Asianet Suvarna News Asianet Suvarna News

Lata Mangeshkar: ಗಾನ ಕೋಗಿಲೆಯ ಯುಗಳ ಗೀತೆಗಳು, ಕೇಳಿದಷ್ಟು ಮೃದುವಾಗುತ್ತಿತ್ತು ಹೃದಯಗಳು!

* ಅವೆಷ್ಟು ಸುಮಧುರ ಹಾಡುಗಳು, ಮರೆಯಲಾರದಷ್ಟು ನೆನಪುಗಳು
* ಭಾರತೀಯ ಸಂಗೀತ ಕ್ಷೇತ್ರದ ಸುಮಧುರ ದನಿಯ ಅವಿಸ್ಮರಣೀಯ ಯುಗಳ ಗೀತೆಗಳು
* ಲತಾ ಮಂಗೇಷ್ಕರ್ ಜೊತೆ ಪುರುಷ ಗಾಯಕರು ಹಾಡಿದ ಸ್ಮರಣೀಯ 10 ಗೀತೆಗಳು

vetearn Singer Lata Mangeshkar Passed Away at her 92 Indian nightingales best duets with male singers san
Author
Bangalore, First Published Feb 6, 2022, 10:09 AM IST | Last Updated Aug 4, 2022, 8:08 PM IST

ಮುಂಬೈ (ಫೆ.06): ಭಾರತದ ಗಾನ ಕೋಗಿಲೆ ಎಂದೇ ಖ್ಯಾತಿ ಗಳಿಸಿದ ಹಿರಿಯ ಹಿನ್ನೆಲೆ ಗಾಯಕಿ ಸಂಗೀತ ಸರಸ್ಮತಿ ಲತಾ ಮಂಗೇಶ್ಕರ್ (Lata Mangeshkar) ನಿಧನರಾಗಿದ್ದಾರೆ. ಆದರೆ, ಅವರು ಹಾಡಿರುವ ಹಾಡುಗಳು ಎಂದೆಂದಿಗೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ. ತಮ್ಮ ಸುದೀರ್ಘ ವರ್ಷಗಳ ಗಾಯನ ಜೀವನದಲ್ಲಿ 5 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡಿದ್ದಾರೆ. ಇದರಲ್ಲಿ ಫೇವರೆಟ್ ಗೀತೆಗಳನ್ನು ಆಯ್ಕೆ ಮಾಡುವುದು ಅಷ್ಟು ಸುಲಭವಲ್ಲ. ಹಾಗಿದ್ದರೂ, ಪುರುಷರ ಗಾಯಕರ ಜೊತೆ ಲತಾ ಮಂಗೇಷ್ಕರ್ ಹಾಡಿದ ಸ್ಮರಣೀಯ ಯುಗಳ ಗೀತೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಅಲ್ಬೇಲಾ, 1951: ಶೋಲಾ ಜೋ ಭಡ್ಕೆ ದಿಲ್ ಮೇರಾ ಧಡ್ಕೆ-ಆರ್ ಎನ್ ಚಿತಾಲ್ಕರ್
ಆರ್‌ಡಿ ಬರ್ಮನ್‌ಗಿಂತ ಮೊದಲು, ಸಿ ರಾಮಚಂದ್ರ ಅವರು ಜಾಝ್ ಮತ್ತು ರಾಕ್ ಎನ್' ರೋಲ್‌ನ ಪ್ರಭಾವದಿಂದ ವಿವಿಧ ಭಾರತೀಯೇತರ ಸಂಗೀತ ಪ್ರಕಾರಗಳನ್ನು ಪ್ರಯೋಗಿಸಿದರು. ‘ಶೋಲಾ ಜೋ ಭಡ್ಕೆ’ಯಲ್ಲಿ, ಅವರು ನಿಜವಾಗಿಯೂ ಮುಖ್ಯವಾಹಿನಿಯಿಂದ ದೂರ ಸರಿದು ಸಂಗೀತ ಸಂಯೋಜನೆ ಮಾಡಿದ್ದರು. ಹಾಡಿನಲ್ಲಿ ನಿಜವಾಗಿಯೂ ಎದ್ದುಕಾಣುವ ವಿಷಯವೆಂದರೆ ಮಾಧುರ್ಯ ಅದು ಚಿತಾಲ್ಕರ್ ಮತ್ತು ಲತಾ ಮಂಗೇಷ್ಕರ್ ಅವರ ದನಿಯಲ್ಲಿ ಎದ್ದು ಕಾಣುತ್ತಿತ್ತು. ಇದಕ್ಕಾಗಿ ಸಾಕಷ್ಟು ಮನ್ನಣೆಯನ್ನು ಪಡೆದುಕೊಂಡಿದ್ದರು. 

ತರಾನಾ, 1951: ಸೀನೆ ಮೇ ಸುಲಾಗ್ತೆ ಹೈ ಅರ್ಮಾನ್-ತಲತ್ ಮಹಮೂದ್
ಬಹುಶಃ ಈ ಪಟ್ಟಿಯಲ್ಲಿ ಇರುವ ಇತರ ಎಲ್ಲಾ ಹಾಡುಗಳಿಗಿಂತ ಈ ಹಾಡಿಗೆ ಒಂದು ಅಲೌಕಿಕ ಸೌಂದರ್ಯವಿದೆ. ಅನಿಲ್ ಬಿಸ್ವಾಸ್ ಅವರ ಕಾಡುವ ಮಾಧುರ್ಯ, ತಲತ್ ಮಹಮೂದ್ ಅವರ ಪಿಸುಗುಟ್ಟುವ ಧ್ವನಿ ಮತ್ತು ಲತಾ ಅವರ ಸಂಯಮದ ಗಾಯನವು ಪ್ರೇಮ್ ಧವನ್ ಅವರ ಕೆಲವು ಸುಂದರವಾದ ಸಾಹಿತ್ಯವನ್ನು ಮನೋಜ್ಞವಾಗಿ ವಿವರಿಸಿದೆ. ಈ ಹಾಡಿನಲ್ಲಿ ಲತಾ ಮಂಗೇಷ್ಕರ್ ಅವರ ದನಿಗೆ ಮನಸೋಲದವರೇ ಇಲ್ಲ.

ಶ್ರೀ 420, 1955: ಪ್ಯಾರ್ ಹುವಾ ಇಕ್ರಾರ್ ಹುವಾ-ಮನ್ನಾ ಡೇ
ಭಾರೀ ಮಳೆಯಲ್ಲಿ ಪ್ರೇಮಿಗಳಿಬ್ಬರು ಛತ್ರಿಯನ್ನು ಹಿಡಿದು "ಪ್ಯಾರ್ ಹುವಾ.." ಎಂದು ಹಾಡುವುದು ಹಿಂದಿ ಚಲನಚಿತ್ರಗಳಲ್ಲಿ ಶಾಶ್ವತವಾಗಿ ಸ್ಥಾನ ಪಡೆದ ಕ್ಷಣಗಳು. ಮನ್ನಾ ಡೇ ಹಾಗೂ ಲತಾ ಮಂಗೇಷ್ಕರ್ ಅವರ ಗಾಯನಕ್ಕೆ ಇಲ್ಲಿ ಸೋಲದವರು ಯಾರಿದ್ದಾರೆ. ರಾಜ್ ಕಪೂರ್ ಹಾಗೂ ನರ್ಗೀಸ್ ಕೂಡ ತರೆಯ ಮೇಲೆ ಮನೋಜ್ಞವಾಗಿ ಕಾಣಿಸಿಕೊಳ್ಳುವ ಮೂಲಕ ಲತಾ ಅವರ ಸಂಗೀತ ಜೀವನದ ಅತ್ಯಂತ ಯಶಸ್ವಿ ಗೀತೆಗಳಲ್ಲಿ ಒಂದಾಗಿಸಿದ್ದರು.

Latha Mangeshkar: ಶಾರದೆಯ ಪಾದ ಸೇರಿದ ಲತಾ ಮಗೇಶ್ಕರ್, ಹಾಡು ನಿಲ್ಲಿಸಿದ ಗಾನ ಕೋಗಿಲೆ

ಮಧುಮತಿ, 1958: ದಿಲ್ ತಡಪ್ ತಡಪ್ ಕೆ ಕಹ್ ರಹಾ ಹೈ-ಮುಖೇಶ್
ಚಿತ್ರದ ನಟ ದಿಲೀಪ್ ಕುಮಾರ್ ಮತ್ತು ಚಿತ್ರದ ವಿತರಕರ ಶಿಫಾರಸಿನ ವಿರುದ್ಧ ಹೋದ ಬಿಮಲ್ ರಾಯ್ ಅವರು ಮಧುಮತಿಗಾಗಿ ಸಲೀಲ್ ಚೌಧರಿ ಅವರನ್ನು ಸಹಿ ಮಾಡಿದರು. ಮಧುಮತಿ ಚಿತ್ರದಲ್ಲಿ ದಿಲ್ ತಡಪ್ ತಡಪ್ ಕೆ ಕಹ್ ರಹಾ ಹೇ ಎಂದು ಲತಾ ಮಂಗೇಷ್ಕರ್ ಹಾಗೂ ಮುಖೇಶ್ ಹಾಡುತ್ತಿದ್ದರೆ, ತೆರೆಯ ಮೇಲೆ ತಾವೇ ಹಾಡುತ್ತಿದ್ದೇವೇನೋ ಎನ್ನುವಂತೆ ಪ್ರೇಕ್ಷಕರು ಇರುತ್ತಿದ್ದರು.

ಮಾಯಾ, 1961: ತಸ್ವೀರ್ ತೆರೆ ದಿಲ್ ಮೇ-ಮೊಹಮದ್ ರಫಿ
ಮಧುಮತಿ ಯಶಸ್ಸಿನ ಬಳಿ ಸಲೀಲ್ ಚೌಧರಿಗೆ ಮತ್ತಷ್ಟು ಹೊಸ ಮಾದರಿಯ ಸಂಗೀತವನ್ನು ಹೊರಹಾಕಿದರು. ಅದರಲ್ಲಿ ಮಾಯಾ ಚಿತ್ರದ ತಸ್ವೀರ್ ತೆರೆ ದಿಲ್ ಮೇ ಹಾಡು ಮುಖ್ಯವಾದದು. ಲತಾ ಮಂಗೇಷ್ಕರ್ ಗೆ ಈ ಹಾಡಿನಲ್ಲಿ ಜೋಡಿಯಾಗಿದ್ದು ದಿಗ್ಗಜ ಮೊಹಮದ್ ರಫಿ. ಈ ಚಿತ್ರದ ಬಳಿಕ ರಫಿ ಹಾಗೂ ಲತಾ ಅವರ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿದ್ದರಿಂದ ಕೆಲ ವರ್ ಜೊತೆಯಾಗಿ ಹಾಡಿರಲಿಲ್ಲ. 1967ರಲ್ಲಿ ಮತ್ತೊಮ್ಮೆ ಅವರು ಜೊತೆಯಾಗಿ ಹಾಡಲು ಆರಂಭಿಸಿದ್ದರು.

ಮಮ್ತಾ, 1966: ‘ಛುಪಾ ಲೋ ಯುನ್ ದಿಲ್ ಮೇ ಪ್ಯಾರ್ ಮೇರಾ’- ಹೇಮಂತ್ ಕುಮಾರ್
‘ಛುಪಾ ಲೊ...’ ಒಂದು ಆಳವಾದ ಆಧ್ಯಾತ್ಮಿಕ ಗೀತೆಯಾಗಿದ್ದರೊಂದಿಗೆ ಒಂದು ಪ್ರಣಯಭರಿತ ಗೀತೆಯೂ ಆಗಿದೆ. ಸುಲ್ತಾನ್ ಪುರಿ ಅವರ ಸಾಹಿತ್ಯಕ್ಕೆ ರೋಶನ್ ಅವರ ಸಂಗೀತ ಸಂಯೋಜನೆಯಲ್ಲಿ ಹೇಮಂತ್ ಕುಮಾರ್ ಹಾಗೂ ಲತಾ ಮಂಗೇಷ್ಕರ್ ದನಿಯಲ್ಲಿ ಈ ಹಾಡನ್ನು ಕೇಳುತ್ತಿದ್ದರೆ ಆ ಸಂತೋಷವನ್ನು ವರ್ಣಿಸಲು ಸಾಧ್ಯವಿಲ್ಲ. ಮೂರು ನಿಮಿಷದ ಈ ಹಾಡಿನಲ್ಲಿ ಏನಿಲ್ಲ ಅನ್ನುವಂತೆಯೇ ಇಲ್ಲ.

Lata Mangeshkar Faced Rejection: ತೆಳು ಧ್ವನಿ ಎಂದು ಲತಾರನ್ನು ರಿಜೆಕ್ಟ್‌ ಮಾಡಿದ್ದರು ಈ ವ್ಯಕ್ತಿ

ಪರಿಚಯ್, 1972: ‘ಬೀಟಿ ನಾ ಬಿತಾಯೆ ರೈನಾ’-ಭೂಪಿಂದರ್ ಸಿಂಗ್
ಆರ್‌ಡಿ ಬರ್ಮನ್ ಮತ್ತು ಗುಲ್ಜಾರ್ ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡಿದ ಚಿತ್ರವಿದು. ಲತಾ ಮಂಗೇಷ್ಕರ್ ಈ ಹಾಡಿನ ಗಾಯನಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಈ ಹಾಡಿನಲ್ಲಿ ಲತಾ ಅವರಷ್ಟೇ ಮನೋಜ್ಞವಾಗಿ ಭೂಪಿಂದರ್ ಸಿಂಗ್ ತಮ್ಮ ದನಿ ನೀಡಿದ್ದರು.

ಆಂಧಿ, 1975: ‘ತೇರೆ ಬಿನಾ ಜಿಂದಗಿ ಸೆ ಕೋಯಿ’-ಕಿಶೋರ್ ಕುಮಾರ್
ಲತಾ ಮಂಗೇಶ್ಕರ್ ಅವರು ಮುಖೇಶ್ ಭಯ್ಯಾ ಅವರನ್ನು ಗೌರವದಿಂದ ನೋಡದ್ದರೆ, ಕಿಶೋರ್ ಕುಮಾರ್ ಅವರನ್ನು ಕಿರಿಯ ಸಹೋದರನಂತೆ ಕಂಡಿದ್ದರು. ಇಂದಿಗೂ ಈ ಹಾಡನ್ನು ಕೇಳುತ್ತಿದ್ದರೆ, ಲತಾ ಮಂಗೇಷ್ಕರ್ ಸ್ಮರಣೆ ಮಾಡಿಕೊಳ್ಳದೇ ಇರುವುದಿಲ್ಲ. ಇದೊಂದೇ ಚಿತ್ರದಲ್ಲಿ ಲತಾ ಹಾಗೂ ಕಿಶೋರ್ ಕುಮಾರ್ ಅವರ ಮೂರು ಯುಗಳ ಗೀತೆಗಳಿದ್ದು, ಎಲ್ಲವೂ ಸೂಪರ್ ಹಿಟ್. ಅದರಲ್ಲಿ ಈ ಹಾಡು ನಂ.1 ಅನ್ನೋದಂತೂ ಪಕ್ಕಾ

ತ್ರಿಶೂಲ್, 1978: "ಆಪ್ಕಿ ಮೆಹ್ಕಿ ಹುಯಿ’-ಕೆಜೆ ಯೇಸುದಾಸ್
ಭಾಷೆ ಮತ್ತು ಹಲವಾರು ವರ್ಷಗಳಿಂದ ತಮ್ಮ ಗಾಯನ ವೃತತ್ತಿಯಿಂದಾಗಿ ಲತಾ ಮಂಗೇಷ್ಕರ್ ಹಾಗೂ ಯೇಸುದಾಸ್ ಕೆಲವೇ ಕೆಲವು ಯುಗಳ ಗೀತೆಯನ್ನು ಹಾಡಿದ್ದಾರೆ.  ಹೆಚ್ಚಿನ ಆಯ್ಕೆ ಇಲ್ಲವಾದರೂ, ಖಯ್ಯಾಮ್ ಮತ್ತು ಸಾಹಿರ್ ಲುಧಿಯಾನ್ವಿ ಅವರ 'ಆಪ್ಕಿ ಮೆಹ್ಕಿ ಹುಯಿ' ಇದರಲ್ಲಿ ಫೇವರಿಟ್ ಎನ್ನಬಹುದು.

ರಂಗ್ ದೇ ಬಸಂತಿ, 2006: "ಲಕ್ಕಾ ಚುಪ್ಪಿ"-ಎಆರ್ ರೆಹಮಾನ್
ದಶಕಗಳ ಕಾಲ ಹಿಂದಿ ಸಂಗೀತ ಲೋಕದ ಅನಭಿಷಿಕ್ತ ರಾಣಿಯಾಗಿ ಮೆರೆದಿದ್ದ ಲತಾ ಮಂಗೇಷ್ಕರ್, 20ನೇ ಶತಮಾನದಲ್ಲಿ ಹಾಡಿದ ಫೇವರಿಟ್ ಹಾಡುಗಳ ಪೈಕಿ 2006ರಲ್ಲಿ ಎಆರ್ ರೆಹಮಾನ್ ಜತೆಗೂಡಿ ಹಾಡಿದ ಲಕ್ಕಾ ಚುಪ್ಪಿ ಗೀತೆ. ವಹೀದಾ ರೆಹಮಾನ್ ನಿರ್ವಹಿಸಿದ ದುಃಖಿತ, ವಯಸ್ಸಾದ ತಾಯಿಯ ಪಾತ್ರಕ್ಕೆ ಲತಾ ಮಂಗೇಶ್ಕರ್ ಧ್ವನಿ ನೀಡಿದ್ದರು.

Latest Videos
Follow Us:
Download App:
  • android
  • ios