುಪ್ಪಸವನ್ನು ಧರಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Katrina Kaif Wedding: ಮದುವೆ ಸಂಭ್ರಮ ಶುರು, ಕತ್ರೀನಾಗೆ 1 ಲಕ್ಷದ ಮೆಹಂದಿ

ಮದುವೆಯ ಸಮಯದಲ್ಲಿ ಸಂಭ್ರ,ಮ ಹೆಚ್ಚಿಸೋ ಶಾಸ್ತ್ರಗಳಲ್ಲಿ ಮೆಹಂದಿ ಕೂಡ ಒಂದು. ಮೊದಲು, ಈ ಪದ್ಧತಿಯು ಕೈ ಮತ್ತು ಪಾದಗಳಿಗೆ ಸೀಮಿತವಾಗಿತ್ತು, ಆದರೂ ಈ ವೀಡಿಯೊದೊಂದಿಗೆ, ಮೆಹಂದಿ ಬ್ಲೌಸ್ ಶೀಘ್ರದಲ್ಲೇ ಅನೇಕರಿಗೆ ಬೋಲ್ಡ್ ಫ್ಯಾಷನ್ ಆಯ್ಕೆಯಾಗಲಿದೆ ಎನ್ನುವ ಸೂಚನೆಯೊಂದು ಸಿಕ್ಕಿದೆ. thanos_jatt ಎಂಬ ಬಳಕೆದಾರರು ವೀಡಿಯೊವನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ.  ಇಲ್ಲಿಯವರೆಗೆ, ವೀಡಿಯೊ 1,900 ಕ್ಕೂ ಹೆಚ್ಚು ಲೈಕ್ಸ್ ಪಡೆದಿವೆ. ಹಲವಾರು ಬಳಕೆದಾರರು ಮಹಿಳೆಯ ಬೋಲ್ಡ್ ಆಯ್ಕೆಗಾಗಿ ಟ್ರೋಲ್ ಮಾಡುತ್ತಿದ್ದಾರೆ. ಕಮೆಂಟ್ ವಿಭಾಗದಲ್ಲಿ ಅವಳನ್ನು ಮಹಿಳೆಯನ್ನು ಮೆಹಂದಿ ಬ್ಲೌಸ್ ಧರಿಸಿದ್ದಕ್ಕೆ ಅಪಹಾಸ್ಯ ಮಾಡುತ್ತಿದ್ದಾರೆ. ಒಬ್ಬರು ತಮಾಷೆಯಾಗಿ ಹೊಲಿಗೆಯ ಹಣ ಉಳಿಸೋದು ಹೀಗೆ ನೋಡಿ ಎಂದಿದ್ದಾರೆ.

 
 
 
 
 
 
 
 
 
 
 
 
 
 
 

A post shared by Thanos (@thanos_jatt)

ಪೋಸ್ಟ್‌ನಲ್ಲಿ ಹಲವಾರು ಇತರ ಕಾಮೆಂಟ್‌ಗಳು ಸಹ ಇದ್ದವು. ಒಬ್ಬ ಬಳಕೆದಾರರು, ಫ್ಯಾಷನ್ ಹೆಸರಲ್ಲಿ ಏನು ಬೇಕಿದ್ರೂ ಮಾಡ್ತೀರಾ ? ಸ್ವಲ್ಪ ನಾಚಿಗೆ ಪಡ್ಕೊಳ್ಳಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಮಹಿಳೆ ತನ್ನ ದೇಹದ ಮೇಲೆ ತನ್ನ ಬ್ಲೌಸ್ ಬದಲಿಗೆ ಗೋರಂಟಿ ವಿನ್ಯಾಸವನ್ನು ಹಾಕಿಸಿಕೊಂಡು ಧೈರ್ಯದಿಂದ ಹೊತ್ತಿರುವುದನ್ನು ಕಾಣಬಹುದು. ಮಹಿಳೆ ಸಾಂಪ್ರದಾಯಿಕ ಕುಪ್ಪಸವನ್ನು ರಿಜೆಕ್ಟ್ ಮಾಡಿ ಅದರ ಬದಲಾಗಿ ಮುಂಭಾಗ ಮತ್ತು ಹಿಂಭಾಗದಲ್ಲಿ ಗೋರಂಟಿ ವಿನ್ಯಾಸವನ್ನು ಧರಿಸಿದ್ದರು.

ಭುಜಗಳು ಮತ್ತು ತೋಳುಗಳನ್ನು ಒಳಗೊಂಡಂತೆ ಮೇಲಿನ ದೇಹದ ಮೇಲೆ ಮೆಹಂದಿ ವಿನ್ಯಾಸವಿದ್ದು ಬಿಳಿ ಸೀರೆಯನ್ನು ಧರಿಸಿರುವ ಮಹಿಳೆಯನ್ನು ಕಾಣಬಹುದು, ಇದು ಡಿಸೈನರ್ ಬ್ಲೌಸ್‌ನಂತೆಯೇ ಕಾಣುತ್ತದೆ.

ಭಾರತೀಯ ಮದುವೆಗಳಲ್ಲಿ ಮಹೆಂದಿ ಪ್ರಾಮುಖ್ಯತೆ:

ಭಾರತೀಯ ಮದುವೆಗಳು ಮದರಂಗಿ ಅಥವಾ ಮೆಹಂದಿ ಶಾಸ್ತ್ರವಿಲ್ಲದೆ ಅಪೂರ್ಣ. ವಧೂವರರ ಕೈಗೆ ಚಂದದ ಗೋರಂಟಿ ಹಚ್ಚಿ ಅದರ ರಂಗನ್ನು ಕಣ್ತುಂಬಿಕೊಳ್ಳುವ ಶಾಸ್ತ್ರ ಇಂದಿಗೂ ಅದ್ಧೂರಿತನದಿಂದ ಆಚರಿಸಲ್ಪಡುತ್ತದೆ. ಹಿಂದೆ ನ್ಯಾಚುರಲ್ ಗೋರಂಟಿ ಹಚ್ಚುತ್ತಿದ್ದರೂ ಇಂದು ಬಣ್ಣ ಹೆಚ್ಚಿಸುವ, ಪರಿಮಳ ಭರಿತ ಮೆಹಂದಿ ಕೋನ್‌ಗಳು ಮಾರುಕಟ್ಟೆಗಳಲ್ಲಿ ಲಭ್ಯವಿದೆ.

ಮೆಹೆಂದಿ ಎಂಬುದು ತ್ವಚೆಯ ಮೇಲೆ ಬಿಡಿಸಲಾಗುವ ಕಲೆ. ಇದನ್ನು ತಾತ್ಕಾಲಿಕ ಚರ್ಮದ ಅಲಂಕಾರವಾಗಿ ಬಳಸಲಾಗುತ್ತಿದ್ದು ಸಾಮಾನ್ಯವಾಗಿ ಕೈ ಅಥವಾ ಕಾಲುಗಳ ಮೇಲೆ ಡಿಸೈನ್ ಬರೆಯಲಾಗುತ್ತದೆ. ಗೋರಂಟಿ ಸಸ್ಯದ ಪುಡಿಮಾಡಿದ ಒಣ ಎಲೆಗಳಿಂದ (ಲಾಸೋನಿಯಾ ಇನರ್ಮಿಸ್) ಮೆಹಂದಿ ತಯಾರಿಸಲಾಗುತ್ತದೆ. ಇದು ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳ, ಮಾಲ್ಡೀವ್ಸ್ ಮತ್ತು ಶ್ರೀಲಂಕಾದಂತಹ ದಕ್ಷಿಣ ಏಷ್ಯಾದ ಮಹಿಳೆಯರಲ್ಲಿ ಜನಪ್ರಿಯವಾದ ದೇಹ ಕಲೆಯಾಗಿದೆ.

Latest Videos
Follow Us:
Download App:
  • android
  • ios