Asianet Suvarna News Asianet Suvarna News

ರಿಲೀಸ್ ಆಯ್ತು, ಈ ವರ್ಷದ ಸೆಕ್ಸಿಯಸ್ಟ್ ಸಾಂಗ್- ವಿಕ್ಕಿ-ತೃಪ್ತಿಯ ಜಲಕ್ರೀಡೆಗೆ ಫ್ಯಾನ್ಸ್ ಕಕ್ಕಾಬಿಕ್ಕಿ

Sexiest Song of the Year: ಚಳಿಯಿಂದ ಮುದುರಿಕೊಳ್ಳುವ ಟೈಮ್‌ನಲ್ಲಿ ಜನಮ್ ಟೀಸರ್ ಪಡ್ಡೆಹೈಕಳ ಬಿಸಿಯೇರಿಸುತ್ತಿದೆ. ವಿಕ್ಕಿ ಕೌಶಲ್ ಮತ್ತು ತೃಪ್ತಿ ತಾವು ನೀರಿನಲ್ಲಿ ಒದ್ದೆಯಾಗಿ ನೋಡುಗರ ಕಿಕ್ ಏರಿಸಿದ್ದಾರೆ.

vicky Kaushal and Triptii Dimri bad newsz movie jaanam song release mrq
Author
First Published Jul 9, 2024, 4:28 PM IST

ಮುಂಬೈ: ಬಾಲಿವುಡ್ ಬ್ಯಾಡ್ ನ್ಯೂಸ್ ಸಿನಿಮಾ ಜುಲೈ 19ರಂದು ತೆರೆಗೆ ಬರಲಿದ್ದು, ಚಿತ್ರದ ಪ್ರಮೋಷನ್ ಭರ್ಜರಿಯಿಂದ ಸಾಗುತ್ತಿದೆ. ಚಿತ್ರದಲ್ಲಿ ಉರಿ ಖ್ಯಾತಿಯ ವಿಕ್ಕಿ ಕೌಶಲ್ ಮತ್ತು ಅನಿಮಲ್ ಹಾಟ್ ಚೆಲುವೆ ತೃಪ್ತಿ ದಿಮ್ರಿ ಮೊದಲ ಬಾರಿಗೆ ತೆರೆಯ ಮೇಲೆ ಒಂದಾಗಿದ್ದು, ಇಬ್ಬರ ಕೆಮಿಸ್ಟ್ರಿ ವರ್ಕೌಟ್ ಆಗಿರೋದನ್ನು ಜನಮ್ ಹಾಡು ತೋರಿಸುತ್ತಿದೆ. ಹಾಗಾಗಿಯೇ ಸಿನಿಮಾ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.  ಫಿಲಂ ಟೀಸರ್ ಮತ್ತು ಟ್ರೈಲರ್ ಭರವಸೆಯನ್ನು ಮೂಡಿಸಿದೆ. ಕೆಲ ದಿನಗಳ ಹಿಂದೆ ತೌಬಾ ತೌಬಾ ಹಾಡು ಬಿಡುಗಡೆಯಾಗಿದ್ದು, ಸಂಗೀತ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ತೌಬಾ ತೌಬಾ ಟ್ರೆಂಡಿಂಗ್ ಹಾಡುಗಳಲ್ಲಿ ಒಂದಾಗಿದೆ. 

ತೌಬಾ ತೌಬಾ ಹಿಟ್ ಆಗಿರುವ ಸಂದರ್ಭದಲ್ಲಿ ಮಗದೊಂದು ಹಾಡನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. ವಿಕ್ಕಿ ಮತ್ತು ತೃಪ್ತಿಯ ಜಲಕ್ರೀಡೆಗೆ ಯುವ ಜನತೆ ಫಿದಾ ಆಗಿದ್ದು, ಸಂಪೂರ್ಣ ಹಾಡು ನೋಡಿ ರೋಮಾಂಚಿತರಾಗಿ ಕಮೆಂಟ್ ಮಾಡುತ್ತಿದ್ದಾರೆ. ಜುಲೈ 7ರಂದು ವಿಕ್ಕಿ ಕೌಶಲ್ ಮತ್ತು ತೃಪ್ತಿಯ ಜಲಕ್ರೀಡೆಯ ವಿಡಿಯೋ ತುಣಕನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಕ್ಲಿಪ್ ಮೂಲಕ ಜುಲೈ 9ರಂದು ಸಂಪೂರ್ಣ ಹಾಡು ರಿಲೀಸ್ ಆಗಲಿದೆ ಎಂಬ ಮಾಹಿತಿಯನ್ನು ನೀಡಿದ್ದರು.

'ಅವಳು ತುಂಬಾ ಕೆಟ್ಟ ಕಿಸ್ಸರ್' ಎಂದಿದ್ಕೆ ಇಮ್ರಾನ್ ಹಶ್ಮಿ ಜೊತೆ 20 ವರ್ಷ ಮಾತು ಬಿಟ್ಟಿದ್ದ ಖ್ಯಾತ ನಟಿ!

ಜುಲೈ 7ರಂದು ಜನಮ್ ಹಾಡಿನ ಪೋಸ್ಟರ್ ರಿಲೀಸ್ ಆಗಿತ್ತು. ಇಂದು ಹಾಡಿನ ಟೀಸರ್ ಬಿಡುಗಡೆಗೊಳಿಸಲಾಗಿದೆ. ದೇಶದ ಬಹುತೇಕ ಎಲ್ಲಾ ಪ್ರದೇಶದಲ್ಲಿ ಮಳೆ ಶುರುವಾಗಿದ್ದು, ಶೀತಮಯ ವಾತಾವರಣ ನಿರ್ಮಾಣವಾಗಿದೆ. ಚಳಿಯಿಂದ ಮುದುರಿಕೊಳ್ಳುವ ಟೈಮ್‌ನಲ್ಲಿ ಜನಮ್ ಟೀಸರ್ ಪಡ್ಡೆಹೈಕಳ ಬಿಸಿಯೇರಿಸಿತ್ತು. ವಿಕ್ಕಿ ಕೌಶಲ್ ಮತ್ತು ತೃಪ್ತಿ ತಾವು ನೀರಿನಲ್ಲಿ ಒದ್ದೆಯಾಗಿ ನೋಡುಗರ ಕಿಕ್ ಏರಿಸಿದ್ದಾರೆ. ಈ ಹಾಡಿನಲ್ಲಿ ಇಬ್ಬರು ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿರೋದು ಟ್ರೀಲರ್ ಮೂಲಕ ಕನ್ಫರ್ಮ್ ಆಗಿದೆ.

'ಬ್ಯಾಡ್ ನ್ಯೂಸ್' ಆನಂದ್ ತಿವಾರಿ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ರೊಮ್ಯಾಂಟಿಕ್ ಮತ್ತು ಹಾಸ್ಯ ಪ್ರಧಾನ ಚಿತ್ರವಾಗಿದೆ. ಯಶ್ ಜೋಹರ್, ಕರಣ್ ಜೋಹರ್, ಅಪೂರ್ವ ಮೆಹ್ತಾ, ಅಮೃತಪಾಲ್ ಸಿಂಗ್ ಬಿಂದ್ರಾ ಮತ್ತು ಆನಂದ್ ತಿವಾರಿ ಚಿತ್ರಕ್ಕೆ ಬಂಡವಾಳ ಹೂಡಿಕೆ ಮಾಡಿದ್ದಾರೆ. ವಿಕ್ಕಿ ಕೌಶಲ್, ತೃಪ್ತಿ ದಿಮ್ರಿ ಮತ್ತು ಆಮಿ ವಿರ್ಕ್ ಮೂವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧರ್ಮ ಪ್ರೊಡಕ್ಷನ್ಸ್ ಮತ್ತು ಲಿಯೋ ಮೀಡಿಯಾ ಕಲೆಕ್ಟಿವ್ ಸಹಯೋಗದಲ್ಲಿ ಅಮೆಜಾನ್ ಪ್ರೈಮ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ ಎಂದು ಇಶಿತಾ ಮೊಯಿತ್ರಾ ಮತ್ತು ತರುಣ್ ದುಡೇಜಾ ಹೇಳಿದ್ದಾರೆ. 

Bad Newz ತೃಪ್ತಿ ದಿಮ್ರಿ ಜೊತೆ ಈಜುಕೊಳದಲ್ಲಿ ವಿಕ್ಕಿ ರೊಮ್ಯಾನ್ಸ್, ಕತ್ರೀನಾಗೆ ಟ್ಯಾಗ್ ಮಾಡಿದ ನೆಟ್ಟಿಗರು!

Latest Videos
Follow Us:
Download App:
  • android
  • ios