ಮಾಜಿ ವಿಶ್ವಸುಂದರಿಯ ಸಿನಿಮಾ ನೋಡಿ ಸಿಟ್ಟಾದ್ರು ಅಮೆರಿಕನ್ ರ್ಯಾಪರ್ | ಪ್ರಿಯಾಂಕಾಳ ವೈಟ್ ಟೈಗರ್ ನೋಡಿ ಕಾರ್ಡಿಗೇನಾಯ್ತು..?
ಮಾಜಿ ವಿಶ್ವಸುಂದರಿ ಪ್ರಿಯಾಂಕ ಚೋಪ್ರಾ ಅಭಿನಯದ ದ ವೈಟ್ ಟೈಗರ್ ಸಿನಿಮಾ ಭಾರೀ ಸುದ್ದಿಯಲ್ಲಿದೆ. ಸಿನಿಮಾ ಬಗ್ಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿರುವ ನಡುವೆಯೇ ಅಮೆರಿಕದ ಖ್ಯಾತ ರ್ಯಾಪರ್ ಪ್ರಿಯಾಂಕಳ ಸಿನಿಮಾ ನೋಡಿ ಸಿಟ್ಟಾಗಿದ್ದಾರೆ.
ವೈಟ್ ಟೈಗರ್ ಒಂದು ಗ್ರೇಟ್ ಸಿನಿಮಾ. ನಾನು ಸಿನಿಮಾ ನೋಡಿ ಅತ್ತಿದ್ದೇನೆ, ಸಿಟ್ಟಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ ಕಾರ್ಡಿ. ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ, ನನಗೂ ಹಾಗೆ ಆಯ್ತು, ಥಾಂಕ್ಯೂ. ನೀವು ಎಂಜಾಯ್ ಮಾಡಿದ್ದೀರಿ ಎನ್ನುವುದು ಖುಷಿಯಾಗುತ್ತಿದೆ ಎಂದಿದ್ದಾರೆ.

ವೀರ್ಯ ಬೇಕು ಎಂದು ಹಿಂದೆ ಹೋದ್ರೂ ಕ್ಯಾರೇ ಅನ್ನದ ಅಭಿನವ್‌ನ ಚಡ್ಡಿಯನ್ನೇ ಹರಿದ ರಾಖಿ
ಗ್ರಾಮಿ ವಿನ್ನರ್ ರ್ಯಾಪ್ ಸಿಂಗರ್ ಕಾರ್ಡಿ ಬಿ ದಿ ವೈಟ್ ಟೈಗರ್ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಟ್ವಿಟರ್ ಮೂಲಕ ಸಿನಿಮಾಗೆ ಪ್ರತಿಕ್ರಿಯೆಯನ್ನೂ ತಿಳಿಸಿದ್ದಾರೆ. ಸಿನಿಮಾದಲ್ಲಿ ಸಪೋರ್ಟಿಂಗ್ ಪಾತ್ರವಾಗಿ ಕಾಣಿಸ್ಕೊಂಡ ಮತ್ತು ಸಿನಿಮಾ ಮೇಲೆ ಇನ್ವೆಸ್ಟ್ ಮಾಡಿದ ಪ್ರಿಯಾಂಕ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಕಾರ್ಡಿ.
ಕಾರ್ಡಿ ಮಾತ್ರವಲ್ಲದೆ, ನಟ ಕೆರ್ರಿ ವಾಷಿಂಗ್ಟನ್ ಕೂಡಾ ಸಿನಿಮಾವನ್ನು ಹೊಗಳಿದ್ದಾರೆ. ವೈಟ್ ಟೈಗರ್, ವೈಟ್ ಟೈಗರ್, ವೈಟ್ ಟೈಗರ್, ಮಸ್ಟ್ ವಾಚ್, ಗಾಡ್ ಬ್ಲೆಸ್ ಯು ಎಂದಿದ್ದಾರೆ.
ಮುಸ್ಲಿಂ ಧರ್ಮಗುರುವನ್ನು ಮದ್ವೆಯಾಗಿ ಎರಡೇ ತಿಂಗಳು: ಹಾರ್ಟ್ ಬ್ರೋಕನ್ ಅಂತಿದ್ದಾರೆ ನಟಿ
ದಿ ವೈಟ್ ಟೈಗರ್ ಸಿನಿಮಾವನ್ನು ರಮಿನ್ ಬಹ್ರಾನಿ ನಿರ್ದೇಶಿಸಿದ್ದು, ಅರವಿಂದ್ ಅಡಿಗರ ಕಾದಂಬರಿ ಆಧಾರಿತ ಸಿನಿಮಾ ಇದಾಗಿದೆ. ಇದರಲ್ಲಿ ಆದರ್ಶ್ ಗೌರವ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರಿಯಾಂಕ ಚೋಪ್ರಾ ಮತ್ತು ರಾಜ್‌ಕುಮಾರ್ ರಾವ್ ಸಪೋರ್ಟಿಂಗ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜನವರಿ 22ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ರಿಲೀಸ್ ಆಗಿದೆ. ಗ್ರಾಮದ ಬಡ ವ್ಯಕ್ತಿಯಾದ ಬಲರಾಮ್ ಉದ್ಯಮಿಯಾಗುವ ಕಥೆ ಇದರಲ್ಲಿದೆ.
