Asianet Suvarna News Asianet Suvarna News

ರಾಣಾ ದಗ್ಗುಬಾಟಿ ಲಿಪ್‌ಲಾಕ್ ದೃಶ್ಯ ವೈರಲ್; 'ರಾಣಾ ನಾಯ್ಡು'ಗಾಗಿ ಬೋಲ್ಡ್ ಆದ ತೆಲುಗು ಸ್ಟಾರ್

 ರಾಣಾ ದಗ್ಗುಬಾಟಿ ನಟನೆಯ ರಾಣಾ ನಾಯ್ಡು ಸೀರಿಸ್‌ನ ಟೀಸರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ರಾಣಾ ಹೊಸ ಅವತಾರ ಅಭಿಮಾನಿಗಳು ಥ್ರಿಲ್ ಆಗುವಂತೆ ಮಾಡಿದೆ. 

Venkatesh Daggubati and Rana Daggubati starrer Rana Naidu teaser released sgk
Author
First Published Sep 24, 2022, 3:12 PM IST

ತೆಲುಗು ಸ್ಟಾರ್ ರಾಣಾ ದಗ್ಗುಬಾಟಿ ಮತ್ತೆ ಸುದ್ದಿಯಲ್ಲಿದ್ದಾರೆ. ಕೊನೆಯದಾಗಿ ವಿರಾಟ ಪರ್ವಂ ಸಿನಿಮಾ ಮೂಲಕ ರಾಣಾ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಈ ಸಿನಿಮಾ ಹೇಳಿಕೊಳ್ಳುವಷ್ಟು ಖ್ಯಾತಿಗಳಿಸಿಲ್ಲ. ಇದೀಗ ರಾಣಾ ಆಕ್ಷನ್, ಥ್ರಿಲ್ಲಿಂಗ್ ವೆಬ್ ಸೀರಿಸ್ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಹೌದು, ರಾಣಾ ದಗ್ಗುಬಾಟಿ ನಟನೆಯ ರಾಣಾ ನಾಯ್ಡು ಸೀರಿಸ್‌ನ ಟೀಸರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ರಾಣಾ ಹೊಸ ಅವತಾರ ಅಭಿಮಾನಿಗಳು ಥ್ರಿಲ್ ಆಗುವಂತೆ ಮಾಡಿದೆ. ರಾಣಾ ನಾಯ್ಡು ಸೀರಿಸ್‌ನಲ್ಲಿ ರಾಣಾ ದಗ್ಗುಬಾಟಿ ಮತ್ತು ವೆಂಕಟೇಶ್ ದಗ್ಗುಬಾಟಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಈ ಇಬ್ಬರು ಸ್ಟಾರ್ ತೆರೆಹಂಚಿಕೊಂಡಿದ್ದು ಇಬ್ಬರ ಜುಗಲ್ ಬಂದಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಈ ಸೀರಿಸ್‌ನಲ್ಲಿ ರಾಣಾ ಮತ್ತು ವೆಂಕಟೇಶ್ ಇಬ್ಬರು ತಂದೆ ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಆಕ್ಷನ್, ಥ್ರಿಲ್ಲರ್, ಸಸ್ಪೆನ್ಸ್, ಹಿಂಸೆಯಿಂದ ತುಂಬಿರುವ ಈ ಟೀಸರ್ ನಲ್ಲಿ ರಾಣಾ ದಗ್ಗುಬಾಟಿ ಲಿಪ್‌ಲಾಕ್ ಮಾಡಿ ಅಭಿಮಾನಿಗಳಿಗೆ ಶಾಕ್ ನೀಡಿದೆ. ಹೌದು ರಾಣಾ ಈ ಸೀರಿಸ್ ನಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ತೆಲುಗು ಸ್ಟಾರ್ ಲಿಪ್ ಲಾಕ್ ದೃಶ್ಯವೀಗ ವೈರಲ್ ಆಗಿದೆ. ಇನ್ನು ಈ ಟೀಸರ್ ನಲ್ಲಿ ರಾಣಾ ಎಂಟ್ರಿ ಮೆಚ್ಚುಗೆ ಪಡೆದಿದೆ. ಸುರ್ವಿನ್ ಚಾವ್ಲ ಕೂಡ  ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುರ್ವಿನ್ ಚಾವ್ಲಾ, ರಾಣಾ ಮತ್ತು ವೆಂಕಟೇಶ್ ದಗ್ಗುಬಾಟಿ ಅವರನ್ನು ಒಟ್ಟಿಗೆ ರಾಣಾ ನಾಯ್ಡುನಲ್ಲಿ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ. 

ಸೆಲ್ಫಿ ಕೇಳಲು ಬಂದ ಫ್ಯಾನ್ ಫೋನ್‌ ಕಿತ್ತುಕೊಂಡ Rana Daggubati; ತಿರುಪತಿಯಲ್ಲಿ ಇದಕ್ಕೆಲ್ಲ No

ಮೊದಲ ಬಾರಿಗೆ ರಾಣಾ ಅಂಕಲ್ ವೆಂಕಟೇಶ್ ದಗ್ಗುಬಾಟಿ ಜೊತೆ ನಟಿಸಿದ್ದಾರೆ. ಭಾರಿ ಕುತೂಹಲ ಮತ್ತು ನಿರೀಕ್ಷೆ ಮೂಡಿಸಿರುವ ರಾಣಾ ನಾಯ್ಡು ಟೀಸರ್ ಇದೀಗ ಮತ್ತಷ್ಟು ಕಾತರ ಹೆಚ್ಚಿಸಿದೆ. ಅಂದಹಾಗೆ ಬಹುನಿರೀಕ್ಷೆಯ ಈ ಸೀರಿಸ್ ಒಟಿಟಿಗಳ ದೈತ್ಯ ನೆಟ್‌ಫ್ಲಿಕ್ಸ್ ನಲ್ಲಿ ರಿಲೀಸ್ ಆಗುತ್ತಿದೆ.  ಇಂದು (ಸೆಪ್ಟಂಬರ್ 24) ಶನಿವಾರ ನೆಟ್‌ಫ್ಲೆಕ್ಸ್ ಟೀಸರ್ ರಿಲೀಸ್ ಮಾಡಿದೆ. ಟೀಸರ್ ರಿಲೀಸ್ ಮಾಡಿ, 'ದಗ್ಗುಬಾಟಿ ವರ್ಸಸ್ ದಗ್ಗುಬಾಟಿ. ಆದರೆ ಇದು ನಿಮ್ಮ ಪ್ರತಿದಿನದ ಫ್ಯಾಮಲಿ ಡ್ರಾಮ ಅಲ್ಲ. ಮಾವ ಅಳಿಯನ ಫೈಟ್ ನೋಡಿ, ರಾಣಾ ನಾಯ್ಡು ಶೀಘ್ರದಲ್ಲೇ ನಿರೀಕ್ಷಿಸಿ'. ಸದ್ಯ ರಿಲೀಸ್ ಆಗಿರುವ  ಈ ಟೀಸರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ಈ ವ್ಯಕ್ತಿನ ನೋಡಲು ಅವಾಗವಾಗ ಬೆಂಗಳೂರಿಗೆ ಬರ್ತಿರ್ತೀನಿ: Rana Daggubati

ರಾಣಾ ನಾಯ್ಡು ಸಿನಿಮಾದ ಚಿತ್ರೀಕರಣ ಮುಕ್ತಾಯವಾದಗಲೇ ನೆಟ್ ಫ್ಲಿಕ್ಸ್ ಪೋಸ್ಟರ್ ಶೇರ್ ಮಾಡಿತ್ತು. ಆಗಲೆ ಕುತೂಹಲ ಹೆಚ್ಚಾಗಿತ್ತು. ಇದೀಗ ರಿಲೀಸ್ ಆಗಿರುವ ಟೀಸರ್ ಮತ್ತಷ್ಟು ಕ್ಯೂರಿಯಾಸಿಟಿ ಹೆಚ್ಚಿಸಿದೆ. ಸದ್ಯ ಟೀಸರ್ ಮೂಲಕ ಅಭಿಮಾನಿಗಳ ಮುಂದೆ ಬಂದಿರುವ ರಾಣಾ ನಾಯ್ಡು ಯಾವಾಗ ರಿಲೀಸ್ ಆಗಲಿದೆ ಒಟಿಟಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Follow Us:
Download App:
  • android
  • ios