'ಅರ್ಜುನ್ ರೆಡ್ಡಿ' ಚಿತ್ರದ ಮೂಲಕ ಟಾಲಿವುಡ್‌ ಚಿತ್ರರಂಗದಲ್ಲಿ ರೊಮ್ಯಾನ್ಸ್‌ ಅಲೆ ಎಬ್ಬಿಸಿದ ನಟ ವಿಜಯ್ ದೇವರಕೊಂಡಗೆ ಅಭಿಮಾನಿಗಳ ಸಂಖ್ಯೆ ಅಪಾರ. ವಿಜಯ್ ಸ್ವಪ್ನಿಕಾ ಮಾಡಿದ ವಿಶೇಷ ಉಡುಗೊರೆ ಹೇಗಿದೆ ನೋಡಿ...

ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ಬಗ್ಗೆ ಬಾಯಿಬಿಟ್ಟ ರಶ್ಮಿಕಾ ಮಂದಣ್ಣ! 

ಬಾಯಿಯ ಮೂಲಕ ವಿಜಯ್ ದೇವರಕೊಂಡ ಪೆನ್ಸಿಲ್ ಸ್ಕೆಚ್‌ ಬಿಡಿಸುತ್ತಿರುವ ವಿಡಿಯೋವನ್ನು ಟ್ಟಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ವಿಜಯ್ ರೀ ಟ್ಟೀಟ್ ಮಾಡಿಕೊಂಡು ತಮ್ಮ ಪ್ರೀತಿ ವ್ಯಕ್ತ ಪಡಿಸಿದ್ದಾರೆ. 'ನನ್ನ ತುಂಬು ಹೃದಯ ಪ್ರೀತಿಗಳು. ನಿಮ್ಮಿಂದ ಶಕ್ತಿಯನ್ನು ಸ್ಫೂರ್ತಿಯಾಗಿ ಪಡೆಯುವುದಕ್ಕೆ ಇಚ್ಛಿಸುತ್ತೇನೆ. ಥ್ಯಾಂಕ್ ಯು' ಎಂದು ಟ್ಟೀಟ್‌ ಮಾಡಿದ್ದಾರೆ. ಈ ವಿಡಿಯೋವನ್ನು 1 ಲಕ್ಷಕ್ಕೂ ಹೆಚ್ಚಿನ ನೆಟ್ಟಿಗರು ವೀಕ್ಷಿಸಿದ್ದಾರೆ.

'Beast' ಜೊತೆ ವಿಜಯ್ ದೇವರಕೊಂಡ ಶರ್ಟ್‌ಲೆಸ್‌ ಪೋಸ್‌; ಮಹಿಳಾ ಅಭಿಮಾನಿಗಳಿಂದ ಮತ್ತೊಂದು ಬೇಡಿಕೆ! 

ಇನ್ನು ಜನವರಿಯಲ್ಲಿ ವಿಜಯ್ ದೇವರಕೊಂಡ ಹಾಗೂ ಅನನ್ಯ ಪಾಂಡೆ ಫೈಟರ್ ಚಿತ್ರೀಕರಣ ಆರಂಭಿಸಲಿದ್ದಾರೆ. ಪೂರಿ ಜಗನ್ನಾಥ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ನಿರೀಕ್ಷೆ ಹೆಚ್ಚಿಸಿದೆ. ಸದ್ಯಕ್ಕೆ ವಿಜಯ್ ತಮ್ಮ ಸಾಕು ನಾಯಿಯ ಜೊತೆ ಸಮಯ ಕಳೆಯುತ್ತಾ ಎಂಜಾಯ್ ಮಾಡುತ್ತಿದ್ದಾರೆ.  ಬಿಡುವಿನ ಸಮಯದಲ್ಲಿ ಖಾಸಗಿ ಜಾಹೀರಾತುಗಳಲ್ಲಿ ಭಾಗಿಯಾಗುತ್ತಾರೆ.