ತೃಪ್ತಿ ಡಿಮ್ರಿ ಬರಿಯ ಮೈಮೇಲೆ ಗಾಯಕ ಕೈಹಾಕಿದ್ರೆ ಹೀಗೆ ಮಾಡೋದಾ ನಟಿ? ವಿಡಿಯೋ ವೈರಲ್

 ತೃಪ್ತಿ ಡಿಮ್ರಿ ಮೈಮೇಲೆ ಹೀಗೆ ಕೈಹಾಕಿದ ಗಾಯಕ ಅಮಿ ವಿರ್ಕ್! ನಟಿ ಮಾಡಿದ್ದೇನು ನೋಡಿ- ವಿಡಿಯೋ ವೈರಲ್
 

Tripti Dimris reaction to Ammy trying to place his hand on her shoulder has sparked a storm

ಸಂದೀಪ್ ರೆಡ್ಡಿ ವಂಗಾ ಅನಿಮಲ್​ ಚಿತ್ರದಲ್ಲಿ ನಟ ರಣಬೀರ್​ ಕಪೂರ್​ ಜೊತೆ ಸಂಪೂರ್ಣ ಬೆತ್ತಲಾಗುವ ಮೂಲಕ ಭಾರಿ ಸಂಚಲನ ಸೃಷ್ಟಿಸಿರುವ ನಟಿ ತೃಪ್ತಿ ಡಿಮ್ರಿ. ಕಳೆದ ವರ್ಷದವರೆಗೂ ತೃಪ್ತಿ ಡಿಮ್ರಿ ಎನ್ನುವ ಬಾಲಿವುಡ್​​ ನಟಿ ಇದ್ದಾರೆ ಎನ್ನುವುದೇ ಎಷ್ಟೋ ಮಂದಿಗೆ ತಿಳಿದಿರಲಿಲ್ಲ. ಯಾವಾಗ ಚಿತ್ರದಲ್ಲಿ ಬೆತ್ತಲಾಗಿ ನಟಿಸಿದ್ರೋ ಆಗ ಈಕೆಯ ಹುಡುಕಾಟ ಗೂಗಲ್​ನಲ್ಲಿ ಜೋರಾಯಿತು.  ಪಾಳುಬಿದ್ದಿದ್ದ ಈಕೆಯ ಸೋಷಿಯಲ್​ ಮೀಡಿಯಾ ಖಾತೆ ಸಕ್ರಿಯಗೊಂಡಿತ್ತು.  ದಿಢೀರನೆ ಎಲ್ಲರ ಕಣ್ಣು ಕುಕ್ಕಿದ್ದರು ಈ ಬೆಡಗಿ.  ಅನಿಮಲ್​ ಚಿತ್ರದಲ್ಲಿ ನಟ ರಣಬೀರ್​ ಕಪೂರ್​ ಜೊತೆ ಈಕೆಯ ನಗ್ನ ದೃಶ್ಯಗಳನ್ನು ನೋಡುತ್ತಿದ್ದಂತೆಯೇ ದಿಢೀರನೆ ಫ್ಯಾನ್ಸ್​ ಸಂಖ್ಯೆಯನ್ನೂ ಏರಿಸಿಕೊಂಡರು. ರಾತ್ರೋರಾತ್ರಿ ನ್ಯಾಷನಲ್​  ಕ್ರಷ್​ ಕೂಡ ಆದರು.  ಅನಿಮಲ್​ ಚಿತ್ರದಲ್ಲಿ ಆಲಿಯಾ ಭಟ್​ ಪತಿ ರಣಬೀರ್​ ಕಪೂರ್​ ಜೊತೆ ಬೆತ್ತಲಾದ ಬಳಿಕ ಬ್ಯಾಡ್ ನ್ಯೂಸ್​ ಚಿತ್ರದಲ್ಲಿ ಕತ್ರೀನಾ ಕೈಫ್​ ಪತಿ ವಿಕ್ಕಿ ಕೌಶಲ್​ ಜೊತೆ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡವರು ತೃಪ್ತಿ ಡಿಮ್ರಿ. 

ಇದೀಗ ತೃಪ್ತಿ ಡಿಮ್ರಿಯ ವಿಡಿಯೋ ಒಂದು ವೈರಲ್​ ಆಗುತ್ತಿದೆ. ಇದರಲ್ಲಿ ಗಾಯಕ ಅಮ್ಮಿ ವಿರ್ಕ್​ ಹಾಗೂ ಬಾಲಿವುಡ್​ ನಟ ವಿಕ್ಕಿ ಕೌಶಲ್​ ಅವರನ್ನು ನೋಡಬಹುದು. ತೃಪ್ತಿ ಡಿಮ್ರಿ ಫೋಟೋಗೆ ಪೋಸ್​ ಕೊಡುವ ಸಮಯದಲ್ಲಿ ಗಾಯಕ ಅಮ್ಮಿ ವಿರ್ಕ್​ ಭುಜದ ಮೇಲೆ ಕೈಹಾಕಿದ್ದಾರೆ. ಸಹಜವಾಗಿ ಅಮ್ಮಿ ಅವರು ನಟಿಯ ಮೈಮೇಲೆ ಕೈಹಾಕಿದ್ದಾರೆ. ಆದರೆ ಇದರಿಂದ ನಟಿ ಸಿಟ್ಟಿಗೆದ್ದದ್ದನ್ನು ವಿಡಿಯೋದಲ್ಲಿ ನೋಡಬಹುದು. ಅಸಮಾಧಾನದಿಂದ ಮೈಯನ್ನು ಕೊಡವಿ ಕೈಯನ್ನು ಕೆಳಕ್ಕೆ ಇಳಿಸಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ.

ರಣಬೀರ್​ ಜೊತೆ ಬೆತ್ತಲಾಗಿದ್ದು ಸಾಕಾಗಿಲ್ಲ ಎಂದು ಹೀಗೆಲ್ಲಾ ಮಾಡೋದಾ ನಟಿ ತೃಪ್ತಿ ಡಿಮ್ರಿ! 5 ಲಕ್ಷ ಟೋಪಿ?

ಇದಕ್ಕೆ ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ. ಮಹಿಳೆಯರಾದ್ರೆ ಪುರುಷರ ಮೇಲೆ ಎಲ್ಲಿ ಬೇಕಾದರೂ ಕೈಹಾಕಬಹುದು, ಅದೇ ಪುರುಷರು ಮಾಡಿದ್ರೆ ತಪ್ಪಾ ಎನ್ನುವುದು ನೆಟ್ಟಿಗರ ಪ್ರಶ್ನೆ. ಇಲ್ಲಿ ನಟಿ, ಗಾಯಕನ ಭುಜದ ಮೇಲೆ ಕೈಹಾಕಿದರಂತೆ ಅವರು ಕೂಡ ಭುಜದ ಮೇಲೆ ಕೈಹಾಕಿದ್ದಾರೆ. ಆದರೆ ಅವರು ತೊಟ್ಟ ಡ್ರೆಸ್​ನಲ್ಲಿ ಬರಿ ಮೈ ಮೇಲೆ  ಕೈಹಾಕಿರುವುದು ನಟಿಗೆ ಇರುಸು ಮುರುಸಾಗಿರಬಹುದು. ಅದಕ್ಕಾಗಿ ಕೈಯನ್ನು ಕೊಡವಿದ್ದಾರೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರೇ ಹೆಚ್ಚು. ನಟಿಗೆ ಮೊದಲು ಹೇಗೆ ಡ್ರೆಸ್​ ಹಾಕಿಕೊಳ್ಳಬೇಕು ಎನ್ನುವ ಸೆನ್ಸ್​ ಇರಬೇಕು, ಇಲ್ಲವೇ ಪುರುಷರ ಜೊತೆ ಫೋಟೋಗೆ ಪೋಸ್​  ಕೊಡಬಾರದು. ಇಲ್ಲದೇ  ಹೋದರೆ, ತಾನೊಬ್ಬಳೇ ಪ್ರತ್ಯೇಕ ನಿಂತುಕೊಳ್ಳಬೇಕು, ಆದರೆ ಇದು ಮಾತ್ರ ಪರಮಾವಧಿ ಆಯ್ತು ಎಂದು ನಟಿಯ ವಿರುದ್ಧ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ.

 ಇನ್ನು ನಟಿಯ ಚಿತ್ರಗಳ ಕುರಿತು ಹೇಳುವುದಾದರೆ, ಇತ್ತೀಚೆಗೆ, ಅನೀಸ್ ಬಾಜ್ಮಿ ನಿರ್ದೇಶಿಸಿದ ಬಹು ನಿರೀಕ್ಷಿತ ಭೂಲ್ ಭುಲೈಯಾ 3 ಸೇರಿದಂತೆ ಇನ್ನು ಕೆಲವು  ಚಿತ್ರಗಳಿಗಾಗಿ ತೃಪ್ತಿ  ಗಮನ ಸೆಳೆದಿದ್ದಾರೆ, ಈ ಚಿತ್ರದಲ್ಲಿ ಇವರು  ಕಾರ್ತಿಕ್ ಆರ್ಯನ್ ಜೊತೆಗೆ ನಟಿಸಿದ್ದಾರೆ.  ಇದು 1990 ರ ದಶಕದ ಕಥೆ ಆಧರಿಸಿರುವ  ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ ಚಿತ್ರದಲ್ಲಿ  ಅವರು ಋಷಿಕೇಶದ ವಿದ್ಯಾ ಎಂಬ ಸಣ್ಣ-ಪಟ್ಟಣದ ಹುಡುಗಿಯಾಗಿ ನಟಿಸಿದ್ದಾರೆ ಮತ್ತು ಟ್ರೈಲರ್ ಈಗಾಗಲೇ 90 ರ ದಶಕದ ವೈಬ್ ಮತ್ತು ಹಾಸ್ಯಮಯ ಒಳನೋಟಗಳೊಂದಿಗೆ ಪ್ರೇಕ್ಷಕರ ಗಮನವನ್ನು ಸೆಳೆದಿದೆ. ರಾಜ್‌ಕುಮಾರ್ ರಾವ್ ಅವರನ್ನೂ ಒಳಗೊಂಡಿರುವ ಈ ಚಿತ್ರವು ಒಂದು ಟ್ವಿಸ್ಟ್‌ನೊಂದಿಗೆ ಕ್ಲಾಸಿಕ್ ಪ್ರೇಮಕಥೆಯನ್ನು ರಿಫ್ರೆಶ್ ಮಾಡುವ ಭರವಸೆ ನೀಡುತ್ತದೆ. ಇನ್ನು ವಿಕ್ಕಿ ಕೌಶಲ್​ ಅವರು,  ಲಕ್ಷ್ಮಣ್ ಉಟೇಕರ್ ಅವರ ಛಾವಾದಲ್ಲಿ ನಟಿಸಲು ಸಿದ್ಧರಾಗಿದ್ದಾರೆ, ಅಲ್ಲಿ ಅವರು ಮರಾಠ ದೊರೆ ಮತ್ತು ಛತ್ರಪತಿ ಶಿವಾಜಿಯ ಮಗ ಸಂಭಾಜಿಯ ಪಾತ್ರ ಮಾಡುತ್ತಿದ್ದಾರೆ.  

'ಅನಿಮಲ್'​ನಲ್ಲಿ ಬೆತ್ತಲಾಗಿ ಸಂಕಷ್ಟಕ್ಕೆ ಸಿಲುಕಿದ ತೃಪ್ತಿ ಡಿಮ್ರಿ: ಆಶಿಕಿ-3ಯಿಂದ ಔಟ್​; ಚಿತ್ರತಂಡ ಹೇಳಿದ್ದೇನು?

 
 
 
 
 
 
 
 
 
 
 
 
 
 
 

A post shared by Moxioindia (@moxioindia)

Latest Videos
Follow Us:
Download App:
  • android
  • ios