Asianet Suvarna News Asianet Suvarna News

ಅಲ್ಲೂ ಅರ್ಜುನ್ ಕೂಡ ಲಾಸ್ಟ್ ಬೆಂಚರ್ ಅಂತೆ, ಮಾರ್ಕ್ಸ್ ಕಮ್ಮಿ ತೆಗೆಯೋರಿಗೆ ಸಮಾಧಾನ ಮಾತಿದು!

ಈಗೀಗ ಶಿಕ್ಷಣವೆಂದರೆ ಮಾರ್ಕ್ಸ ಮೇಲೆ ವಿದ್ಯಾರ್ಥಿಗಳ ಮೌಲ್ಯ ಅಳೆಯುವಂತಾಗಿದೆ. ಯಾರು ಕಡಿಮೆ ಅಂಕ ತೆಗೆಯುತ್ತಾನೋ ಅವನಿಗೇ ಭವಿಷ್ಯವೇ ಇಲ್ಲವೆಂಬಂತೆ ಬಿಂಬಸಲಾಗುತ್ತಿದೆ. ಆದರೆ....

Tollywood stylish star Allu Arjuna students life achievement kvn
Author
First Published Aug 14, 2024, 7:28 PM IST | Last Updated Aug 14, 2024, 7:28 PM IST

ಅಲ್ಲು ಅರ್ಜುನ್. ತೆಲುಗು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟ. ಸ್ಟೈಲ್ ಅಂದ್ರೆ ಅಲ್ಲು, ಅಲ್ಲು ಅಂದ್ರೆ ಸ್ಟೈಲ್ ಅನ್ನುವಷ್ಟರ ಮಟ್ಟಿಗೆ ತಮ್ಮ ಫ್ಯಾಷನ್ ಸೆನ್ಸ್‌ನಿಂದಲೇ ಅಭಿಮಾನಿಗಳ ಹೃದಯದಲ್ಲಿ ಜಾಗ ಗಿಟ್ಟಿಸಿಕೊಂಡ ನಟ. ಇವರಿದ್ದಾರೆಂದರೆ ಅಲ್ಲಿ ಜನರು ಹುಚ್ಚೆದ್ದು ಸೇರುತ್ತಾರೆ. ಅವರನ್ನು ನೋಡುವುದೇ ಸಂಭ್ರಮ ಅಭಿಮಾನಿಗಳಿಗೆ. 

ಇಂಥ ಮಹಾನ್ ನಟ, ಚಿತ್ರವೊಂದಕ್ಕೆ ಕೋಟಿಗಟ್ಟಲೆ ಸಂಭಾವನೆ ಪಡೆಯೋ ಅಲ್ಲು ಮಾತನಾಡುತ್ತಾರೆಂದರೆ ಜನರು ಕಣ್ಣು ಬಾಯಿ ಬಿಟ್ಕೊಂಡು ಕೇಳಿಸಿಕೊಳ್ಳುತ್ತಾರೆ. ದೊಡ್ಡ ಜನ ಸಮೂಹವನ್ನೇ ಮಂತ್ರ ಮುಗ್ಧರನ್ನಾಗಿಸುವ ಅಲ್ಲು ತಮ್ಮ ವಿದ್ಯಾರ್ಥಿ ಜೀವನದ ಸೀಕ್ರೆಟ್‌ವೊಂದನ್ನು ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದರು. ಇಷ್ಟೆಲ್ಲಾ ಯಶಸ್ಸನ್ನು ತಮ್ಮ ಮಡಿಲಲ್ಲಿ ತುಂಬಿಕೊಂಡಿರುವ ಅರ್ಜುನ್ ವಿದ್ಯಾರ್ಥಿ ಜೀವನದಲ್ಲಿ ಔಟ್ ಆಫ್ ಔಟ್ ಮಾರ್ಕ್ಸ್ ತೆಗೆಯುವಂಥ ಪ್ರತಿಭಾವಂತ ವಿದ್ಯಾರ್ಥಿಯಲ್ಲವಂತೆ. 

ಮೊದಲ ರ್ಯಾಂಕ್ ಇರಲಿ, ಕಡೆಯಿಂದ ಸೆಕೆಂಡ್ ಬಂದರೂ ಹೆಚ್ಚು ಎನ್ನುವಂತಿರಿದ್ದರಂತೆ. ಸಾಲದಿದ್ದಕ್ಕೆ ಲಾಸ್ಟ್ ಬೆಂಚ್ ಸ್ಟುಡಿಯಸ್ ಸ್ಟುಡೆಂಟ್ ಅಂತೆ. ಓದಿದ್ದು ತಲೆಗೆ ಹತ್ತಿದ್ದು ಅಷ್ಟಕ್ಕಷ್ಟೇ ಎನ್ನುತ್ತಾರೆ. ಒಟ್ಟಿನಲ್ಲಿ ಪೋಲಿ ವಿದ್ಯಾರ್ಥಿ ಎಂಬ ಹಣೆಪಟ್ಟಿ ಕಟ್ಟಿಕೊಂಡವರೆಂದರೆ ಸರಿ ಆಗುತ್ತೆ. ಆದರೆ, ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮವೆಂದರೆ ಮಾತ್ರ ಇವರೇ ಫಸ್ಟ್ ಅಂತೆ. 

ಪ್ರಿಯಾಂಕ ಉಪೇಂದ್ರ: ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಾಲಕ್ಷ್ಮಿಯಂತೆ ಕಂಗೊಳಿಸಿದ ನಟಿ!

ಅರ್ಜುನ್ ಟೀಂನಲ್ಲಿದ್ದಾರೆಂದರೆ ಫಸ್ಟ್ ಪ್ರೈಸ್ ಗ್ಯಾರಂಟಿ ಎನ್ನೋ ಕಾನ್ಪೆಡೆನ್ಸ್ ಇಡೀ ಕಾಲೇಜಿಗೆ ಇರ್ತಿತ್ತಂತೆ. ಅದೇ ವೇಸ್ಟ್ ವಿದ್ಯಾರ್ಥಿ ಎಂಬ ಹಣೆ ಪಟ್ಟಿ ಕಟ್ಕೊಂಡು ಅಲ್ಲು ಅರ್ಜುನ್ ಪುಟ್ಟಬೊಮ್ಮನಂಥ ಹಾಡಿಗೆ ಸ್ಟೆಪ್ಸ್ ಹಾಕೋದು ವರ್ಷಾನುಗಟ್ಟಲೆ ಟ್ರೆಂಡ್ ಆಗುತ್ತೆ. ಪುಷ್ಪ 2 ಯಾವಾಗ ರಿಲೀಸ್ ಆಗುತ್ತೋ ಅಂತ ಸಿನಿ ಪ್ರೇಮಿಗಳು ತುದಿಗಾಲಲ್ಲಿ ನಿಂತು ಕಾತುರದಿಂದ ಕಾಯುವಂತೆ ಆಗಿದೆ. ಹಾಕೋ ಬಟ್ಟೆ ನೋಡಲೆರಡು ಕಣ್ಣು ಸಾಲದೆಂಬಂತೆ ಸ್ಟೈಲ್ ಆಗಿರುತ್ತಾರೆ. ಆ ಫಿಸಿಕ್, ಹೇರ್ ಸ್ಟೈಲ್, ಮುತ್ತು ಉದುರಿಸುವಂಥ ಮಾತುಗಳೆಲ್ಲವೂ ಅಭಿಮಾನಿಗಳನ್ನು ಸೂಜಿಗಲ್ಲಿನಂತೆ ಎಳೆಯುವಂತೆ ಮಾಡುವಲ್ಲಿ ಅಲ್ಲು ಯಶಸ್ವಿ ಎಂದರೆ ತಪ್ಪಾಗೋಲ್ಲ. 

ಅಲ್ಲು ಹೇಳುವಂತೆ ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಸರಿಯಾಗಿ ಗುರುತಿಸಿ ನೀರೆರೆಯಬೇಕು. ಕೆಲವರಿಗೆ ಅದನ್ನು ಅನಾವರಣಗೊಳಿಲು ಶ್ವಲ್ಪ ಶ್ರಮ ಸಾಕಾದರೆ, ಮತ್ತೆ ಕೆಲವರಿಗೆ ತುಸು ಹೆಚ್ಚು ಶ್ರಮ ಬೇಕಾಗಬಹುದು. ಆದರೆ, ಯಶಸ್ಸು ಮಾತ್ರ ಖಂಡಿತಾ ಬೆನ್ನತ್ತಿ ಬರುತ್ತೆ ಎನ್ನೋದು ಅಲ್ಲು ಅರ್ಜುನ್ ಅಭಿಪ್ರಾಯ.

ಪಾಲಕ್​ಗೆ ನಿಮಿಷ ನಿಮಿಷಕ್ಕೂ ಒಬ್ಬ ಬೇಕು, ಅಫೇರ್ಸ್​ಗೆ ಲೆಕ್ಕವೇ ಇಲ್ಲ: ಮಗಳ ಬಗ್ಗೆ ಕಿರುತೆರೆ ನಟಿ ಇದೆಂಥ ಹೇಳಿಕೆ!

ಇಬ್ಬರ ಮಕ್ಕಳ ತಂದೆಯಾಗಿರುವ ಅಲ್ಲು ಪತ್ನಿ ಸ್ನೇಹಾ ರೆಡ್ಡಿ. ಅಲ್ಲು ಅರಹಾ ಎಂಬ ಮಗಳು ಈಗಾಗಲೇ ಚಿತ್ರರಂಗ ಹಾಗೂ ಮಾಡೆಲ್ ಉದ್ಯಮದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾಳೆ. ಅಲ್ಲದೇ 10 ವರ್ಷದ ಅಯಾನ್ ಎಂಬ ಮಗನೂ ಇದ್ದಾನೆ. ತೆಲಗು ಸಿನಿಮಾ ಇಂಡಸ್ಟ್ರಿಯಲ್ಲಿ ಅಲ್ಲು ಹಾಗೂ ಕೊಡಿನೇಲಾ ಕುಟುಂಬವೇ ಅತ್ಯಂತ ಸಿರಿವಂತವಾಗಿದ್ದು, ಟಾಲಿವುಡ್‌ನಲ್ಲಿ ಪ್ರಭಾವಿ ಕುಟುಂಬಗಳೆಂಬ ಖ್ಯಾತಿಗೆ ಪಾತ್ರವಾಗಿವೆ. 

ಈಗಾಗಲೇ ಪುಷ್ಪಾ 1 ರಿಲೀಸ್ ಆಗಿ ಭರ್ಜರಿ ಸಕ್ಸಸ್ ಕಂಡಿರುವ ಚಿತ್ರದ ಮತ್ತೊಂದು ಭಾಗ ರಿಲೀಸ್ ಆಗುತ್ತಿದ್ದು, ಸ್ಯಾಂಡಲ್‌ವುಡ್ ನಟಿ ರಶ್ಮಿಕಾ ಮಂದಣ್ಣ ನಟಿಯಾಗಿ ಅಭಿನಯಿಸುತ್ತಿದ್ದಾರೆ. ಅಲ್ಲದೇ ವೈಕುಂಠಪುರಂ, ಸೂರ್ಯ, ಎವಡು ಸೇರಿ ಅನೇಕ ಸೂಪರ್ ಹಿಟ್ಸ್‌ನಲ್ಲಿ ಅಲ್ಲು ಅರ್ಜುನ್ ನಟಿಸಿದ್ದು, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಇಂಥ ಯಶಸ್ವಿ ನಟನೇನೂ ವಿದ್ಯಾರ್ಥಿ ಜೀವನದಲ್ಲಿ ಅತ್ಯುತ್ತಮ ವಿದ್ಯಾರ್ಥಿಯಾಗಿರಲಿಲ್ಲ ಎನ್ನೋದು ಮುಖ್ಯ. ಅಂದ್ರೆ ಮಾರ್ಕ್ಸ್ ಮಾತ್ರ ಜೀವನದ ಸಾಧನೆಗೆ ಮಾನದಂಡವಲ್ಲವೆಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಹಾಗಂತ ಹಾರ್ಡ್ ವರ್ಕ್, ಕೌಶಲ್ಯ ಅಭಿವೃದ್ಧಿ ಕಡೆ ಗಮನ ಹರಿಸೋದು ಮಾತ್ರ ನಿಲ್ಲಿಸಬಾರದು. 
 

Latest Videos
Follow Us:
Download App:
  • android
  • ios