ಈ ವಾರದ ಆರಂಭದಲ್ಲಿ ಮಿರ್ಜಾಪುರ್ 2 ತಂಡ ಸಿನಿಮಾ ಟ್ರೈಲರ್ ರಿಲೀಸ್ ಮಾಡಿತ್ತು. ಕ್ರಯಂ ಥ್ರಿಲ್ಲರ್‌ನ ಮೊದಲನೇ ಭಾಗ 2018ರಲ್ಲಿ ರಿಲೀಸ್ ಅಗಿತ್ತು. ಮೊದಲನೇ ಸೀಸನ್ ಬಿಡುಗಡೆಯಾದಾಗಿನಿಂದ ವೀಕ್ಷಕಕರು ಮೊದಲನೇ ಸೀಸನ್‌ಗಾಗಿ ಉತ್ಸುಕರಾಗಿದ್ದರು. ಸೀಸನ್ 2 ಬೇಗನೆ ರಿಲೀಸ್ ಮಾಡುವಂತೆ ಫ್ಯಾನ್ಸ್ ಒತ್ತಾಯಿಸಿದ್ದರು. ಆದರೆ ಈಗ ನೆಟ್ಟಿಗರು ಸಿನಿಮಾ ಬಾಯ್‌ಕಾಟ್ ಮಾಡೋಕೆ ಕರೆ ನೀಡಿದ್ದಾರೆ.

ಶೋವಿನ ಪ್ರಮುಖ ಪಾತ್ರಧಾರಿ ಅಲಿ ಫಾಸಜ್ ಮಾಡಿದ ಟ್ವೀಟ್‌ನಿಂದ ಈ ಎಡವಟ್ಟಾಗಿದೆ. 2019ರ ಡಿಸೆಂಬರ್‌ನಲ್ಲಿ ಅಲೊ ಫಾಝಲ್ ಮಾಡಿದ ಟ್ವೀಟ್ ವಿರೋಧಿಸಿದ ನೆಟ್ಟಿಗರು ಮಿರ್ಜಾಪುರ್ 2 ವಿರೋಧಿಸುತ್ತಿದ್ದಾರೆ.

'ಕರೀನಾ ಸುಣ್ಣ, ಕರಿಷ್ಮಾ ಚೀಸ್'..! ಬೇಬೂ ಆ್ಯಕ್ಟಿಂಗ್ ಟೀಕಿಸಿದ ಹಿರಿಯ ನಟ

ಸಿಎಎ ವಿರೋಧಿ ಪ್ರತಿಭಟನೆಗಳು ನಡೆಯುತ್ತಿದ್ದ ಸಂದರ್ಭ ಟ್ವೀಟ್ ಮಾಡಿದ್ದ ನಟ, ಶುರು ಮಜಬೂರಿನೇ ಕಿಯೇಥೇ, ಅಬ್ ಮಜಾ ಆ ರಹಾ ಹೈ(ಆರಂಭ ಅನಿವಾರ್ಯತೆಯಿಂದಾಗಿತ್ತು, ಈಗ ಮಜಾ ಬರ್ತಿದೆ) ಎಂದು ಸಿಎಎ ಪ್ರತಿಭಟನೆ ಬಗ್ಗೆ ಟ್ವೀಟ್ ಮಾಡಿದ್ದು ಭಾರೀ ವಿವಾದ ಸೃಷ್ಟಿಸಿತ್ತು. ಇದೇ ಟ್ವೀಟ್ ಕಾರಣದಿಂದ ಜನರ ಶೋ ನಿಷೇಧಿಸುತ್ತಿದ್ದಾರೆ.

ವಿದ್ಯಾರ್ಥಿಗಳ ನೆರವಿಗೂ ಬಂದ ಸೋನು ಸೂದ್‌: ಕೇಂದ್ರ ಸರ್ಕಾರ ಸ್ಪಂದಿಸುತ್ತಾ..?

ಈ ಬಗ್ಗೆ ಟ್ವೀಟ್ ಮಾಡಿದ ಸೌಮ್ಯಾ ಕುಮಾರಿ ಎನ್ನುವವರು ಇದು ಒಂದು ಒಳ್ಳೆಯ ವೆಬ್ ಸಿರೀಸ್, ಆದರೆ ದೇಶಕ್ಕಿಂದ ದೊಡ್ಡದು ಬೇರೇನಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಮಿರ್ಜಾಪುರ್ 2 ವಿರೋಧಿಸೋಕೆ ಕಾರಣವಿದು. ಹಾಗೂ ನಿಮಗೆ ನೋಡಲೇಬೇಕೆಂದಿದ್ದರೆ ಅಮೆಝಾನ್‌ನಲ್ಲಿ ನೋಡ್ಬೇಡಿ, ಟೆಲಿಗ್ರಾಂನಲ್ಲಿ ನೋಡಿ ಎಂದಿದ್ದಾರೆ ಗೋಪಾಲ್ ಪಂಡಿತ್ ಎಂಬವರು.