ಈ ವಾರ ರೊಮ್ಯಾಂಟಿಕ್‌, ಕಾಮಿಡಿ, ಸಸ್ಪೆನ್ಸ್‌ ಥ್ರಿಲ್ಲರ್‌, ಕ್ರೈಂ ಕುರಿತ ಕತೆಯುಳ್ಳ ಸಿನಿಮಾಗಳು ರಿಲೀಸ್‌ ಆಗುತ್ತಿವೆ. ಹಾಗಾದರೆ ಯಾವ ಸಿನಿಮಾ?  

ವೀಕೆಂಡ್‌ ಬಂದಿದೆ. ಒಟಿಟಿಯಲ್ಲಿ ಯಾವ ಸಿನಿಮಾ ನೋಡಬಹುದು ಎಂದು ವೀಕ್ಷಕರು ಕಾಯುತ್ತಲಿರುತ್ತಾರೆ. ಈ ಬಾರಿ ಯಾವ ಜಾನರ್‌ನ ಸಿನಿಮಾ, ಎಲ್ಲಿ ರಿಲೀಸ್‌ ಆಗಲಿದೆ ಎಂಬ ನಿಮ್ಮ ಕುತೂಹಲಕ್ಕೆ ಉತ್ತರ ಈ ಲೇಖನದಲ್ಲಿದೆ. 

ಕ್ರೈಂ ಬೀಟ್‌- zee5
ಕ್ರೈಂ ಜರ್ನಲಿಸ್ಟ್‌ ಕುರಿತ ಕಥೆ ಈ ಸಿನಿಮಾದಲ್ಲಿದೆ. ಭ್ರಷ್ಟಾಚಾರ, ಪಾಲಿಟಿಕ್ಸ್‌, ರಾಜಕಾರಣದ ಕುರಿತ ವಿಷಯಗಳು ಕೂಡ ಇಲ್ಲಿವೆ. ಸಾಕೀಬ್‌ ಸಲೀಮ್‌, ಸಬಾ ಆಜಾದ್‌, ರಾಹುಲ್‌ ಭಟ್‌ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. 

ಕಂಗನಾ 'ಎಮರ್ಜೆನ್ಸಿ'ಗೆ ಖರ್ಚಾಗಿದ್ದು 75 ಕೋಟಿ, ಕಲೆಕ್ಷನ್ ಮಾತ್ರ 21 ಕೋಟಿ! ನಿರ್ಮಾಪಕನಿಗೆ ದೊಡ್ಡ ಹೊಡೆತ!

ಢಾಕು ಮಹಾರಾಜ್-‌ ನೆಟ್‌ಫ್ಲಿಕ್ಸ್‌
ಚಿತ್ರಮಂದಿರದಲ್ಲಿ ಗೆದ್ದ ಊರ್ವಶಿ ರೌಟೇಲ ಹಾಗೂ ಬಾಲಯ್ಯ ನಟನೆಯ ʼಢಾಕು ಮಹಾರಾಜʼ ಸಿನಿಮಾ ಈಗ ಒಟಿಟಿಯಲ್ಲಿ ಲಭ್ಯವಿದೆ. ಬಾಬಿ ಕೊಲ್ಲಿ ಅವರು ನಿರ್ದೇಶನ ಮಾಡಿದ ಸಿನಿಮಾವಿದು. ಸರ್ಕಾರಿ ಇಂಜಿನಿಯರ್‌ ಅಪರಾಧ ಮಾಡಿ ಢಾಕು ಆಗುವ ಕಥೆ ಇಲ್ಲಿದೆ. ಶ್ರದ್ಧಾ ಶ್ರೀನಾಥ್‌ ಕೂಡ ಈ ಸಿನಿಮಾದಲ್ಲಿದ್ದಾರೆ. 

ಆಫೀಸ್‌ -ಜಿಯೋ ಹಾಟ್‌ಸ್ಟಾರ್‌
ತಮಿಳು ಕಾಮಿಡಿ ಸಿರೀಸ್‌ ಇದಾಗಿದೆ. ಗ್ರಾಮೀಣ ಮಹಿಳೆ ತಹಶೀಲ್ದಾರ ಆಫೀಸ್‌ಗೆ ಹೋದಾಗ ನಡೆಯುವ ಕಥೆ ಇಲ್ಲಿದೆ. 

Oops Ab kya - ಜಿಯೋ ಹಾಟ್‌ಸ್ಟಾರ್‌
ಈ ಸಿನಿಮಾದ ರೊಮ್ಯಾಂಟಿಕ್‌ ಕಾಮಿಡಿ ಇದೆ. ಕಥಾನಾಯಕಿ ತನ್ನ ಬಾಸ್‌ನ ಮಗುವಿನಿಂದಾಗಿ ಗರ್ಭಿಣಿಯಾದಾಗ ಏನೆಲ್ಲ ಆಗುವುದು ಎನ್ನುವುದು ಈ ಚಿತ್ರದಲ್ಲಿದೆ. ಶ್ವೇತಾ ಬಸು ಪ್ರಸಾದ್‌ ಅವರು ಈ ಸಿನಿಮಾದಲ್ಲಿದ್ದಾರೆ. 

ಥಿಯೇಟರ್‌, ಒಟಿಟಿಯಲ್ಲೂ ಧೂಳೆಬ್ಬಿಸಿದ ಸಸ್ಪೆನ್ಸ್‌ ಥ್ರಿಲ್ಲರ್‌ 'Lucky Baskhar' ಸಿನಿಮಾ ಟಿವಿಯಲ್ಲಿ ಪ್ರಸಾರ!

ರೀಚರ್‌ ಸೀಸನ್‌ 3: ಪ್ರೈಂ ವಿಡಿಯೋ 

ಜೀರೋ ಡೇ-ನೆಟ್‌ಫ್ಲಿಕ್ಸ್
ಪಾಲಿಟಿಕಲ್‌ ಥ್ರಿಲ್ಲರ್‌ ಸಿರೀಸ್‌ ಇದಾಗಿದೆ. ಜಾಗತಿಕವಾಗಿ ಮಾರಕ ಸೈಬರ್ ದಾಳಿಯ ಮೂಲವನ್ನು ಹುಡುಕಬೇಕಾಗುವುದು. ಹೀಗಾಗಿ ನಿವೃತ್ತಿಯಿಂದ ಹಿಂದೆ ಸರಿಯುವಂತೆ ಕರೆಸಲಾದ ಅಮೆರಿಕದ ಮಾಜಿ ಅಧ್ಯಕ್ಷರ ಕಥೆ ಇಲ್ಲಿದೆ. 

ಸಿನಿಮಾ ಗೆಲ್ತಿದ್ದಂತೆ ಊರ್ವಶಿಗೆ ಶಾಕ್ ಕೊಟ್ಟ 'ಡಾಕು' ಮಹಾರಾಜ್; ಬಾಲಯ್ಯ ವಿರುದ್ಧ ಕೆರಳಿ ಕೆಂಡವಾದ ರೌತೆಲಾ ಫ್ಯಾನ್ಸ್

 ಸಿಐಡಿ- ನೆಟ್‌ಫ್ಲಿಕ್ಸ್‌
ಭಾರತದ ಐಕಾನಿಕ್, ಲಾಗೆಸ್ಟ್‌ ರನ್ನಿಂಗ್‌ ಕ್ರೈಂ ಸಿರೀಸ್‌ ಇದಾಗಿದೆ. ಇಂದಿನಿಂದ ಹೊಸ ಎಪಿಸೋಡ್‌ಗಳು ಪ್ರಸಾರ ಆಗಲಿವೆ. 

ಮಾರ್ಕೋ- ಆಹಾ
ಉನ್ನಿ ಮುಕುಂದನ್‌ ನಟನೆಯ ಸಿನಿಮಾವಿದು. 

ಕಥಾ ಕಮಮಿಷು- ಸನ್‌ ನೆಕ್ಸ್ಟ್‌ 
ತೆಲುಗು ಭಾಷೆಯ ಕಾಮಿಡಿ ಡ್ರಾಮ ಇದು. ಇಂದ್ರಜಾ, ಕರುಣಾ ಕುಮಾರ್‌ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. 

ಬೇಬಿ ಜಾನ್-ಜಿಯೋ ಸ್ಟುಡಿಯೋಸ್‌
ಮಗಳನ್ನು ಕಾಪಾಡಿಕೊಳ್ಳುವ ಸಲುವಾಗಿ ಜಾನ್‌, ತಾನು ಸತ್ತಿದ್ದೇನೆ ಎಂದು ಹೇಳುತ್ತಾನೆ. ಈ ಕುರಿತು ಕತೆ ಸಾಗುತ್ತಿದೆ.