Asianet Suvarna News Asianet Suvarna News

ರಾಮನಿಗಾಗಿ ಹವನ ಮಾಡಿದ ಉರ್ಫಿ; ಘರ್ ವಾಪ್ಸಿನಾ ಕೇಳಿದ್ರು ಫಾಲೋವರ್ಸ್

ಜ.22 ರಾಮ ಮಂದಿರ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಹಿಂದುವೂ ತಮ್ಮದೇ ಆದ ರೀತಿಯಲ್ಲಿ ಈ ಕಾರ್ಯಕ್ರಮವನ್ನು ಸಂಭ್ರಮಿಸುತ್ತಿದ್ದಾರೆ. ಜನಗಳ ಗಮನ ಸೆಳೆಯಲು ಯಾವತ್ತೂ ಹಿಂದೆ ಬೀಳದ ಉರ್ಫಿ ಜಾವೇದ್ ಕೂಡಾ ಹವನ ಮಾಡಿ ಎಲ್ಲರಿಗೂ ವಿಶ್ ಮಾಡಿದ್ದಾಳೆ.

Urfi Javed performing Havan on account of Ayodhya Ram Mandir Inauguration skr
Author
First Published Jan 22, 2024, 10:53 AM IST | Last Updated Jan 22, 2024, 10:57 AM IST

ಜನವರಿ 22 ದೇಶಕ್ಕೆ ದೇಶವೇ ಹಬ್ಬದ ಸಂಭ್ರಮದಲ್ಲಿ ಮಿಂದೇಳುತ್ತಿದೆ. ಶ್ರೀರಾಮ ತನ್ನೂರು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆಗೊಳ್ಳುವುದನ್ನು ನೋಡಲು ಜಗತ್ತಿನಾದ್ಯಂತ ಪ್ರತಿಯೊಬ್ಬ ಹಿಂದೂಗಳೂ ಕಾತರರಾಗಿದ್ದಾರೆ. ಈ ನಡುವೆ ಸದಾ ತನ್ನ ಉಡುಪಿನಿಂದ ಸುದ್ದಿಯಲ್ಲಿರುವ ಉರ್ಫಿ ಜಾವೇದ್ ಕೂಡಾ ಇಂದು ಸ್ವತಃ ಹವನ ಮಾಡಿ, ಈ ದಿನವನ್ನು 'ಆಚರಿಸುತ್ತಿರುವ ಎಲ್ಲರಿಗೂ ಅಭಿನಂದನೆಗಳು' ಎಂದಿದ್ದಾಳೆ. 

ಹೌದು, ಗಾಢ ನೀಲಿ ಬಣ್ಣದ ಸಲ್ವಾರ್ ಕಮೀಜ್ ಧರಿಸಿ ಉರ್ಫಿ ಹೋಮಕುಂಡಕ್ಕೆ ತುಪ್ಪ ಹಾಕುತ್ತಿರುವ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪಕ್ಕದಲ್ಲಿ ಪಂಡಿತ್‌ಜೀ ಕುಳಿತು ಹವನ ನಡೆಸಿಕೊಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದಕ್ಕೆ ಉರ್ಫಿ ಬ್ಯಾಕ್‌ಗ್ರೌಂಡ್‌ನಲ್ಲಿ ರಾಮ ಭಜನೆಯ ಆಡಿಯೋ ಹಾಕಿದ್ದಾರೆ. 

ಹಾಟ್ನೆಸ್ ಓವರ್ ಲೋಡೆಡ್; ಸಂಯುಕ್ತಾ ಜಿಮ್ ಸೆಲ್ಫಿಗಳಿಗೆ ಫಾಲೋವರ್ಸ್ ಫಿದಾ

ಉರ್ಫಿಯ ಈ ಹೊಸ ಅವತಾರ ಆಕೆಯ ಹಿಂಬಾಲಕರಲ್ಲಿ ಅಚ್ಚರಿ ಮೂಡಿಸಿದೆ. ಸದಾ ಚಿತ್ರವಿಚಿತ್ರವಾಗಿರುವ, ದೇಹವನ್ನು ಸರಿಯಾಗಿ ಮುಚ್ಚದ ಉಡುಪುಗಳನ್ನೇ ಧರಿಸಿ ಸುದ್ದಿಯಲ್ಲಿರುವ ಉರ್ಫಿ ಈ ಬಾರಿ ಶಿಸ್ತಾಗಿ ಕುಳಿತು ಹೋಮ ಮಾಡುತ್ತಿರುವುದು ಎಲ್ಲರಲ್ಲೂ ಆಶ್ಚರ್ಯ ತಂದಿದೆ.

ಉರ್ಫಿಯ ಈ ವಿಡಿಯೋಗೆ 'ಘರ್ ವಾಪ್ಸಿ' ಎಂದು ಹಲವರು ಕಾಮೆಂಟ್ ಹಾಕುತ್ತಿದ್ದಾರೆ. ಒಬ್ಬರು ಕಾಮೆಂಟ್ ಮಾಡಿ, 'ಮೊದಲ ಬಾರಿಗೆ ಈಕೆಯ ಪೋಸ್ಟ್ ಲೈಕ್ ಮಾಡಿದೆ' ಎಂದಿದ್ದರೆ, ಮತ್ತೊಬ್ಬರು, 'ಈಗ ನಾನು ನಿಮ್ಮ ಫ್ಯಾನ್ ಆದೆ ಉರ್ಫಿ' ಎಂದಿದ್ದಾರೆ.

ಇನ್ನೊಬ್ಬ ಬಳಕೆದಾರರು ಈ ವಿಡಿಯೋಗೆ ಪ್ರತಿಕ್ರಿಯಿಸಿ, 'ಧರ್ಮ ಯಾವುದೇ ಇರಲಿ, ದೇಶದ ಸಂಭ್ರಮದ್ಲಿ ಪಾಲ್ಗೊಳ್ಳುವ ನಿಮ್ಮ ಈ ಮನಸ್ಥಿತಿ ಸಂತಸ ತಂದಿದೆ' ಎಂದು ಮೆಚ್ಚುಗೆ ಸೂಚಿಸಿದ್ದಾರೆ. 

ಈ ಹಿಂದೆಯೂ ಉರ್ಫಿ ಅಮೃತಸರದ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿ, ಮುಂಬೈನ ಗಣೇಶ ದೇವಾಲಯಕ್ಕೆ ಹೋಗಿ ತಮ್ಮ ದೈವಭಕ್ತಿಯನ್ನು ಪ್ರದರ್ಶಿಸಿದ್ದರು.

ಇಲ್ಲಿದೆ ನೋಡಿ ಉರ್ಫಿಯ ಹೊಸ ವಿಡಿಯೋ..

 

 
 
 
 
 
 
 
 
 
 
 
 
 
 
 

A post shared by Uorfi (@urf7i)

Latest Videos
Follow Us:
Download App:
  • android
  • ios