Asianet Suvarna News Asianet Suvarna News

ಸಿನಿಮಾ ಪ್ರಚಾರ ವೇಳೆ ಲೈಂಗಿಕ ದೌರ್ಜನ್ಯ; ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಅನುಭವ ಬಿಚ್ಚಿಟ್ಟ ಇಬ್ಬರು ನಟಿಯರು

ಸಿನಿಮಾ ಪ್ರಚಾರದ ವೇಳೆ ಕೆಟ್ಟ ಅನುಭವವಾಗಿದೆ ಎಂದು ಮಲಯಾಳಂನ ಇಬ್ಬರು ಖ್ಯಾತ ನಟಿಯರು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಕೇರಳದ ಕ್ಯಾಲಿಕಟ್‌ನ ಹಿಲ್ಟ್ ಮಾಲ್ ನಲ್ಲಿ ಈ ಘಟನೆ ನಡೆದಿದೆ. 

Two Malayalam actresses sexually assaulted during promotions sgk
Author
First Published Sep 28, 2022, 3:04 PM IST

ಸಿನಿಮಾ ಪ್ರಚಾರದ ವೇಳೆ ಕೆಟ್ಟ ಅನುಭವವಾಗಿದೆ ಎಂದು ಮಲಯಾಳಂನ ಇಬ್ಬರು ಖ್ಯಾತ ನಟಿಯರು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಕೇರಳದ ಕ್ಯಾಲಿಕಟ್‌ನ ಹಿಲ್ಟ್ ಮಾಲ್ ನಲ್ಲಿ ಈ ಘಟನೆ ನಡೆದಿದೆ. ಈವೆಂಟ್ ಮುಗಿಸಿ ಹೊರಡುವಾಗ ಲೈಂಗಿಕ ದೌರ್ಜನ್ಯ ವೆಸಗಿದ್ದಾರೆ, ಒಬ್ಬರು ನಟಿ ಆ ವ್ಯಕ್ತಿಯ ಕಪಾಳಕ್ಕೆ ಹೊಡೆಯಲು ಮುಂದಾಗಿದ್ದರು. ಆದರೆ ಅಲ್ಲಿದ್ದವರು ಪರಿಸ್ಥಿತಿ ನಿಯಂತ್ರಿಸಿದರು. ಈ ಬಗ್ಗೆ ನಟಿಯರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಸಾರ್ವಜನಿಕವಾಗಿ ಲೈಂಗಿಕ ದೌರ್ಜನ್ಯ ವೆಸಗಿದ ಬಗ್ಗೆ ಇಬ್ಬರು ನಟಿಯರು ಬೇಸರ ಹೊರಹಾಕಿದ್ದಾರೆ. 

ದೈರ್ಜನ್ಯಕ್ಕೆ ಒಳಕಾದ ನಟಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ, 'ನಾನು ಮತ್ತು ನನ್ನ ಚಿತ್ರತಂಡ ಕ್ಯಾಲಿಕಟ್‌ನ ಮಾಲ್‌ನಲ್ಲಿ ನಮ್ಮ ಹೊಸ ಚಲನಚಿತ್ರವನ್ನು ಪ್ರಚಾರ ಮಾಡುತ್ತಿದ್ದೆವು. ಪ್ರಚಾರ ಕಾರ್ಯಕ್ರಮಗಳು ಕ್ಯಾಲಿಕಟ್‌ನ ಎಲ್ಲಾ ಸ್ಥಳಗಳಲ್ಲಿ ಉತ್ತಮವಾಗಿ ನಡೆದವು ಮತ್ತು ಕ್ಯಾಲಿಕಟ್ ಜನರ ಪ್ರೀತಿಗೆ ಧನ್ಯವಾದಗಳು. ಮಾಲ್ ಜನರಿಂದ ತುಂಬಿ ತುಳುಕುತ್ತಿತ್ತು ಮತ್ತು ಜನಸಂದಣಿಯನ್ನು ನಿರ್ವಹಿಸಲು ಭದ್ರತತಂಡ ಹೆಣಗಾಡುತ್ತಿತ್ತು' ಎಂದು ಈವೆಂಟ್ ಬಗ್ಗೆ ಹೇಳಿದ್ದಾರೆ. 

ಪತ್ರಕರ್ತೆಗೆ ನಿಂದನೆ; 'ಹೋಮ್' ಸಿನಿಮಾ ಖ್ಯಾತಿಯ ನಟ ಶ್ರೀನಾಥ್ ಭಾಸಿ ಅರೆಸ್ಟ್

ಬಳಿಕ ಮುಂದುವರಿಸಿದ ನಟಿ, 'ಈವೆಂಟ್‌ನ ನಂತರ, ನಾನು ಮತ್ತು ನನ್ನ ಸಹ-ನಟಿ ಹೊರಟು ಹೋಗುತ್ತಿದ್ದೆವು ಮತ್ತು ಕೆಲವು ವ್ಯಕ್ತಿಗಳು ನನ್ನ ಸಹೋದ್ಯೋಗಿಯೊಂದಿಗೆ ಅನುಚಿತವಾಗಿ ವರ್ತಿಸಿದರು. ಆದರೆ ವಿಪರೀತ ಜನಸಂದಣಿಯಿಂದಾಗಿ ಯಾರೆಂದು ನೋಡಲು ನೋಡಲು ಅಥವಾ ಪ್ರತಿಕ್ರಿಯಿಸುವ ಸಾಧ್ಯವಾಗಿಲ್ಲ. ಆದರೆ ನನಗೂ ಸಹ ಇದೇ ರೀತಿಯ ಅನುಭವ  ಆಗಿದೆ. ನಾನು ಎದುರಿಸಿದ್ದೇನೆ' ಎಂದು ಬರೆದುಕೊಂಡಿದ್ದಾರೆ. 

'ಯಾರೂ ತಮ್ಮ ಜೀವನದಲ್ಲಿ ಈ ರೀತಿಯ ಕೆಟ್ಟ ಅನುಭವಿಸಬಾರದು ಎಂದು ನಾನು ಬಯಸುತ್ತೇನೆ. ಮಹಿಳೆಯರ ಮೇಲಿನ ದೌರ್ಜನ್ಯಲೆಸಗುವವರ ವಿರುದ್ಧ ಉಗ್ರಮ ಕ್ರಮಕ್ಕೆ ಅವಕಾಶವಿದೆ' ಎಂದು ಬರೆದುಕೊಂಡಿದ್ದಾರೆ. 

ಲೈಂಗಿಕ ದೌರ್ಜನ್ಯ: ಮಲಯಾಳಂ ನಟ ವಿಜಯ್ ಬಾಬು ಬಂಧನ

ಸಹ ನಟಿ ಸಹ ಮಲಾಯಾಳಂನಲ್ಲಿಯೇ ತನ್ನ ಕೆಟ್ಟ ಅನುಭವ ಬಿಚ್ಚಿಟ್ಟಿದ್ದಾರೆ.'ಯಾರೂ ತಮ್ಮ ಜೀವನದಲ್ಲಿ ಈ ರೀತಿಯ ಕೆಟ್ಟ ಪರಿಸ್ಥಿತಿ ಎದುರಿಸಬಾರದು ಎಂದು ನಾನು ಬಯಸುತ್ತೇನೆ' ಎಂದು ಅವರು ಬರೆದಿದ್ದಾರೆ. ಅದೇ ಪೋಸ್ಟ್ ನಲ್ಲಿ ಚಿತ್ರತಂಡ ಆ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗಿದೆ ಎಂದು ಬಹಿರಂಗ ಪಡಿಸಿದ್ದಾರೆ. 

   

Follow Us:
Download App:
  • android
  • ios