Asianet Suvarna News Asianet Suvarna News

ಒಟಿಟಿಯಲ್ಲಿದೆ ಪ್ರೀತಿ ರೊಮ್ಯಾನ್ಸ್ ಉತ್ತುಂಗದ 5 ಚಿತ್ರ, ಹೆಡ್ ಫೋನ್ ಹಾಕಿ ಎಚ್ಚರದಿಂದ ವೀಕ್ಷಿಸಿ!

ಒಟಿಟಿಯಲ್ಲಿ ಹಲವು ಚಿತ್ರಗಳು ಲಭ್ಯವಿದೆ. ಈ ಪೈಕಿ ಪ್ರೀತಿ ರೊಮ್ಯಾನ್ಸ್ ಉತ್ತುಂಗದ ಕುರಿತು ಕೆಲ ಚಿತ್ರಗಳು ಒಟಿಟಿಯಲ್ಲಿದೆ. ಈ ಪೈಕಿ 5 ಚಿತ್ರಗಳು  ಭಾರಿ ಸಂಚಲನ ಸೃಷ್ಟಿಸಿದೆ. ಆದರೆ ಈ ಚಿತ್ರ ವೀಕ್ಷಿಸುವಾಗ ಎಚ್ಚರವಿರಲಿ, ಇಷ್ಟೇ ಅಲ್ಲ ಹೆಡ್‌ಫೋನ್ ಧರಿಸಿದ್ದರೆ ಉತ್ತಮ.
 

Top 5 love scene ott Hollywood movies necessary to wear headphones while watching ckm
Author
First Published Sep 9, 2024, 5:21 PM IST | Last Updated Sep 9, 2024, 5:21 PM IST

ಬೆಂಗಳೂರು(ಸೆ.09) ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ವಿವಿಧ ಭಾಷೆ, ಹಲವು ವಿಷಯಗಳ ಕುರಿತು ಚಿತ್ರಗಳು ಯಾವುದೇ ಅಡೆ ತಡೆ ಇಲ್ಲದೆ ವೀಕ್ಷಿಸಲು ಸಾಧ್ಯ. ಈ ಪೈಕಿ ಪ್ರಿತಿ ರೋಮ್ಯಾನ್ಸ್ ಕುರಿತು ಸಾಕಷ್ಟು ಚಿತ್ರಗಳು ಲಭ್ಯವಿದೆ. ಈ ಪೈಕಿ ಹಾಲಿವುಡ್‌ನಲ್ಲಿ ಬಿಡುಗಡೆಯಾಗಿರುವ 5 ಉತ್ತುಂಗದ ಚಿತ್ರಗಳು ಭಾರಿ ಸಂಚಲನ ಸೃಷ್ಟಿಸಿದೆ. ಆದರೆ ಈ ಚಿತ್ರ ವೀಕ್ಷಿಸುವಾಗ ಎಚ್ಚರವಹಿಸಬೇಕು. ಇಷ್ಟೇ ಅಲ್ಲ ಹೆಡ್ ಫೋನ್ ಧರಿಸಿ ಚಿತ್ರ ವೀಕ್ಷಿಸಿದರೆ ಮುಜುಗರ ತಪ್ಪಿಸಬಹುದು. ಟಾಪ್ 5 ಹಾಲಿವುಡ್ ಚಿತ್ರದ ಬೋಲ್ಡ್ ಸೀನ್ ಹಾಗೂ ಧ್ವನಿ ಕುರಿತು ಎಚ್ಚರವಿರುವುದು ಅಗತ್ಯ.

ಗರ್ಲ್ ಟು ಬೈ: 2021ರಲ್ಲಿ ಬಿಡುಗಡೆಯಾದ ಗರ್ಲ್ ಟು ಬೈ ಒಟಿಟಿ ಚಿತ್ರ ವೇಶ್ಯಾವಾಟಿಕೆ ಕುರಿತು ಸ್ಫೋಟಕ ಮಾಹಿತಿ ಒಳಗೊಂಡಿದೆ. ಹಣ ಸಂಪಾದನೆಗಾಗಿ ವೇಶ್ಯಾವಾಟಿಕೆ ಮಾರ್ಗ ಆಯ್ಕೆ ಮಾಡಿಕೊಳ್ಳುವ ಚಿತ್ರದ ಪ್ರಮುಖ ನಾಯಕಿ, ಶ್ರೀಮಂತರನ್ನೇ ಟಾರ್ಗೆಟ್ ಮಾಡಿ ಹಣ ಮಾಡುವ ಈ ಚಿತ್ರ ಬಹುತೇಕ ಬೋಲ್ಡ್ ಸೀನ್‌ಗಳಿಂದ ತುಂಬಿದೆ.

ನಟ ಸೂರ್ಯನ 'ಕಂಗುವಾ' ಟ್ರೈಲರ್: ಇಲ್ಲಿದೆ ನೋಡಲೇಬೇಕಾಗಿರುವುದಕ್ಕೆ 7 ಕಾರಣಗಳು

ಡೀಪ್ ವಾಟರ್: ಈ ಚಿತ್ರ 2022ರಲ್ಲಿ ಬಿಡುಗಡೆಯಾಗಿದೆ. ಇದು ಗಂಡ ಹೆಂಡತಿ ನಡುವಿನ ವಿಚಿತ್ರ ಸಂಬಂಧದ ಕತೆ ಹೊಂದಿದೆ. ಪತ್ನಿಯನ್ನು ಪರ ಪುರುಷರ ಜೊತೆ ಸಂಬಂಧ ಹೊಂದಲು ಪತಿ ಅವಕಾಶ ಮಾಡಿಕೊಡುತ್ತಾನೆ. ಈ ಚಿತ್ರ ಹೆಜ್ಜೆ ಹೆಜ್ಜೆಗೂ ಹಲವು ರಹಸ್ಯಗಳನ್ನು ಹಿಡಿದಿಟ್ಟುಕೊಂಡೇ ಸಾಗುತ್ತದೆ. ಥ್ರಿಲ್ಲಿಂಗ್ ಕಥಾನಕವೇ ಈ ಚಿತ್ರದ ಜೀವಾಳವಾಗಿದೆ.

ಮೈ ಫಾಲ್ಟ್: ಹಾಲಿವುಡ್ ಒಟಿಟಿ ಚಿತ್ರ 2023ರಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ನೋವಾ ಅನ್ನೋ ಹುಡುಗಿ ತನ್ನ ತಾಯಿಯ ಎರಡನೇ ಗಂಡನ ಮನೆಗೆ ಸ್ಥಳಾಂತಗೊಳ್ಳುತ್ತಾಳೆ. ಅಲ್ಲಿ ಶುರುವಾಗ ರೋಮ್ಯಾನ್ಸ್ ಘಟನೆಗಳ ಸುತ್ತ ಈ ಚಿತ್ರ ಹೆಣೆಯಲಾಗಿದೆ. ಈ ಚಿತ್ರದ ಪ್ರಸಕ್ತ ಸಮಾಜದಲ್ಲಿನ ಸಂಬಂಧ, ಮಕ್ಕಳ ಮೇಲೆ ಬೀರುತ್ತಿರುವ ಪರಿಣಾಮಗಳ ಕುರಿತಾಗಿದೆ. ಆದರೆ ಚಿತ್ರದಲ್ಲಿನ ಬೋಲ್ಡ್ ಸೀನ್ ಚಿತ್ರಕ್ಕೆ ಹಾಟ್ ಅನ್ನೋ ಬಿರುದು ನೀಡಿದೆ.

ಡಿಸ್ಒಬಿಡಿಯೆನ್ಸ್:  2017ರಲ್ಲಿ ಬಿಡುಗಡೆಯಾಗಿರುವ ಈ ಚಿತ್ರ ಲೆಸ್‌ಬಿಯನ್ ಹುಡುಗಿ ಹಾಗೂ ಆಕೆಯ ಗೆಳತಿಯ ಕುರಿತಾಗಿದೆ. ಲೆಸ್‌ಬಿಯನ್ ಹುಡುಗಿ ತಮುಲ, ತಳಮಳಗಳನ್ನು ಪ್ರಮುಖವಾಗಿ ಹಿಡಿದಿಟ್ಟ ಚಿತ್ರ ಇದಾಗಿದೆ. ಹಲುವ ರೋಚಕ ಮಾಹಿತಿಗಳೊಂದಿಗೆ ಈ ಚಿತ್ರ ಮುಂದುವರಿಯುತ್ತದೆ.

ಹಸ್ಟ್ಲರ್:  ಈ ಚಿತ್ರ 2019ರಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಕೆಲ ಯುವತಿಯರು ಸ್ಟ್ರಿಪ್ ಕ್ಲಬ್‌ನಲ್ಲಿ ಕೆಲಸ ಮಾಡುತ್ತಿರುತ್ತಾರೆ. ಇಲ್ಲಿ ನಡೆಯುವ ರಹಸ್ಯ ವಿಚಾರಗಳ ಕುರಿತು ಕತೆ ಹಣೆಯಲಾಗಿದೆ. ಕ್ಲಬ್‌ಗಳಲ್ಲಿ ಕೆಲಸ ಮಾಡುವ ಯುವತಿಯರ ಜೀವನ, ಆಸೆ, ಆಕಾಂಕ್ಷೆ ಜೊತೆಗೆ ಕ್ಲಬ್‌ನಲ್ಲಿ ಸಮಯ ಕಳೆಯುವ ಶ್ರೀಮಂತರ ನಡುವಿನ ಕುರಿತ ಚಿತ್ರ ಇದಾಗಿದೆ. ಈ ಟಾಪ್ 5 ಚಿತ್ರಗಳು ಪ್ರೈಮ್ ವಿಡಿಯೋದಲ್ಲಿ ಲಭ್ಯವಿದೆ. 

OTT ಸಿನಿಮಾ, ವೆಬ್‌ ಸಿರೀಸ್‌ಗಳಲ್ಲಿ ಬೋಲ್ಡ್ ಆಗಿ ನಟಿಸಿದ ಟಾಪ್ 7 ನಟಿಯರು
 

Latest Videos
Follow Us:
Download App:
  • android
  • ios