ಸೈಫ್ ಅಲಿ ಖಾನ್ ದಾಳಿ ಬಗ್ಗೆ ಪ್ರತಿಕ್ರಿಯಿಸಲು ಕೇಳಿದಾಗ, ಊರ್ವಶಿ ರೌಟೇಲಾ ತಮ್ಮ ವಜ್ರದ ಆಭರಣಗಳನ್ನು ಪ್ರದರ್ಶಿಸಿ ಟ್ರೋಲ್ ಆದರು. ಮುಂಬೈನ ಕಾನೂನು ಸುವ್ಯವಸ್ಥೆ ಬಗ್ಗೆ ಕಳವಳ ವ್ಯಕ್ತಪಡಿಸಿದ ನಟಿ, ದುಬಾರಿ ವಸ್ತುಗಳನ್ನು ಧರಿಸಲು ಭಯವಿದೆ ಎಂದರು. ಈ ಹೇಳಿಕೆ ಸಾರ್ವಜನಿಕರಿಂದ ಟೀಕೆಗೆ ಗುರಿಯಾಗಿದೆ. ನಟಿ ಈ ಹಿಂದೆಯೂ ವಿವಾದಗಳಲ್ಲಿ ಸಿಲುಕಿದ್ದರು.

ಸದ್ಯ ಬಾಲಿವುಡ್​ನಲ್ಲಿ ಸೈಫ್ ಅಲಿ ಖಾನ್ ಅವರ ಮೇಲೆ ನಡೆದ ದಾಳಿ, ಚಾಕು ಇರಿತ ತಲ್ಲಣ ಸೃಷ್ಟಿಸಿದೆ. ಕೆಲ ದಿನಗಳ ಹಿಂದೆ ಸಲ್ಮಾನ್​ ಮನೆ ಮೇಲೆ ದಾಳಿ, ಈಗ ಈ ಘಟನೆ... ಒಟ್ಟಿನಲ್ಲಿ ಬಾಲಿವುಡ್​ ಇಂಡಸ್ಟ್ರಿ ಶಾಕ್​ನಲ್ಲಿದೆ. ಇಂಥ ಘಟನೆ ನಡೆದಾಗಲೆಲ್ಲಾ ಸಿಕ್ಕಸಿಕ್ಕ ಸಿನಿ ತಾರೆಯರ ಎದುರು ಮೈಕ್​ ಹಿಡಿದು ಅಭಿಪ್ರಾಯ ಕೇಳುತ್ತಾರೆ ಯೂಟ್ಯೂಬರ್ಸ್​ ಮತ್ತು ಮಾಧ್ಯಮದವರು. ಅದೇ ರೀತಿ, ಇದೀಗ ಬಾಲಿವುಡ್​ ನಟಿ ಊರ್ವಶಿ ರೌಟೇಲಾ ಅವರಿಗೂ ಪ್ರಶ್ನೆ ಕೇಳಲಾಗಿದೆ. ತಮಗೆ ಈ ಘಟನೆಯಿಂದ ಏನು ಅನ್ನಿಸಿಸಿತು ಎನ್ನುವುದನ್ನು ಹೇಳುವುದನ್ನು ಬಿಟ್ಟ ಊರ್ವಶಿ ತಮ್ಮ ವಜ್ರದ ಉಂಗುರ, ವಾಚ್​ ಪ್ರದರ್ಶಿಸುವ ಮೂಲ ಸಕತ್​ ಟ್ರೋಲ್​ ಆಗಿದ್ದಾರೆ. 

ಈ ವಿಷಯದ ಬಗ್ಗೆ ಪತ್ರಕರ್ತರೊಬ್ಬರು ಊರ್ವಶಿಗೆ ಕೇಳಿದಾಗ, ನನಗೆ ಮುಂಬೈನಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ ಕಳವಳವಿದೆ ಎಂದಿದ್ದಾರೆ ನಟಿ. ಇದೇ ವೇಳೆ ಸಿಕ್ಕಿದ್ದೇ ಛಾನ್ಸ್​ ಎಂದುಕೊಂಡು ತಾವು ಧರಿಸಿದ್ದ ವಜ್ರದ ಉಂಗುರ ಮತ್ತು ವಜ್ರಲೇಪಿತ ವಾಚ್​ ಪ್ರದರ್ಶಿಸುತ್ತಾ, ನೋಡಿ, ನನ್ನ ಡಾಕು ಮಹಾರಾಜ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 105 ಕೋಟಿ ರೂ.ಗಳನ್ನು ದಾಟಿದೆ. ನನ್ನ ತಾಯಿ ನನಗೆ ಈ ವಜ್ರಖಚಿತ ರೋಲೆಕ್ಸ್ ಅನ್ನು ಉಡುಗೊರೆಯಾಗಿ ನೀಡಿದರು, ಆದರೆ ನನ್ನ ತಂದೆ ನನಗೆ ಉಂಗುರ ಕೊಟ್ಟರು. ಆದರೆ ನಾವು ಅದನ್ನು ಹೊರಗೆ ಬಹಿರಂಗವಾಗಿ ಧರಿಸುವ ಆತ್ಮವಿಶ್ವಾಸ ಹೊಂದಿಲ್ಲ. ಯಾರಾದರೂ ನಮ್ಮ ಮೇಲೆ ದಾಳಿ ಮಾಡಬಹುದು ಎಂಬ ಅಭದ್ರತೆ ಕಾಡುತ್ತಲೇ ಇರುತ್ತದೆ. ಇದು ತುಂಬಾ ದುರದೃಷ್ಟಕರ ಎಂದರು. 

ಸೈಫ್​ಗೆ ಇರಿತ- ಪಾರ್ಟಿ ಮೂಡ್​ನಲ್ಲಿ ಪತ್ನಿ ಕರೀನಾ! ಒಂದು ಗಂಟೆ- ಒಂದು ಕೋಟಿ ರೂ. ಬೇಡಿಕೆ? ನಡೆದಿದ್ದೇನು?

 ಇದರ ನಂತರ, ಪತ್ರಕರ್ತ ಮಾತು ಎಲ್ಲಿಗೋ ಹೋಗುತ್ತಿದೆ ಎಂದು ತಿಳಿದು ಅದನ್ನು ಸೈಫ್ ಅಲಿ ಖಾನ್ ಮತ್ತು ಅವರ ಕುಟುಂಬದ ವಿಷಯಕ್ಕೆ ತಿರುಗಿಸಿದರು. ಸೈಫ್​ ಅಲಿ ಕುಟುಂಬಕ್ಕೆ ಏನು ಹೇಳಲು ಬಯಸುತ್ತೀರಾ ಎಂದು ಪ್ರಶ್ನಿಸಿದರು. ಆಗಲೂ ನಟಿ ಮಾತ್ರ ತಮ್ಮ ವಜ್ರದ ಉಂಗುರ ಮತ್ತು ವಾಚ್​ ಮೇಲೆ ಗಮನ ಕೇಂದ್ರೀಕರಿಸಿ ಇರುವಂತೆ ಕಾಣುತ್ತಿತ್ತು. ಉರ್ವಶಿ ಸಂದರ್ಶನದ ಕ್ಲಿಪ್ ಅನ್ನು ರೆಡ್ಡಿಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ನಟಿ ಸಕತ್​ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. 

ಅಷ್ಟಕ್ಕೂ ನಟಿ ಊರ್ವಶಿ, ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತಾರೆ. ಕೆಲ ತಿಂಗಳ ಹಿಂದೆ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಚಿನ್ನದ ಐ ಫೋನ್‌ ಕಳೆದುಕೊಂಡೆ ಎಂದು ಹೇಳುವ ಮೂಲಕ ಸದ್ದು ಮಾಡಿದ್ದರು. ಅದಾದ ಬಳಿಕ ಈಕೆಯ ಹುಟ್ಟುಹಬ್ಬದಂದು ಗಾಯಕ ಯೋಯೋ ಸಿಂಗ್‌ ಚಿನ್ನದ ಕೇಕ್‌ ಮಾಡಿಸಿಕೊಂಡು ಬಂದು ಸುದ್ದಿಯಾಗಿದ್ದರು. ಕೊನೆಗೆ, ಅವರು ಜಾಲತಾಣದಲ್ಲಿ ಹಲ್‌ಚಲ್‌ ಸೃಷ್ಟಿಸಿದ್ದು, ಸ್ನಾನಕ್ಕೆಂದು ಬಾತ್‌ರೂಮ್‌ಗೆ ಹೋಗಿರುವ ವಿಡಿಯೋ ಒಂದು ವೈರಲ್‌ ಆಗಿದ್ದ ಕಾರಣದಿಂದ, ಈ ವಿಡಿಯೋದಲ್ಲಿ ನಟಿ ಕೂದಲನ್ನು ಸರಿ ಮಾಡಿಕೊಂಡು ಬಾತ್‌ರೂಮ್‌ಗೆ ಹೋಗುವುದನ್ನು ನೋಡಬಹುದು. ಅಲ್ಲಿ ಬಟ್ಟೆ ತೆಗೆಯಲು ಕೈಹಾಕಿದ್ದರು. ಅಷ್ಟರಲ್ಲಿ ವಿಡಿಯೋ ಕಟ್‌ ಆಗಿತ್ತು. ನಂತರ ನಟಿ, ಇದು ವಿಷಾದನೀಯ ಘಟನೆ ಎಂದಿದ್ದರು. ಆ ವಿಡಿಯೋ ನೋಡಿ ನನಗೂ ಆ ಕ್ಷಣದಲ್ಲಿ ಶಾಕ್​ ಆಯಿತು. ಇದು ಹೇಗೆ ಲೀಕ್​ ಆಯಿತು ಎನ್ನುವುದು ಗೊತ್ತಿಲ್ಲ. ಆದರೆ ಅದು ನನ್ನ ಸಿನಿಮಾದ ಶೂಟಿಂಗ್​ ಕ್ಲಿಪ್ಪಿಂಗೇ ವಿನಾ ಅಸಲಿಯದ್ದು ಅಲ್ಲ ಎಂದಿದ್ದರು. 

ನನ್ನ ಜಾತಕದಲ್ಲಿ ಕಟನಿ ಯೋಗ, ಮದ್ವೆಯಾದ್ರೆ ತೊಂದ್ರೆ ಎನ್ನುತ್ತಲೇ ನೋವು ಬಿಚ್ಚಿಟ್ಟ ಊರ್ವಶಿ ರೌಟೇಲಾ !