ನಟಿ ವಿದ್ಯಾ ಬಾಲನ್ ಅವರು ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಡೀಪ್‌ಫೇಕ್ ವಿಡಿಯೋಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಈ ವಿಡಿಯೋಗಳು ಕೃತಕ ಬುದ್ಧಿಮತ್ತೆಯಿಂದ ರಚಿತವಾಗಿದ್ದು, ತಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಂತಹ ವಿಷಯಗಳನ್ನು ಹಂಚಿಕೊಳ್ಳುವ ಮೊದಲು ಖಚಿತಪಡಿಸಿಕೊಳ್ಳಲು ಅಭಿಮಾನಿಗಳಿಗೆ ವಿನಂತಿಸಿದ್ದಾರೆ. ರಶ್ಮಿಕಾ ಮಂದಣ್ಣ ಸೇರಿದಂತೆ ಅನೇಕ ತಾರೆಯರು ಈ ತಂತ್ರಜ್ಞಾನಕ್ಕೆ ಬಲಿಯಾಗಿದ್ದಾರೆ.

ನವದೆಹಲಿ: ನಟಿ ವಿದ್ಯಾ ಬಾಲನ್ ಅವರು ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಡೀಪ್‌ಫೇಕ್ ವಿಡಿಯೋ ಕುರಿತು ಕೃತಕ ಬುದ್ಧಿಮತ್ತೆಯ ದುರ್ಬಳಕೆ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ. 'ಕಹಾನಿ' ನಟಿ ಈ ನಕಲಿ ವಿಡಿಯೋ ಬಗ್ಗೆ ತಮ್ಮ ಫಾಲೋವರ್ಸ್‌ಗಳಿಗೆ ಎಚ್ಚರಿಕೆ ನೀಡಲು ಮತ್ತು ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಡೀಪ್‌ಫೇಕ್ ವಿಡಿಯೋ ಜೊತೆಗೆ ಹೇಳಿಕೆ ಹಂಚಿಕೊಂಡಿರುವ ವಿದ್ಯಾ, “ನಾನು ಕಾಣಿಸಿಕೊಂಡಿರುವ ಹಲವು ವಿಡಿಯೋಗಳು ಸಾಮಾಜಿಕ ಮಾಧ್ಯಮ ಮತ್ತು ವಾಟ್ಸಾಪ್‌ನಲ್ಲಿ ಹರಿದಾಡುತ್ತಿವೆ. ಆದಾಗ್ಯೂ, ಈ ವಿಡಿಯೋಗಳು AI-ಜನರೇಟೆಡ್ ಮತ್ತು ನಕಲಿ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಈ ವಿಡಿಯೋಗಳನ್ನು ಮಾಡಿ ಹಂಚುವಲ್ಲಿ ನನ್ನ ಯಾವುದೇ ಪಾತ್ರವಿಲ್ಲ ಮತ್ತು ಯಾವುದೇ ರೀತಿಯಲ್ಲಿ ಇಂತಹ ವಿಷಯವನ್ನು ನಾನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

4 ವರ್ಷದಿಂದ ಸಿನೆಮಾಗಳಿಂದ ದೂರವಿರುವ 700 ಕೋಟಿ ಆಸ್ತಿ ಒಡತಿ, 72 ಕೋಟಿ ಮೌಲ್ಯದ ಗೌನ್! ಯಾರೀಕೆ?

ಇಂತಹ ವಿಷಯಗಳನ್ನು ಹಂಚಿಕೊಳ್ಳುವ ಮೊದಲು ಎಚ್ಚರಿಕೆ ವಹಿಸುವಂತೆ ಮತ್ತು ಈ ಬಗ್ಗೆ ಖಚಿತಪಡಿಸಿಕೊಳ್ಳುವಂತೆ ವಿದ್ಯಾ ತಮ್ಮ ಅಭಿಮಾನಿಗಳಿಗೆ ವಿನಂತಿಸಿದ್ದಾರೆ. "ಈ ವಿಡಿಯೋದಲ್ಲಿ ಮಾಡಲಾದ ಯಾವುದೇ ಹೇಳಿಕೆಗಳನ್ನು ನನಗೆ ಹೋಲಿಸಬೇಡಿ, ಏಕೆಂದರೆ ಅದು ನನ್ನ ಅಭಿಪ್ರಾಯಗಳು ಅಥವಾ ಕೆಲಸವನ್ನು ಪ್ರತಿಬಿಂಬಿಸುವುದಿಲ್ಲ. ವಿಡಿಯೋ ಹಂಚಿಕೊಳ್ಳುವ ಮೊದಲು ಮಾಹಿತಿಯನ್ನು ಖಚಿತಪಡಿಸಿಕೊಳ್ಳಿ ಮತ್ತು ಈ ರೀತಿಯ ದಾರಿ ತಪ್ಪಿಸುವ AI-ಜನರೇಟೆಡ್ ವಿಷಯದ ಬಗ್ಗೆ ಜಾಗರೂಕರಾಗಿರಿ ಎಂದು ನಾನು ಎಲ್ಲರನ್ನು ಒತ್ತಾಯಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಪ್ರೆಗ್ನೆನ್ಸಿ ಅನೌನ್ಸ್ ಆದ್ಮೇಲೆ ಹೊಸ ಲುಕ್‌ನಲ್ಲಿ ಕಾಣಿಸಿದ ಕಿಯಾರಾ ಅಡ್ವಾಣಿ

ಅತ್ಯಂತ ನೈಜವಾಗಿ ಕಾಣುವಂತೆ ಫೇಕ್ ವಿಚಾರವನ್ನು ಸತ್ಯ ಎಂದು ತೋರಿಸಲು ಸಾಧ್ಯವಾಗುವ ಡೀಪ್‌ಫೇಕ್ ತಂತ್ರಜ್ಞಾನವು ವೇಗವಾಗಿ ಸೆಲೆಬ್ರಿಟಿಗಳನ್ನು ಗುರಿಯಾಗಿಸಿಕೊಂಡಿದೆ. ರಶ್ಮಿಕಾ ಮಂದಣ್ಣ, ಆಲಿಯಾ ಭಟ್, ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ಅಮೀರ್ ಖಾನ್ ಮತ್ತು ರಣವೀರ್ ಸಿಂಗ್ ಸೇರಿದಂತೆ ಅನೇಕ ಭಾರತೀಯ ಚಲನಚಿತ್ರ ತಾರೆಯರು ಈ ರೀತಿಯ ಕುತಂತ್ರಕ್ಕೆ ಬಲಿಯಾಗಿದ್ದಾರೆ.

'ಇನ್ನು ವಿದ್ಯಾ ಬಾಲನ್ ಕೊನೆಯ ಬಾರಿಗೆ ಕಾರ್ತಿಕ್ ಆರ್ಯನ್, ಮಾಧುರಿ ದೀಕ್ಷಿತ್ ಮತ್ತು ತೃಪ್ತಿ ಡಿಮ್ರಿ ಅವರೊಂದಿಗೆ 'ಭೂಲ್ ಭುಲಯ್ಯ 3' ಚಿತ್ರದಲ್ಲಿ ಕಾಣಿಸಿಕೊಂಡರು. ಕಳೆದ ವರ್ಷ ದೀಪಾವಳಿಯಂದು ಬಿಡುಗಡೆಯಾದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಗಳಿಸಿತು.