ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಎನ್‌.ಬಿ. ಚಕ್ರವರ್ತಿ ಆರೋಗ್ಯದಲ್ಲಿ ಕೆಲವು ದಿನಗಳಿಂದ ಏರು ಪೇರು ಕಂಡು ಬಂದಿದ್ದು, ಆಗಸ್ಟ್‌ 7ರಂದು ನಿಧನರಾಗಿದ್ದಾರೆ.

ರಾಮ ರಾವ್ ನಿರ್ಮಾಣದ 'ಸಂಪೂರ್ಣ ಪ್ರೇಮಯಾಣಂ' ಚಿತ್ರ ನಿರ್ದೇಶಿಸಿದ ಎನ್‌ ಬಿ ಚಕ್ರಬರ್ತಿ 80ರ ದಶಕದ ಬಹುಬೇಡಿಕೆಯ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ಹಾರರ್‌ ಹಾಗೂ ಸಸ್ಪೆನ್ಸ್‌ ಥ್ರಿಲರ್‌ ಸಿನಿಮಾಗಳನ್ನು ನಿರ್ದೇಶನ ಮಾಡುತ್ತಿದ್ದ ಚಕ್ರವರ್ತಿಯವರು, ಹೆಚ್ಚಾಗಿ ನಂದಮುರಿ ಬಾಲಕೃಷ್ಣ ಅವರು ನಟಿಸಿದ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. 

ಸುಶಾಂತ್ ಆತ್ಮಹತ್ಯೆ ಪ್ರಕರಣ: ತನಿಖೆ ನಡೆದು ಬಂದ ಹಾದಿ ಇದು..!

ಹಿರಿಯ ನಿರ್ದೇಶಕನ ಅಗಲಿಗೆ ತೆಲುಗು ಚಿತ್ರರಂಗ ಸಂತಾಪ ಸೂಚಿಸುತ್ತಿದೆ.  ಕುಟುಂಬಸ್ಥರನ್ನು ಅಗಲಿರುವ ಚಕ್ರವರ್ತಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.

ನಿರ್ದೇಶಕರ ಪತ್ನಿ ಸಾವು:
ಅಷ್ಟೆೇ ಅಲ್ಲದೇ ನಿರ್ದೇಶಕ ಪರುಚೂರಿ ವೆಂಕಟೇಶ್ವರ ರಾವ್‌ ಅವರ ಪತ್ನಿ ವಿಜಯಲಕ್ಷ್ಮಿ ಅವರೂ  ಹೃದಾಯಾಘಾತದಿಂದ ಆಗಸ್ಟ್‌ 7ರಂದು  ಕೊನೆ ಉಸಿರೆಳೆದಿದ್ದಾರೆ. 

2020ರ ಪ್ರಾರಂಭದಿಂದಲೂ ಒಂದಲ್ಲಾ ಒಂದು ಸಂಕಷ್ಟಗಳನ್ನು ಎದುರಿಸುತ್ತಿರುವ ಜನರು ತಮ್ಮ ಆಪ್ತರನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಕಷ್ಟದ ಸಮಯ ಬೇಗ ಮುಗಿಯಲಿ ಎಂದು ದೇವರಲ್ಲಿ ಬೇಡೋಣ.