Asianet Suvarna News Asianet Suvarna News

Tamil Director Found Dead : ಹೊತ್ತಿನ ಊಟವೂ ಇಲ್ಲ, ತಾನು ಕೆಲಸ ಮಾಡಿದ್ದ ಸ್ಟುಡಿಯೋ ಎದುರಿಗೆ ಪ್ರಾಣ ಬಿಟ್ಟ ನಿರ್ದೇಶಕ

* ಬೀದಿ ಬದಿಯಲ್ಲಿ ಕೊನೆ ಉಸಿರು ಎಳೆದ ತಮಿಳಿನ ಖ್ಯಾತ ನಿರ್ದೇಶಕ
* ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದರು
* ಕೊನೆ ಕಾಲದಲ್ಲಿ ಒಂದು ಹೊತ್ತಿನ ಊಟಕ್ಕೂ  ತೊಂದರೆ ಪಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು

Vijayakanth starrer Mangara Kaaval director M Thiyagarajan found dead roadside Chennai mah
Author
Bengaluru, First Published Dec 8, 2021, 9:26 PM IST

ಚೆನ್ನೈ(ಡಿ. 08)   ವಿಜಯಕಾಂತ್ (Vijayakanth)ಅಭಿನಯದ 'ಮನಗರ ಕಾವಲ್' ಚಿತ್ರದ ನಿರ್ದೇಶಕ, ಹಿರಿಯ ಚಲನಚಿತ್ರ ನಿರ್ಮಾಪಕ ಎಂ ತ್ಯಾಗರಾಜನ್( M Thiyagarajan) ಅವರ ಮೃತದೇಹ (Dead Body) ಚೆನ್ನೈ (Chennai)ಎವಿಎಂ ಸ್ಟುಡಿಯೋದ ರಸ್ತೆಬದಿಯಲ್ಲಿ ಪತ್ತೆಯಾಗಿರುವ ಸುದ್ದಿ ಆಘಾತ ತಂದಿದೆ.

ಎಂ ತ್ಯಾಗರಾಜನ್ ನಿಧನ ಇಡೀ ತಮಿಳು ಚಿತ್ರರಂಗಕ್ಕೆ ಆತಂಕ ತಂದಿದೆ.  ಎಂ ತ್ಯಾಗರಾಜನ್ ಅವರು ನಟ ವಿಜಯಕಾಂತ್ ಅಭಿನಯದ 1991 ರ ಸೂಪರ್ ಹಿಟ್ ಚಿತ್ರ 'ಮನಗರ ಕಾವಲ್' (Managara Kaaval) ಅನ್ನು ನಿರ್ದೇಶಿಸಿದ್ದರು. ಈ ಚಲನಚಿತ್ರವು  AVM ಪ್ರೊಡಕ್ಷನ್ಸ್‌ನ 150 ನೇ ಚಲನಚಿತ್ರವಾಗಿತ್ತು. 

ಎಂ ತ್ಯಾಗರಾಜನ್ ಅರುಪ್ಪುಕೊಟ್ಟೈ ಮೂಲದವರಾಗಿದ್ದರು. ಅವರು ಪ್ರತಿಷ್ಠಿತ ಅಡ್ಯಾರ್ ಫಿಲ್ಮ್ ಇನ್ಸ್ಟಿಟ್ಯೂಟ್ ಹಳೆಯ ವಿದ್ಯಾರ್ಥಿ.  ನಿರ್ಮಾಪಕ ಪ್ರಭು ಅವರ 'ಪೊನ್ನು ಪಾರ್ಕ ಪರೆನ್' ಚಿತ್ರದ ಮೂಲಕ ಪದಾರ್ಪಣೆ ಮಾಡಿದ್ದರು. ಮತ್ತೊಮ್ಮೆ ಪ್ರಭು ಜತೆ ಕೆಲಸ ಮಾಡಿ   ‘ವೆಟ್ರಿ ಮೆಲ್ ವೆಟ್ರಿ’ ಅನ್ನು ನಿರ್ದೇಶಿಸಿದರು.  ಈ ಎರಡು ಚಿತ್ರಗಳು ಅಂದಿನ ಬಾಕ್ಸಾಫೀಸ್ ಧೂಳೀಪಟ ಮಾಡಿದ್ದವು.

ಕರ್ಮ ಪೂಜೆಗೆಂದು ಕೆರೆಯಲ್ಲಿ ಮುಳುಗಿದ ಏಳು ಹುಡುಗಿಯರು

'ಮನಗರ ಕಾವಲ್' ಅನ್ನು ಚಿತ್ರಕತೆ  ಮೂಲಕ ಹೆಸರು ಮಾಡಿಕೊಂಡರು.  ಕಾಲಿವುಡ್ ಉದ್ಯಮದ ಅನೇಕ ಅನುಭವಿಗಳ ಪ್ರಕಾರ, ಸೂಪರ್ ಹಿಟ್ ಚಲನಚಿತ್ರವನ್ನು ನೀಡಿದರೂ, ಎಂ ತ್ಯಾಗರಾಜನ್ ಅವರಿಗೆನ ಸಾಕಷ್ಟು ಕೆಲಸ ನಂತರದ ದಿನಗಳಲ್ಲಿ ಸಿಗಲಿಲ್ಲ. 

ಇನ್ನು ಕೆಲವು ವರದಿಗಳು ಹೇಳುವಂತೆ ನಿರ್ದೇಶಕ ಕೌಟುಂಬಿಕ ವ್ಯಾಜ್ಯಗಳಿಂದಲೂ ನೊಂದಿದ್ದರು. ಕಳೆದ 15 ವರ್ಷಗಳಿಂದ ಅವರು ತಮ್ಮ ಹೆಂಡತಿ ಮತ್ತು ಮಕ್ಕಳೊಂದಿಗಿನ ಸಂಬಂಧ ಸರಿಯಾಗಿರಲಿಲ್ಲ.  ಇದೇ ಕಾರಣಕ್ಕೆ ಕುಟುಂಬದಿಂದ ಬೇರ್ಪಟ್ಟು ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಎಂ ತ್ಯಾಗರಾಜನ್ ಅವರು ಬಡತನದಿಂದ ಬಳಲುತ್ತಿದ್ದರು  ಒಂದು ಹೊತ್ತಿನ ಊಟಕ್ಕೂ ಸಂಕಷ್ಟ ಪಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಸರ್ಕಾರದ ಒಡೆತನದ ಅಮ್ಮಾ ಕ್ಯಾಂಟೀನ್‌ನಲ್ಲಿ ಊಟ ಮಾಡುತ್ತ ಬದುಕು ಸಾಗಿಸುತ್ತಿದ್ದರು.

ನಿರ್ದೇಶಕ ತಾನು ಕೆಲಸ ಮಾಡುತ್ತಿದ್ದ ಪ್ರೊಡಕ್ಷನ್ ಹೌಸ್ ಮುಂದಿನ ಬೀದಿಯಲ್ಲೇ ಕೊನೆ ಉಸಿರು ಎಳೆದಿದ್ದು ಮಾತ್ರ ವ್ಯಸ್ಥೆಗೆ ಹಿಡಿದ ಘೋರ ಕನ್ನಡಿ.  ತಮಿಳಿನ ನಿರ್ದೇಶಕರು ಈ ಸಂಗತಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಸಂತಾಪ ಸೂಚಿಸಿದ್ದಾರೆ. ಇದನ್ನು ವ್ಯಸ್ಥೆಯ  ವ್ಯಂಗ್ಯ ಎಂದು ಕರೆದಿದ್ದಾರೆ. ಚೆನ್ನೈನಲ್ಲಿ ಮೆಟ್ರೋಪಾಲಿಟನ್ ಸಿಟಿ ಪೊಲೀಸರು ಹಿರಿಯ ಚಲನಚಿತ್ರ ನಿರ್ಮಾಪಕ, ನಿರ್ದೇಶಕನ  ಅಂತ್ಯಕ್ರಿಯೆ ನೆರವೇರಿಸಿದರು.

ಸಿನಿಮಾ ರಂಗದಲ್ಲಿ ಉನ್ನತ ಸ್ಥಾನ ತಲುಪಿದವರು ಇಡುವ ಕೆಲವೊಂದು ತಪ್ಪು  ಹೆಜ್ಜೆಗಳು ಅವರನ್ನು ಬಡತನದ ಕೂಪಕ್ಕೆ ತಳ್ಳಿಬಿಡುತ್ತವೆ. ಅತ್ಯುತ್ತಮ ಸಿನಿಮಾ ನೀಡಿದವರಿಗೂ ಅವಕಾಶಗಳು ಒಲಿದು ಬಂದೇ ಬಿಡುತ್ತವೆ ಎನ್ನಲು ಸಾಧ್ಯವಿಲ್ಲ. ಕನ್ನಡದಲ್ಲಿಯೂ ಪೋಷಕ ನಟರು, ನಿರ್ಪಾಪಕರು ಸಂಕಷ್ಟಕ್ಕೆ ಸಿಲುಕಿದ್ದರು. ಆ ಸಂದರ್ಭದಲ್ಲಿ ನಾಯಕ ನಟರು ನೆರವಿಗೆ ನಿಂತ ಉದಾಹರಣೆಗಳು ಇವೆ. ಆರೋಗ್ಯ ಕೈಕೊಟ್ಟಾಗ ನೆರವಿಗೆ ನಿಲ್ಲುವ ಸಂಪ್ರದಾಯವನ್ನು ಕನ್ನಡದ ನಾಯಕರು ಇಟ್ಟುಕೊಂಡಿದ್ದಾರೆ. ಸಿನಿಮಾ ಲೋಕದಲ್ಲಿ ಸ್ಟಾರ್ ಗಳಂತೆ ಮಿಂಚಿದ್ದವರು ಕೊನೆಯಲ್ಲಿ ಈ ರೀತಿ ದುರಂತ ಸಾವು ಕಂಡರೆ ಅರಗಿಸಿಕೊಳ್ಳುವುದು ಕಷ್ಟಸಾಧ್ಯವೇ. ಚಿಕಿತ್ಸೆಗೆ ಹಣ ಇಲ್ಲದೆ ಸಾವನ್ನಪ್ಪಿದರು ಎಂದು ಬರೆಯುವುದು ಸಹ ಒಂದು ದುರಂತವೇ. ಕೊರೋನಾ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ಸಹ ಪ್ರತಿಭೆಗಳನ್ನು ಕಳೆದುಕೊಂಡಿತ್ತು.

ಇಂಗ್ಲಿಷ್ ನಲ್ಲಿಯೂ ಓದಿ

 

Follow Us:
Download App:
  • android
  • ios